ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನಾಧಾರಿತ ಚಲನಚಿತ್ರ ಶೀಘ್ರದಲ್ಲೇ ಬೆಳ್ಳಿ ಪರದೆಯ ಮೇಲೆ ಬರುತ್ತಿದೆ. ‘ಮೇನ್ ರಹೂನ್ಯಾ ನಾ ರಹೂನ್, ಯೇ ದೇಶ್ ರೆಹನಾ ಚಾಹಿಯೇ – ಅಟಲ್’ ಎಂಬ ಶೀರ್ಷಿಕೆಯ ಈ ಚಲನಚಿತ್ರವು ಉಲ್ಲೇಖ್ ಎನ್ಪಿ ಅವರ ಪುಸ್ತಕ ‘ದಿ ಅನ್ಟೋಲ್ಡ್ ವಾಜಪೇಯಿ: ಪೊಲಿಟಿಶಿಯನ್ ಅಂಡ್ ಪ್ಯಾರಡಾಕ್ಸ್’ ಆಧಾರಿತವಾಗಿದೆ.ಈ ಹಿಂದೆ “ಪಿಎಂ ನರೇಂದ್ರ ಮೋದಿ” ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದ ಸಂದೀಪ್ ಸಿಂಗ್ ಈ ಚಿತ್ರ ನಿರ್ಮಾಣ ಮಾಡಲಿದ್ದಾರೆ.
2023ಕ್ಕೆ ಸೆಟ್ಟೇರಲಿರುವ ಈ ಸಿನಿಮಾದ ಪೂರ್ವತಯಾರಿ ನಡೆದಿದೆ. 2023ರರ ಡಿಸೆಂಬರ್ನಲ್ಲಿ ಚಿತ್ರ ಬಿಡುಗಡೆ ಆಗಲಿದೆ.
ಸಧ್ಯ ಸಿನಿಮಾ ನಿರ್ಮಾಪಕರ ವಿಚಾರ ಮಾತ್ರ ತಿಳಿದಿದ್ದು ನಿರ್ದೇಶಕ,ನಟ, ನಟಿಯರ ಬಗ್ಗೆ ಚಿತ್ರ ತಂಡ ಮಾಹಿತಿ ಹಂಚಿಕೊಂಡಿಲ್ಲ.
Previous Articleಸಿಲಿಂಡರ್ ಸ್ಪೋಟ : ಐವರು ದುರ್ಮರಣ..
Next Article Jolly ride ಗಾಗಿ ಬೈಕ್ ಕಳ್ಳತನ..