ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಆದಾಗಲೇ 75 ಕೋಟಿ ಕ್ಲಬ್ ಸೇರಿದೆ. ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರೂ ಧರ್ಮ ಮತ್ತು ಚಾರ್ಲಿ ನಂಟನ್ನು ಮೆಚ್ಚಿಕೊಂಡಿದ್ದಾರೆ. ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿರುವ ಚಿತ್ರದ ಬಾಂಡಿಂಗ್ ಸಾಂಗ್ ಬಿಡುಗಡೆ ಆಗಿದೆ.
ಚಾರ್ಲಿ ಟೀಂ ಬಾಂಡಿಂಗ್ ಸಾಂಗ್ ಅನ್ನು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದೆ. ಈ ಕುರಿತು ರಕ್ಷಿತ್ ಶೆಟ್ಟಿ ತಮ್ಮ ಇನ್ಸಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಹಾಡಿನಲ್ಲಿ ಧರ್ಮ ಚಾರ್ಲಿ ನಡುವಿನ ಸುಮಧುರ ಸಂಬಂಧವನ್ನು ತೋರಿಸಲಾಗಿದೆ.