ಕರ್ನಾಟಕದಲ್ಲಿ ಮೂರು ಕ್ಷೇತ್ರಗಳಿಗೆ ಉಪElectionಗೆ ದಿನಾಂಕ ಘೋಷಣೆಯಾಗಿದೆ. ಅದರಲ್ಲೂ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಗೊಂದಲದ ಗೂಡಾಗಿದ್ದು ಇಲ್ಲಿನ ಪ್ರಭಾವಿ ರಾಜಕಾರಣಿ ಸಿ.ಪಿ. ಯೋಗೇಶ್ವರ್ ಗೆ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ಸೇರ್ಪಡೆಯಾಗಿದ್ದು ಮುಂದಿನ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಲಿದ್ದಾರೆ.
ಇನ್ನು ಇವರ ಜೀವನದ ಹಾದಿಯನ್ನು ನೋಡುವುದಾದರೇ 29 ಆಗಸ್ಟ್ 1963 ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚಾಕೆರೆ ಗ್ರಾಮದಲ್ಲಿ ಜನಿಸಿದ ಇವರು 1983-1986ರ ವರ್ಷ ಬೆಂಗಳೂರಿನ ವಿವಿ ಪುರಂ ಕಾಲೇಜಿನಲ್ಲಿ ತಮ್ಮ ಬಿ.ಎಸ್ಸಿ ಪದವಿಯನ್ನು ಮುಗಿಸಿದ್ದಾರೆ.
ಉತ್ತರ ದ್ರುವದಿಂದ ದಕ್ಷಿಣ ದ್ರುವಕು, ಬದ್ರಿ, ಕಂಬಳಹಳ್ಳಿ, ಪ್ರೀತಿ ನೀ ಇಲ್ಲದೇ ನಾ ಹೇಗಿರಲಿ, ಸೈನಿಕ ಮತ್ತು ಅಟ್ಟಹಾಸ ಸಿನಿಮಾಗಳಲ್ಲಿ ನಟಿಸಿ, 1999ರಲ್ಲಿ ರಾಜಕೀಯ ಜೀವನ ಶುರು ಮಾಡಿ ಪಕ್ಷೇತರವಾಗಿ ಸ್ಪರ್ಧಿಸಿ ಕಾಂಗ್ರೆಸ್ನ ಸಾದತ್ ಅಲಿ ಖಾನ್ ಅವರನ್ನು 2282 ಮತಗಳ ಅಂತರದಿಂದ ಸೋಲಿಸಿ ಪಕ್ಷೇತರ ಶಾಸಕರಾಗಿ ಆಯ್ಕೆಯಾದರು.
ನಂತರ ಕಾಂಗ್ರೆಸ್ ಸೇರ್ಪಡೆಯಾಗಿ 2004ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ನ ಅಶ್ವಥ್ ಎಮ್.ಸಿ ಅವರನ್ನು ಸೋಲಿಸಿ 16,169 ಮತಗಳ ಅಂತರದಿಂದ ಗೆದ್ದು ಬೀಗಿದ್ದರು. ಮತ್ತೆ 2008ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಆಗಲೂ ಜೆಡಿಎಸ್ ಅಭ್ಯರ್ಥಿಯನ್ನು 4,930 ಮತಗಳ ಅಂತರದಿಂದ ಪರಾಭವಗೊಳಿಸಿ ವಿಜಯ ಲಕ್ಷ್ಮಿಯನ್ನು ತಮ್ಮದಾಗಿಸಿಕೊಂಡರು.
2009ರಲ್ಲಿ ಬಿಜೆಪಿ ಪಕ್ಷದಿಂದ ಚುನಾವಣೆಯಲ್ಲಿ ಭಾಗವಹಿಸಿ ಜೆಡಿಎಸ್ ನ ಅಶ್ವತ್ಥ್ ಎಮ್.ಸಿ ಅವರ ವಿರುದ್ಧ 2282 ಮತಗಳ ಅಂತರದಿಂದ ಸೋಲು ಕಂಡರು. ಪುನಃ 2011 ರಲ್ಲಿ ಬಿಜೆಪಿ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಜೆಡಿಎಸ್ ಅಭ್ಯರ್ಥಿ ನಾಗರಾಜು ಅವರನ್ನು 17,803 ಮತಗಳ ಅಂತರದಿಂದ ಸೋಲಿಸಿ ವಿಜಯಪತಾಕೆ ಹಾರಿಸಿದರು.
ನಂತರ 2013ರಲ್ಲಿ ಸಮಾಜವಾದಿ ಪಾರ್ಟಿಯಿಂದ ಸ್ಪರ್ಧಿಸಿ, ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರನ್ನು 6,464 ಮತಗಳಿಂದ ಸೋಲಿಸಿದರು 2018ರಲ್ಲಿ ಹೆಚ್ಡಿ ಕುಮಾರಸ್ವಾಮಿ ಅವರ ವಿರುದ್ಧ 21,530 ಮತಗಳ ಅಂತರದಿಂದ ಸೋಲು ಕಂಡರು. ಮತ್ತೆ 2023ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಡಿ ಕುಮಾರಸ್ವಾಮಿ ಅವರ ವಿರುದ್ಧ 15,915 ಮತಗಳಿಂದ ಸೋಲುಂಡರು.
2011-12ರಲ್ಲಿ ಅರಣ್ಯ ಸಚಿವರಾಗಿ, 21 ಜನವರಿ 2021 ರಿಂದ 26 ಜುಲೈ 2021 ರವರೆಗೆ ಕರ್ನಾಟಕದ ಪ್ರವಾಸೋದ್ಯಮ, ಪರಿಸರ ಮತ್ತು ಪರಿಸರ ಇಲಾಖೆ ಸಚಿವರಾಗಿ, 2020ರಿಂದ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.