ಖ್ಯಾತ ಮಲಯಾಳಿ ನಟ ಎನ್.ಡಿ.ಪ್ರಸಾದ್(43) ತಮ್ಮ ಮನೆಯ ಹೊರಗಿರುವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೃತ ನಟನಿಗೆ ಪತ್ನಿ ಹಾಗು ಇಬ್ಬರು ಮಕ್ಕಳಿದ್ದರು ಎಂದು ತಿಳಿದು ಬಂದಿದೆ.
ಕೊಚ್ಚಿ ಸಮೀಪ ಪ್ರಸಾದ್ ವಾಸವಾಗಿದ್ದರು. ಜೂನ್ 25ರಂದು ಸಂಜೆ 6.30ರ ಸುಮಾರಿಗೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಕ್ಕಳು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಪ್ರಸಾದ್ ನೇಣಿಗೆ ಶರಣಾಗಿದ್ದಾರೆ. ಮನೆಗೆ ಬಂದಾಗ ತಂದೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಮಕ್ಕಳು ಆಘಾತಗೊಂಡು ನೆರೆಯವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೌಟುಂಬಿಕ ಕಲಹ ಘಟನೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೆ ಪ್ರಸಾದ್ ಒಳಗಾಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖಳನಟನಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಪ್ರಸಾದ್, ಹಲವು ವರ್ಷಗಳಿಂದ ಹೆಂಡತಿಯಿಂದ ದೂರವಿದ್ದರೆನ್ನಲಾಗಿದೆ. ‘ಇಬಾ’ ಮೊದಲಾದ ಚಿತ್ರಗಳಲ್ಲಿ ಅವರು ಬಣ್ಣ ಹಚ್ಚಿದ್ದರು. 2016ರಲ್ಲಿ ತೆರೆಗೆ ಬಂದ ‘ಆ್ಯಕ್ಷನ್ ಹೀರೋ ಬಿಜು’ ಚಿತ್ರದಿಂದ ಪ್ರಸಾದ್ ಅವರನ್ನು ಜನರು ಹೆಚ್ಚು ಗುರುತಿಸಿದರು.
ಇನ್ನು ಈ ಹಿಂದೆ ಡ್ರಗ್ ಪ್ರಕರಣದಲ್ಲಿ ಇವರ ಹೆಸರು ಸೇರಿಕೊಂಡಿತ್ತು. ಇವರ ಬಳಿ ಡ್ರಗ್ಸ್ ಪತ್ತೆಯಾದ ಕಾರಣಕ್ಕಾಗಿ ಬಂಧನ ಕೂಡ ಆಗಿತ್ತು.
Previous Articleಕೊರೋನಾ ಬಳಿಕ ಮಕ್ಕಳಲ್ಲಿ ಮೈಗ್ರೇನ್ ಸಮಸ್ಯೆ
Next Article ಬನಾರಸ್ ಚಿತ್ರದ ಮಾಯಗಂಗೆ ಹಾಡು ರಿಲೀಸ್