ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಶನಿವಾರ(ಜು.2) ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚಿಸಲಿದ್ದಾರೆ. ಬಿಜೆಪಿ ಬೆಂಬಲ ಪಡೆದು ಏಕನಾಥ್ ಶಿಂಧೆ ಸರ್ಕಾರ ರಚಿಸಿದ್ದಾರೆ. ಶಿಂಧೆ ಬಣದಲ್ಲಿ 40ಕ್ಕೂ ಹೆಚ್ಚು ಶಾಸಕರು ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರ ಅಗತ್ಯ ಇರುವ ಶಾಸಕರ ಬಲ ಹೊಂದಿದೆ. ಇದರಿಂದ ಸದನದಲ್ಲಿ ಸುಲಭವಾಗಿ ವಿಶ್ವಾಸ ಮತ ಸಾಬೀತುಪಡಿಸುವ ವಿಶ್ವಾಸ ಹೊಂದಿದೆ.
ಮುಖ್ಯಮಂತ್ರಿ ಪದವಿ ನಿರೀಕ್ಷಿಸುತ್ತಿದ್ದ ದೇವೇಂದ್ರ ಫಡ್ನವೀಸ್ ಉಪ ಮುಖ್ಯಮಂತ್ರಿಯಾಗಿ ಈಗಾಗಲೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬಹುಮತ ಸಾಬೀತುಪಡಿಸಿದ ಬಳಿಕ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಲು ನೂತನ ಸರ್ಕಾರ ಮುಂದಾಗಲಿದೆ.
Previous Articleದೇಶದಲ್ಲಿ 17,070 ಜನರಿಗೆ ಕೊರೋನಾ ಸೋಂಕು, 23 ಜೀವಹಾನಿ
Next Article ವಾಣಿಜ್ಯ ಸಿಲಿಂಡರ್ ದರ ಇಳಿಕೆ