ಭುವನೇಶ್ವರ,ಫೆ.21-
ತವರಿನಿಂದ ಜೊತೆಯಲ್ಲಿ ಮನೆಗೆ ಬರಲು ನಿರಾಕರಿಸಿದ ಎರಡನೇ ಪತ್ನಿ,ಆಕೆಯ ತಂಗಿ ಹಾಗೂ ಇಬ್ಬರು ಮಕ್ಕಳ ಮೇಲೆ ರೊಚ್ಚಿಗೆದ್ದ ಪತಿ ಆ್ಯಸಿಡ್ ದಾಳಿ (acid attack) ನಡೆಸಿದ ಅಮಾನವೀಯ ಘಟನೆ ಬಾಲಸೋರ್ (Balasore, Bhubaneswar) ಜಿಲ್ಲೆಯಲ್ಲಿ ನಡೆದಿದೆ.
ಕೃತ್ಯ ನಡೆಸಿದ ಆರೋಪಿ ಚಂದನ್ ರಾಣಾನನ್ನು ಸದರ್ ಠಾಣಾ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಸದರ್ ಬಳಿಯ ವಿಂಪುರ ಗ್ರಾಮದಲ್ಲಿ ರಾಣಾ ತನ್ನ ಎರಡನೇ ಪತ್ನಿಯನ್ನು ನೀಲಗಿರಿ ಪ್ರದೇಶದ ಸಂತರಗಡಿಯಾದಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಲು ಮಾವನ ಮನೆಗೆ ಬಂದಿದ್ದ.
ಆದರೆ ಮಹಿಳೆಯು ಆತನೊಂದಿಗೆ ಹೋಗಲು ನಿರಾಕರಿಸಿದ್ದರಿಂದ ರಾಣಾ ಆಕೆಯ ಮೇಲೆ ಆ್ಯಸಿಡ್ ಎರಚಿದ್ದಾನೆ. ಈ ವೇಳೆ ಮಹಿಳೆಯ ರಕ್ಷಣೆಗೆ ಬಂದ ಆಕೆಯ ಅಕ್ಕನಿಗೂ ಆ್ಯಸಿಡ್ ಎರಚಿದ್ದಾನೆ. ದಾಳಿ ವೇಳೆ ಅಕ್ಕನ ಮಗ ಹಾಗೂ ಮಗಳು ಗಾಯಗೊಂಡಿದ್ದಾರೆ.
ಘಟನೆಯ ನಂತರ ಗಾಯಗೊಂಡ ನಾಲ್ವರನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಮಕ್ಕಳು ಹಾಗೂ ಮಹಿಳೆಯ ಸ್ಥಿತಿ ಸ್ಥಿರವಾಗಿದ್ದು, ಆರೋಪಿಯ ಎರಡನೇ ಪತ್ನಿಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಯ ನಂತರ ಆರೋಪಿ ರಾಣಾ ಸ್ಥಳದಿಂದ ಪರಾರಿಯಾಗಿದ್ದು ಕಾರ್ಯಾಚರಣೆ ಕೈಗೊಂಡು ಆತನನ್ನು ಬಂಧಿಸಲಾಗಿದೆ.


1 Comment
Chase the thrill Catch the win Live the moment – https://gpdifluca.com , One spin and physics files for bankruptcy .