‘ಆರಟ್ಟು’ ಸಿನಿಮಾವನ್ನು ಹಾಡಿ ಹೊಗಳಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವ್ಯಕ್ತಿ ತನಗೆ ನಿರಂತರ ಕಿರುಕುಳ ನೀಡುತ್ತಿದ್ದ ಎಂದು ನಟಿ ನಿತ್ಯಾ ಮೆನನ್ ಬಹಿರಂಗಪಡಿಸಿದ್ದಾರೆ. ಅವರ ಇತ್ತೀಚಿನ ಚಿತ್ರ ’19(1)(ಎ)’ ಗೆ ಸಂಬಂಧಿಸಿದಂತೆ ಸಂದರ್ಶನವೊಂದರಲ್ಲಿ ನಟಿ ಪ್ರತಿಕ್ರಿಯಿಸಿದ್ದಾರೆ. ಆ ವ್ಯಕ್ತಿ ತಾನು ನಿತ್ಯಾ ಮೆನನ್‌ನನ್ನು ಮದುವೆಯಾಗಲು ಬಯಸುತ್ತೇನೆ ಮತ್ತು ನಾನು ಅವಳನ್ನು ಪ್ರೀತಿಸುತ್ತಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದ. ಇದರೊಂದಿಗೆ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಆಕೆಗೆ ಅಪಖ್ಯಾತಿ ಬರುವಂತೆ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾನೆ. ನಿತ್ಯಾ ಮೆನನ್ ಗೆ ಆತ ಹಲವಾರು ಬಾರಿ ಕಿರುಕುಳ ನೀಡಿದ್ದರ ಮತ್ತು ಮಾಧ್ಯಮಗಳಲ್ಲಿ ತನ್ನ ಬಗ್ಗೆ ಮಾತನಾಡುವುದನ್ನು ಕೇಳಿ ನಟಿ ಆಘಾತಕ್ಕೊಳಗಾಗಿದ್ದಾರೆ. ಎಲ್ಲರೂ ಅವನ ವಿರುದ್ಧ ದೂರು ನೀಡುವಂತೆ ಕೇಳಿದ್ದರು. ಅವನು ನನ್ನ ಹೆತ್ತವರನ್ನು ಸಹ ಬಿಡಲಿಲ್ಲ. ನನ್ನ ತಾಯಿ ಕಿಮೋಥೆರಪಿ ನಂತರ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾಗ ಅವನು ನಮಗೆ ತೊಂದರೆ ನೀಡಿದ ಎಂದು ನಿತ್ಯಾ ಹೇಳಿದರು.
ಅವನು ನಿರಂತರವಾಗಿ ಬೇರೆ ಬೇರೆ ನಂಬರ್‌ಗಳಿಂದ ತನಗೆ ಕರೆ ಮಾಡಿದ್ದರಿಂದ ತಾನು ಹಲವಾರು ನಂಬರ್‌ಗಳನ್ನು ಬ್ಲಾಕ್ ಮಾಡಬೇಕಾಯಿತು ಎಂದು ನಿತ್ಯಾ ಹೇಳಿದ್ದಾರೆ. ಅವನಿಂದಾಗಿ ಸುಮಾರು 30 ಸಂಖ್ಯೆಗಳನ್ನು ಬ್ಯಾನ್ ಮಾಡಿದೆ ಎಂದು ಅವರು ಹೇಳಿದರು. ನಿತ್ಯಾ ಮೆನನ್ ಮಾತನಾಡಿರುವುದು ಸಂತೋಷ್ ವಾರ್ಕಿ ಎನ್ನುವವನ ವಿರುದ್ಧ ಆಗಿದ್ದು ಆತ ಸಿನಿಮಾ ವಿಮರ್ಶೆ ಮೂಲಕ ಹೆಸರುವಾಸಿಯಾಗಿದ್ದ.
Previous Articleಸಿಟಿ ರೈಲ್ವೆ ನಿಲ್ದಾಣದಲ್ಲಿ 112 ಕೋಟಿ ಮೌಲ್ಯದ ಹೆರಾಯಿನ್ ವಶ
Next Article ರಾಮ್ ಜೀ ಗ್ಯಾಂಗ್ ನ ಇಬ್ಬರು ಆರೋಪಿಗಳ ಬಂಧನ