ಅಯೋಧ್ಯೆ ಇದೀಗ ದೇಶದಲ್ಲಿ ನಡೆ ರಾಮನಾಮ ಜಪ ನಡೆದಿದೆ.ಬಹುಕಾಲದಿಂದ ನಿರೀಕ್ಷಿಸಲಾದ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುತ್ತಿದ್ದಂತೆ ದೇಶಾದ್ಯಂತ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.
ಅಯೋಧ್ಯೆಯ ರಾಮಮಂದಿರದಲ್ಲಿ ವಿರಾಜಮಾನನಾಗಿರುವ ಬಾಲರಾಮನ ವೀಕ್ಷಣೆಗೆ ದೇಶದೆಲ್ಲೆಡೆಯಿಂದ ಭಕ್ತರು ದೇವಳ ನಗರಿ ಅಯೋಧ್ಯೆಗೆ ಲಗ್ಗೆ ಇಡುತ್ತಿದ್ದಾರೆ ಪ್ರತಿನಿತ್ಯ ಕನಿಷ್ಠ ಐದು ಲಕ್ಷ ಮಂದಿ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ರಾಮಮಂದಿರ ವೀಕ್ಷಿಸಿ ಬಾಲರಾಮನ ದರ್ಶನ ಪಡೆದು ಸಂತೃಪ್ತರಾಗುತ್ತಿದ್ದಾರೆ.
ಅಯೋಧ್ಯೆಗೆ ನಿರೀಕ್ಷೆಗೂ ಮೀರಿ ಜನರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಊಟೋಪಚಾರ, ವಸತಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಇದನ್ನು ಪೂರೈಸಲು ಉತ್ತರ ಪ್ರದೇಶ ಸರ್ಕಾರ, ಸ್ಥಳೀಯ ಆಡಳಿತ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ ಪ್ರತಿಯೊಂದು ರಾಜ್ಯದವರಿಗಾಗಿ ಪ್ರತ್ಯೇಕ ಟೆಂಟ್ ಗಳನ್ನು ಹಾಕಲಾಗಿದ್ದು ಅಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ.
ದಕ್ಷಿಣ ಭಾರತದವರಿಗೆ ಊಟ ದೊಡ್ಡ ವಿಷಯವಾಗಿ ಪರಿಣಮಿಸಿದೆ ಇದನ್ನು ಮನಗಂಡಿರುವ ಬೆಂಗಳೂರಿನ ಅದಮ್ಯ ಚೇತನಾ ಟ್ರಸ್ಟ್ ನೆರವಿಗೆ ಧಾವಿಸಿದೆ.
ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ ಕುಮಾರ್ ಅದಮ್ಯ ಚೇತನ ಟ್ರಸ್ಟ್ ಇದೀಗ ಕರ್ನಾಟಕ ಹಾಗೂ ದಕ್ಷಿಣ ಭಾರತದಯಿಂದ ಬರುವ ರಾಮಭಕ್ತರಿಗಾಗಿ ದಕ್ಷಿಣ ಭಾರತದ ಖಾದ್ಯಗಳನ್ನು ಗುಣಪಡಿಸುತ್ತಿದೆ ಜನವರಿ 22 ರಿಂದ ಬೆಳಿಗ್ಗೆ 9:00 ರಿಂದ 11:30 ರವರೆಗೆ ಇಡ್ಲಿ ಸಾಂಬಾರ್ ಪೂರೈಸಲಾಗುತ್ತಿದೆ.
ಮಧ್ಯಾಹ್ನ 12 ರಿಂದ 3 ಗಂಟೆ 30 ನಿಮಿಷದವರೆಗೆ ಅನ್ನ ಸಾಂಬಾರ್ ಪೊಂಗಲ್ ಮತ್ತು ಸಿಹಿ ಒಂದನ್ನು ವಿತರಿಸುತ್ತಿದೆ ಉಚಿತವಾಗಿ ರಾಮಭಕ್ತರಿಗೆ ಈ ಸೌಲಭ್ಯ ಕಲ್ಪಿಸುವ ಮೂಲಕ ದಕ್ಷಿಣ ಭಾರತದವರ ಊಟದ ಕೊರತೆಯನ್ನು ನೀಗಿಸಲು ಪ್ರಯತ್ನಿಸುತ್ತಿದೆ. ಅದಮ್ಯ ಚೇತನ ಟ್ರಸ್ಟ್ ನಡೆಸುತ್ತಿರುವ ಈ ಸೇವಾ ಕೈ಼ಂಕರ್ಯಕ್ಕೆ ಕೇವಲ ದಕ್ಷಿಣ ಭಾರತದವರು ಮಾತ್ರವಲ್ಲ ಇಡೀ ದೇಶದ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ದಕ್ಷಿಣ ಭಾರತದ ಖಾದ್ಯಗಳನ್ನು ಸವಿದು ಅದಮ್ಯ ಚೇತನ ಟ್ರಸ್ಟ್ ಸೇವೆಯನ್ನು ಕೊಂಡಾಡುತ್ತಿದ್ದಾರೆ.