ಬೆಂಗಳೂರು,ಜೂ.25-ಕಲ್ಯಾಣಿಗೆ ಬಿದ್ದು ತಾಯಿ ಮಗಳು ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಾಗಡಿಯಲ್ಲಿ ನಡೆದಿದೆ.
ಮಾಗಡಿಯ ಮಂಗಳಮ್ಮ (35) ಮತ್ತು ಆಕೆಯ ಪುತ್ರಿ ಸನ್ನಿಧಿ (6) ಮೃತಪಟ್ಟವರು.
ಮಾಗಡಿಯ ಗುಂಡಯ್ಯನ ಕಲ್ಯಾಣಿಗೆ ಹೋಗಿದ್ದ ವೇಳೆ ಇವರಿಬ್ಬರೂ ಆಯಾತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.