ನಾನು ಚಿಕ್ಕವನಿದ್ದಾಗ ಜನರು ಕಾಸಿಗಾಗಿ ಪರದಾಡುತ್ತಿದ್ದುದನ್ನು ನೋಡುತ್ತಿದ್ದೆ, ಬಡ ಜನರು ಶ್ರೀಮಂತರ ಬಳಿ ವಾಯಿದೆ ಬಡ್ಡಿಗೆ ಚಿನ್ನಾಭರಣಗಳನ್ನು ಅಡವಿಟ್ಟು, ನಿಗದಿಪಡಿಸಿದ ದಿನದೊಳಗೆ ಸಾಲ ತೀರಿಸಲಾಗದೆ ಆಭರಣಗಳನ್ನು ಕಳೆದುಕೊಳ್ಳುತ್ತಿದ್ದರು. ಕೃಷಿ ಸಾಲ ತೀರಿಸದವರ ಮನೆಗಳನ್ನು ಜಪ್ತಿ ಮಾಡಲಾಗುತ್ತಿತ್ತು. ಇದನ್ನೆಲ್ಲ ನೋಡಿ ನನ್ನ ಮನಸ್ಸು ಮರುಗುತ್ತಿತ್ತು. ರೈತರ, ರೈತ ಕಾರ್ಮಿಕರ, ನಗರದ ಬಡ ಜನರ ನೋವು ನಿವಾರಿಸಬೇಕೆನ್ನಿಸುತ್ತಿತ್ತು. ಸಹಕಾರಿ ಕ್ಷೇತ್ರದಿಂದಲೇ ಇದು ಸಾಧ್ಯ ಎನ್ನುವುದು ಬೆಳೆಯುತ್ತ ಬೆಳೆಯುತ್ತ ಅನುಭವಕ್ಕೆ ಆ ಮೂಲಕ ಅರಿವಿಗೆ ಬಂತು. ಹೀಗಾಗಿ ಸಹಕಾರಿ ಕ್ಷೇತ್ರ ನನ್ನ ಕರ್ಮ ಭೂಮಿಯಾಯಿತು” ಇದು ರಾಜ್ಯದ ಸಹಕಾರ ಮಂತ್ರಿ ನಿಷ್ಠೂರವಾದಿ ರಾಜಕಾರಣಿ ಕೆ.ಎನ್.ರಾಜಣ್ಣ ಅವರ ಮಾತು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮೊಟ್ಟಮೊದಲ ಬಾರಿಗೆ ಮಂತ್ರಿಯಾಗಿ ತಮ್ಮ ಕ್ರಿಯಾಶೀಲ ಚಟುವಟಿಕೆ, ಇಲಾಖೆಯ ಬಗ್ಗೆ ಆಳವಾದ ಜ್ಞಾನ, ಜನ ಸಾಮಾನ್ಯರ ಬಗ್ಗೆ ಆಪ್ತವಾದ ಕಳಕಳಿ, ರಾಜಕೀಯದಲ್ಲಿ ಪ್ರಬುದ್ಧ ನಡವಳಿಕೆ,ನೇರ ಹಾಗೂ ನಿಷ್ಠೂರ ವ್ಯಕ್ತಿತ್ವ ಇದೇ ಕೆ.ಎನ್.ರಾಜಣ್ಣ ಅವರ ವ್ಯಕ್ತಿತ್ವ ರಾಜ್ಯದ ಸಹಕಾರಿ ರಂಗದ ಆಳ, ಉದ್ದಗಲಗಳನ್ನು ವ್ಯಾಪಿಸಿಕೊಂಡಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಇದೇ ಸಹಕಾರಿ ಚಟುವಟಿಕೆಗಳ ಮೂಲಕವೇ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಅಪೆಕ್ಸ್ ಬ್ಯಾಂಕ್‌ಗೆ ಎರಡನೇ ಸಲ ಆಯ್ಕೆಯಾಗಿದ್ದ ಮೊದಲ ಹಾಗೂ ಏಕೈಕ ಸಹಕಾರಿ ಇವರು ಎಂಬ ಹೆಗ್ಗಳಿಕೆಯಿದೆ.
ಸಹಕಾರಿ ಆಂದೋಲನ, ಸ್ವಸಹಾಯ ಗುಂಪುಗಳ ಸಂರಚನೆ ಹಾಗೂ ಸಂಘಟನೆ, ಕೃಷಿ, ಸಾವಯವ ಕೃಷಿ, ಗ್ರಾಮೀಣಾಭಿವೃದ್ಧಿ ಹಾಗೂ ಸಮಾಜ ಸೇವೆ ಕೆ.ಎನ್. ರಾಜಣ್ಣನವರ ವಿಶೇಷ ಆಸಕ್ತಿಯ ಕ್ಷೇತ್ರಗಳಾಗಿವೆ.
ತುಮಕೂರು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್(ಡಿಸಿಸಿ)ಗೆ ಐದು ಅವಧಿಗೆ ಚುನಾಯಿತರಾಗಿದ್ದ ರಾಜಣ್ಣ ಬ್ಯಾಂಕ್‌ನ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದು ಅವರ ಜನಪ್ರಿಯತೆ ಹಾಗೂ ಕಾರ್ಯತತ್ಪರತೆಯ ಕೈಗನ್ನಡಿಯಾಗಿದೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಜಿಲ್ಲೆಯ ರೈತರ ಏಳಿಗೆ ಹಾಗೂ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ನಿರಂತರ ಶ್ರಮಿಸಿದ ಅವರು ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ವಿಧಾನಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದು ಅವರ ಜನಪ್ರಿಯತೆಗೆ ಸಾಕ್ಷಿ.
ಜನತಾ ಪರಿವಾರದ ಪ್ರಭಾವಿ ನಾಯಕರಾಗಿದ್ದ ರಾಜಣ್ಣ ನಂತರದಲ್ಲಿ ತಮ್ಮ ರಾಜಕೀಯ ನಿಷ್ಠೆ ಬದಲಿಸಿ,ಕಾಂಗ್ರೆಸ್ ನ ನಿಷ್ಠಾವಂತ ನಾಯಕರಾಗಿ ಹೊರ ಹೊಮ್ಮಿದ್ದಾರೆ.ಪರಿಶಿಷ್ಟ ವರ್ಗಕ್ಕೆ ಸೇರಿದ ಇವರು ಮೀಸಲು ಕ್ಷೇತ್ರದ ಬದಲಿಗೆ ಸಾಮಾನ್ಯ ಕ್ಷೇತ್ರದಲ್ಲಿ ಆಯ್ಕೆಯಾಗುತ್ತಿರುವುದು ಇವರ ಜನಪ್ರಿಯತೆಗೆ ಸಾಕ್ಷಿ.
ತುಮಕೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿ ಪದವಿ, ನಂತರ ಕಾನೂನು ಪದವಿ ಪಡೆದ ರಾಜಣ್ಣ 1972 ರಿಂದಲೂ ಸಹಕಾರಿ ಆಂದೋಲನದಲ್ಲಿ ತೊಡಗಿಸಿಕೊಂಡು ಅಪಾರ ಬೆಂಬಲಿಗರು, ಅನುಯಾಯಿ ಗಳನ್ನು ಈ ಕ್ಷೇತ್ರದಲ್ಲಿ ದಾರಿ ತೋರಿಸಿ ಬೆಳೆಸಿದ್ದಾರೆ.
ರಾಜ್ಯ ಸಹಕಾರಿ ಆಂದೋಲನದ ಅತ್ಯಂತ ಹಿರಿಯ ಹಾಗೂ ಸುದೀರ್ಘ ಅನುಭವವುಳ್ಳ ಇವರಿಗೆ ಕರ್ನಾಟಕ ಸರ್ಕಾರವು ಸಹಕಾರಿ ಕ್ಷೇತ್ರದಲ್ಲಿ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾದ “ಸಹಕಾರಿ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಕೆ.ಎನ್.ರಾಜಣ್ಣನವರು ಭಾರತೀಯ ಸಹಕಾರಿ ಬ್ಯಾಂಕ್, ಮುಂಬೈನ (ಸಿಓಬಿಐ) ನಿರ್ದೇಶಕರಾಗಿ, ರಾಷ್ಟ್ರೀಕೃಷಿ ಮಾರುಕಟ್ಟೆ ಮಹಾಮಂಡಳ (ನ್ಯಾಫೆಡ್), ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಕೃಷಿಕ್ ಭಾರತಿ ಸಹಕಾರಿ ನಿ, (ಕ್ರಿಬ್‌ಕೊ)ದ ಸದಸ್ಯರಾಗಿ ಆಯ್ಕೆಯಾಗಿದ್ದರು, ತುಮಕೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ತಿಗೆ ಭಾರೀ ಬಹುಮತದಿಂದ ಚುನಾಯಿತರಾಗಿದ್ದ ರಾಜಣ್ಣನವರು 1998ರಿಂದ 2004 ರವರೆಗೆ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸರ್ಕಾರಿ ಗೋಶಾಲೆಗೆ ಬಂದ ಸುಮಾರು 7.35ಲಕ್ಷ ಜಾನುವಾರುಗಳಿಗೆ ಮೇವು ಒದಗಿಸಲು ರೂ.52.೦೦ಲಕ್ಷ ಮೊತ್ತವನ್ನು ಬಿಡುಗಡೆ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಹಲವಾರು ಸಹಕಾರಿ ಸಂಸ್ಥೆಗಳು ಮತ್ತು ಸ್ವಸಹಾಯ ಗುಂಪುಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಹಾಗೂ ಸಮಾಜದ ಯಾರನ್ನೂ ತಲುಪದ ದಕ್ಕಲರು, ಹಂದಿ ಜೋಗಿಗಳು, ಹಕ್ಕಿಪಿಕ್ಕರು ಮೊದಲಾದ ಕಡು ಬಡವರಿಗೆ ಹಲವಾರು ಯೋಜನೆಗಳನ್ನು ರೂಪಿಸಿ ನೆರವು ನೀಡಿದ್ದಾರೆ.
ರಾಜ್ಯ ಸರ್ಕಾರ ರಾಜ್ಯದ ಶಾಲಾ ಮಕ್ಕಳಿಗೆ ಉಚಿತವಾಗಿ ಶೂ, ಬ್ಯಾಗ್ ನೀಡುವ ಯೋಜನೆಯ ಕಾರಣಕರ್ತರು ಈ ರಾಜಣ್ಣನವರೇ ಆಗಿದ್ದಾರೆ,
ರಾಜಣ್ಣನವರು ಸಹಕಾರಿ ಕ್ಷೇತ್ರದಲ್ಲಿ ಸ್ಥಳೀಯವಾಗಿ ಪಡೆದಿರುವ ಅನುಭವಗಳ ಜೊತೆಗೆ ಥೈಲಾಂಡ್, ಮಲೇಶಿಯಾ,
ನ್ಯೂಜಿಲಾಂಡ್, ಚೀನಾ, ಫಿಲಿಪೈನ್ಸ್, ಸಿಂಗಾಪುರ್, ಅಮೇರಿಕಾ, ಕೊಲಂಬಿಯಾ, ಸ್ವಿಟ್ಜರ್‌ಲಾಂಡ್, ಜಪಾನ್, ಕೊರಿಯಾ, ದಕ್ಷಿಣ ಆಫ್ರಿಕಾ, ನೆದರ್‌ಲಾಂಡ್, ಆಸ್ಟೆಲಿಯಾ, , ಯುನೈಟೆಂಡ್ ಕಿಂಗ್ಡಮ್ ಮತ್ತು ಇಂಡೋನೇಶ್ಯಾ ಮೊದಲಾದ ದೇಶಗಳಿಗೆ ಭೇಟಿ ನೀಡಿ ಸಹಕಾರಿ ಸಮ್ಮೇಳನ, ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ.
ಇಲ್ಲಿ ದಿನವೂ ಜನ ಜಾತ್ರೆ !
ನಗರಕ್ಕೆ ಸಮೀಪದಲ್ಲಿರುವ ಶ್ರೀ ಸಿದ್ಧಗಂಗಾ ಮಠದಲ್ಲಿ ವರ್ಷಕ್ಕೊಮ್ಮೆ ಜಾತ್ರೆಯಾದರೆ, ಅಲ್ಲೇ ಎದುರಿನ ಕ್ಯಾತಸಂದ್ರದಲ್ಲಿರುವ ಕೆ.ಎನ್.ರಾಜಣ್ಣನವರ ಮನೆಯ ಮುಂದೆ ದಿನವೂ ಜನಜಾತ್ರೆ. ರಾಜಣ್ಣನವರು ಯಾವುದೇ ರಾಜಕೀಯ ಪಕ್ಷದಲ್ಲಿರಲಿ, ಅಧಿಕಾರದಲ್ಲಿರಲಿ ಇಲ್ಲದಿರಲಿ ಇಡೀ ಜಿಲ್ಲೆಯ ಜನರು ಅವರನ್ನು ಭೇಟಿಯಾಗಲು, ತಮ್ಮ ಕಷ್ಟ, ನೋವು, ಸಂಕಟಗಳನ್ನು ಹೇಳಿಕೊಳ್ಳಲು ಬಂದು ಕಾದು ನಿಲ್ಲುತ್ತಾರೆ. ಅವರು ಅಧಿಕಾರದಲ್ಲಿ ಇದ್ದ ದಿನಗಳಿಗಿಂತ ಮಾಜಿಯಾದ ಮೇಲೇ ಹೆಚ್ಚು ಜನರು ಬರುತ್ತಿದ್ದಾರೆ ಎಂದರೆ ಅಚ್ಚರಿ ಎನಿಸುವುದಿಲ್ಲವೇ. ತುಮಕೂರು ಜಿಲ್ಲೆಯ ಯಾವುದೇ ಹಾಲಿ ಮತ್ತು ಮಾಜಿ ಮಂತ್ರಿಗಳು, ಶಾಸಕರು ಅಥವಾ ಇನ್ನಾವುದೇ ಜನಪ್ರತಿನಿಧಿಗಳ ಮನೆಯ ಬಳಿ ಇಷ್ಟು ದೊಡ್ಡ ಪ್ರಮಾಣದ ಜನಸಂದಣಿಯನ್ನು ಕಾಣಲು ಸಾಧ್ಯವಿಲ್ಲ.
ಬಂದ ಎಲ್ಲರನ್ನು ಗುರುತಿಸಿ ಹೆಸರು ಕರೆದು ಮಾತನಾಡಿಸುವ ರಾಜಣ್ಣನವರು, ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ನೀಡುವ ಕೃಷಿ ಸಾಲಗಳಿಗಾಗಿ ಅರ್ಜಿ ಹಿಡಿದು ಬರುವವರಿಗೆ ಆದ್ಯತೆ ನೀಡುತ್ತಾರೆ. ಕಷ್ಟು ಸುಖ ಕೇಳುತ್ತಾರೆ. ಮಗಳ ಮದುವೆಗೋ, ಮಕ್ಕಳ ಫೀಜಿಗೋ, ನಾಮಕರಣಕ್ಕೋ, ತಿಥಿಗೋ ಖರ್ಚು ಮಾಡುವ ಬಗ್ಗೆಯೂ ಪುಟ್ಟ ತನಿಖೆ ಮಾಡಿ, ಹಣವನ್ನು ಕಳೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿಕಳಿಸುತ್ತಾರೆ. ಗೃಹ ಕಚೇರಿಯ ಜನತಾ ದರ್ಶನ ಮುಗಿಸಿ, ಸ್ನಾನಕ್ಕೋ, ತಿಂಡಿಗೋ ಹೊರಡುವ ಮುನ್ನ ಎಲ್ಲರಿಗೂ ತಮ್ಮೊಂದಿಗೆ ಮಾತನಾಡಲು ಅವಕಾಶ ಸಿಕ್ಕಿದೆಯೋ ಇಲ್ಲವೋ ಎಂಬುದನ್ನು ಅವರೇ ಖುದ್ದು ಹೊರಬಂದು ನೋಡಿ ಖಚಿತಪಡಿಸಿಕೊಳ್ಳುತ್ತಾರೆ.
ಮಂತ್ರಿಯಾದ ನಂತರದಲ್ಲಿ ಇವರ ಈ ಸೇವಾ ಕಾರ್ಯ ಇನ್ನೂ ವಿಸ್ತಾರಗೊಂಡಿದೆ.ಶಾಸಕರಾಗಿದ್ದ ವೇಳೆ ತುಮಕೂರಿನ ಜನ ಮಾತ್ರ ಇವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಈಗ ನೆರೆಯ ಹಾಸನದಿಂದ ಪ್ರತಿನಿತ್ಯ ಜನರ ದಂಡೀ ಇವರ ಮನೆಯ ಮುಂದೆ ನೆರೆದಿರುತ್ತದೆ.
ಇವರು ಬರಲಿದ್ದಾರೆ ಎಂಬ ಮಾಹಿತಿ ಸಿಕ್ಕರೆ ಸಾಕು ಹಾಸನದಲ್ಲಿ ಇವರ ಭೇಟಿಗೆ ಜನಜಾತ್ರೆಯೇ ಇರುತ್ತದೆ.ಇವರು ಅಲ್ಲಿಗೆ ಭೇಟಿ ನೀಡಿದಾಗೆಲ್ಲಾ ಅನಧಿಕೃತ ಜನತಾದರ್ಶನ,ಮೊರೆ ಹೊತ್ತು ಬಂದ ಜನರಿಗೆ ಸ್ಥಳದಲ್ಲೇ ಪರಿಹಾರ.ಸರ್ಕಾರದ ವತಿಯಿಂದ ಪರಿಹಾರ ನೀಡಲು ತಾಂತ್ರಿಕ ತೊಡಕಿದ್ದವರಿಗೆ ವೈಯುಕ್ತಿಕ ಪರಿಹಾರ ಖಚಿತ.ಆದರೆ,ತಾವು ಮಾಡಿದ ಸಹಾಯ ಮತ್ತೊಬ್ಬರಿಗೆ ಗೊತ್ತಾಗಬಾರದು ಎಂಬ ಸಂಕೋಚ.ಈ ವಿಷಯದಲ್ಲಿ ಪ್ರಚಾರದಿಂದ ಸದಾ ದೂರ.
ಇನ್ನೂ ಜಿಲ್ಲಾ ಮಂತ್ರಿಯಾಗಿ ಇವರು ನಡೆಸುವ ಕೆಡಿಪಿ ಸಭೆಗಳು ಅಧಿಕಾರಿಗಳಿಗೆ ಸಿಂಹಸ್ವಪ್ನ.ಉಡಾಫೆ ಮನೋಭಾವದ ಅಧಿಕಾರಿಗಳ ಮೈ ಚಳಿ ಬಿಡಿಸುವುದರಲ್ಲಿ ಎತ್ತಿದ ಕೈ.ಹೀಗಾಗಿ ಇವರ ಸಭೆಗೆ ಬರುವ ಅಧಿಕಾರಿಗಳು ಸಂಪೂರ್ಣ ಅಧ್ಯಯನದ ಜೊತೆಗೆ ಎಲ್ಲಾ ದಾಖಲೆಗಳೊಂದಿಗೆ ಶಿಸ್ತಾಗಿ ಹಾಜರಾಗುತ್ತಾರೆ.ಇವರು ನೀಡುವ ಆದೇಶ,ಸೂಚನೆಗಳನ್ನು ತಕ್ಷಣವೇ ಪಾಲಿಸುತ್ತಾರೆ ಹೀಗಾಗಿ ಜನರಿಗೆ ಶೀಘ್ರದಲ್ಲೇ ಫಲಿತಾಂಶ ಸಿಗುತ್ತದೆ.ಹೀಗಾಗಿಯೇ ಇವರ ಇಲಾಖೆಯ ಬಗ್ಗೆ ಪ್ರತಿಪಕ್ಷ ಸದಸ್ಯರೂ ಸೇರಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
6 Comments
ಸದರಿ ಸಚಿವರ ಆಶೀರ್ವಾದದಿಂದ ನಮ್ಮ ಕುಟುಂಬದ ಏಳಿಗೆಯಾಗಿದೆ 👏👏❤️👏👏
Айтек http://www.multimedijnyj-integrator.ru/ .
фоновое озвучивание помещений фоновое озвучивание помещений .
Получите ваш промокод здесь и начните экономить! Получите ваш промокод здесь и начните экономить! .
нарколог на дом вывод из запоя на дому нарколог на дом вывод из запоя на дому .
новини Кропивницького