ಜಾರ್ಖಂಡ್: ಯುವಕನೊಬ್ಬ ಒಂದೇ ಮುಹೂರ್ತದಲ್ಲಿ ಇಬ್ಬಿಬ್ಬರಿಗೆ ತಾಳಿ ಕಟ್ಟಿದ ಘಟನೆಯು ಜಾರ್ಖಂಡ್‌ನ ಲೋಹರ್ದಾಗ ಜಿಲ್ಲೆಯ ಬಂದಾ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಕುಸುಮ್ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಸಂದೀಪ್ ಆಕೆಯನ್ನು ಮದುವೆಯಾಗದೆ ಒಂದು ಮಗುವಿನ ತಂದೆಯಾಗಿದ್ದ, ಇದಾದ ಬಳಿಕ ಇಟ್ಟಿಗೆ ಗೂಡಿನ ಕೆಲಸಕ್ಕೆಂದು ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ಸಂದೀಪ್ ಅಲ್ಲಿ ಸ್ವಾತಿ ಕುಮಾರಿ ಎಂಬಾಕೆಯನ್ನು ಪ್ರೀತಿಸಿದ್ದ.
ಈ ವಿಚಾರ ಸ್ವಾತಿ ಕುಟುಂಬಕ್ಕೆ ತಿಳಿದು ವಿವಾಹಕ್ಕೆ ಬೇಡಿಕೆಯಿಟ್ಟಿದ್ದಾರೆ. ಗ್ರಾಮಸ್ಥರ ಸಮ್ಮುಖದಲ್ಲಿ ನಡೆದ ಸಂಧಾನ ಕಾರ್ಯದಲ್ಲಿ ಸಂದೀಪ್ ಇಬ್ಬರನ್ನೂ ಮದುವೆಯಾಗಬೇಕು ಎಂಬ ತೀರ್ಮಾನ ಹೊರಬಿದ್ದಿದೆ. ಬಳಿಕ ಸಂದೀಪ್ ಇಬ್ಬರೂ ಯುವತಿಯರನ್ನು ವರಿಸಿದ್ದಾನೆ.
Previous Articleಹತ್ತು ರೂ. ನಾಣ್ಯಗಳನ್ನೇ ನೀಡಿ ಕಾರು ಖರೀದಿಸಿದ ವೈದ್ಯ!
Next Article ಪ್ರಾಣಾಪಾಯದಿಂದ ನಟ ದಿಗಂತ್ ಪಾರು: ಹೆಲ್ತ್ ಬುಲೆಟಿನ್