ನವದೆಹಲಿ,ಜೂ.28- ಪಂಜಾಬ್ ಕೇಡರ್‌ನ 1987ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ದಿನಕರ್ ಗುಪ್ತಾ ಅವರು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಯೋಗೀಶ್ ಚಂದ್ರ ಮೋದಿ ಅವರಿಂದ ತೆರವಾದ ಸ್ಥಾನ ತುಂಬಿರುವ ಗುಪ್ತಾ, ಮಾರ್ಚ್ 31, 2024 ರವರೆಗೆ ಎನ್ ಐಎ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಪಂಜಾಬ್ ಪೊಲೀಸ್ ಮಾಜಿ ಡಿಜಿಪಿ ಆಗಿದ್ದ ಇವರು ಅವರು ಪ್ರಸ್ತುತ ಪಂಜಾಬ್ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್‌ನ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಎರಡು ವರ್ಷ ಏಳು ತಿಂಗಳು ಪಂಜಾಬ್ ಡಿಜಿಪಿಯಾಗಿ ಸೇವೆ ಸಲ್ಲಿಸಿದ ಇವರು ಕೇಂದ್ರ ಮಟ್ಟದ ಹುದ್ದೆಗಾಗಿ ಎದುರು ನೋಡುತ್ತಿದ್ದರು.
ಗುಪ್ತಾ ಅವರು ಎನ್‌ಐಎ ಹೊಸ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರ ಮುಂದೆ ಹಲವು ಸವಾಲುಗಳಿವೆ. ಹಲವು ಪ್ರಮುಖ ಪ್ರಕರಣಗಳ ತನಿಖೆ ನಡೆಸುತ್ತಿರುವ ಎನ್‌ಐಎ, ಈ ಪ್ರಕರಣಗಳ ಸತ್ಯಾಸತ್ಯತೆ ಬಯಲಿಗೆಳೆಯಬೇಕಾದ ಜವಾಬ್ದಾರಿ ಗುಪ್ತಾ ಅವರ ಮೇಲಿದೆ.
Previous Articleಬರಿಗಾಲಲ್ಲಿ ಕಲ್ಲಿನ ಗೋಡೆ ಏರಿದ ಮಂಗಳೂರು ಕಮೀಷನರ್
Next Article 222 ಕಾಳಿಂಗ ಸರ್ಪ ರಕ್ಷಣೆ ಮಾಡಿದ ಸ್ನೇಕ್ ಜೋಯ್..!!