ಅಹ್ಮದಾಬಾದ್: ಪಾನ ನಿಷೇಧ ಜಾರಿಯಲ್ಲಿ ಇರುವ ಗುಜರಾತ್‌ನಲ್ಲಿ ಕಳ್ಳ ಭಟ್ಟಿ ದುರಂತ ಸಂಭವಿಸಿದೆ. ವಿಷ ಮದ್ಯ ಸೇವಿಸಿದ 10 ಮಂದಿ ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಅತ್ಯಂತ ಗಂಭೀರವಾಗಿದೆ.
ಬೋಟಾಡ್ ಜಿಲ್ಲೆಯಲ್ಲಿ ಮತ್ತು ದಂಡೂಕ ತಾಲೂಕಿನಲ್ಲಿ ಈ ದುರಂತ ಸಂಭವಿಸಿದೆ. ಕಳ್ಳಭಟ್ಟಿ ದುರಂತಕ್ಕೆ ಸಂಬಂಧಿಸಿದಂತೆ ಗುಜರಾತಿನ ಭಯೋತ್ಪಾದನಾ ನಿಗ್ರಹ ದಳ ಐವರನ್ನು ವಶಕ್ಕೆ ಪಡೆದುಕೊಂಡಿದೆ.
ಅಹ್ಮದಾಬಾದ್ ಜಿಲ್ಲೆ ದಂಡೂಕ ತಾಲೂಕಿನಲ್ಲಿ ವಿಷ ಮದ್ಯ ಸೇವಿಸಿದ ಹಲವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವರದಿಯಾಗಿದೆ.
Previous Articleಒಂದೇ ದಿನ ಗಾಳಕ್ಕೆ ಬಿತ್ತು ಎರಡು ಆಳೆತ್ತರದ ಮೀನುಗಳು!
Next Article ಡಿಕೆಶಿ ಜತೆ ವಾಕ್ಸಮರ: ಶಾಸಕ ಜಮೀರ್‌ಗೆ ಹೈಕಮಾಂಡ್ ನೋಟಿಸ್