ಬೆಂಗಳೂರು: ಬೆಂಗಳೂರಿನ ರಸ್ತೆಗಳಲ್ಲಿ ವಾಹನ ತಪಾಸಣೆ ಕೈಗೊಳ್ಳುತ್ತಿದ್ದ ಟ್ರಾಫಿಕ್ ಪೊಲೀಸರಿಗೆ ಡಿಜಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.
ಕಂಡ ಕಂಡಲ್ಲಿ ವಾಹನ ಸವಾರರನ್ನು ತಡೆದು ತಪಾಸಣೆ ನಡೆಸುವಂತಿಲ್ಲ. ಕೇವಲ ಡ್ರಿಂಕ್ & ಡ್ರೈವ್ ವಾಹನಗಳನ್ನು ಮಾತ್ರ ತಪಾಸಣೆಗೆ ಒಳಪಡಿಸಬೇಕು ಎಂದು ಟ್ವಿಟರ್‌ನಲ್ಲಿ ಸೂಚನೆ ನೀಡಿದ್ದಾರೆ.
ಹೀಗಾಗಿ ಸಿಕ್ಕಸಿಕ್ಕಲ್ಲಿ ಬೈಕ್ ಸೈಡಿಗೆ ಹಾಕಿ, ಕಾರು ಸೈಡಿಗೆ ಹಾಕಿ ಎಂದು ಸವಾರರಿಗೆ ಟ್ರಾಫಿಕ್ ಪೊಲೀಸರು ಹೇಳುವಂತಿಲ್ಲ. ʻಡ್ರಿಂಕ್ & ಡ್ರೈವ್ ಮಾಡುವ ವಾಹನಗಳಿಗೆ ಮಾತ್ರ ತಪಾಸಣೆʼ ಮಾಡುವಂತೆ ಜೊತೆ ರೂಲ್ಸ್ ಬ್ರೇಕ್ ಮಾಡುವ ವಾಹನಗಳ ಮೇಲೆ ಮಾತ್ರ ನಿಗಾ ಇಡಿ ಎಂದು ಟ್ರಾಫಿಕ್ ಪೊಲೀಸರಿಗೆ ಸೂಚನೆ ನೀಡಲಾಗಿದೆ.
Previous Articleಹುಡುಗಿ ಕೈ ಕೊಟ್ಟಿದ್ದಕ್ಕೆ ಪ್ರಾಣ ಬಿಟ್ಟ..
Next Article ಕಾಂಗ್ರೆಸ್ ಗೆ ಬಿಜೆಪಿ ಪ್ರಶ್ನೆ.. !