ನವದೆಹಲಿ : ಅಖಿಲ ಭಾರತ ಕಾಂಗ್ರೆಸ್ ಸಾಂಸ್ಥಿಕ Electionಗೆ ಭರ್ಜರಿ ರಂಗು ಬಂದಿದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಯ್ಕೆಗಾಗಿ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದ್ದು ಅಧ್ಯಕ್ಷ ಯಾರಾಗಲಿದ್ದಾರೆಂಬ ಕುತೂಹಲ ಮೂಡಿಸಿದೆ.
ಹಾಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಅನಾರೋಗ್ಯದ ಕಾರಣ ಮತ್ತೆ ಆ ಹುದ್ದೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಹುದ್ದೆ ತೊರೆದಿರುವ ರಾಹುಲ್ ಗಾಂಧಿ ಈ ಹುದ್ದೆಯ ಬಗ್ಗೆ ಆಸಕ್ತಿ ಹೊಂದಿಲ್ಲ ಹೀಗಾಗಿ ಇಡೀ ಪ್ರಕ್ರಿಯೆ ಕುತೂಹಲ ಮೂಡಿಸಿದೆ.
ಸದ್ಯದ ಮಾಹಿತಿಗಳ ಪ್ರಕಾರ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಗಾಂಧಿ ಕುಟುಂಬ ಕಣಕ್ಕಿಳಿಸಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರ ಹೆಸರು ಮುಂಚೂಣಿಯಲ್ಲಿದೆ. ಆದರೆ, ಒಂದು ಬಣ ರಾಹುಲ್ ಗಾಂಧಿ ಅವರೇ ಪಕ್ಷದ ಅಧ್ಯಕ್ಷರಾಗಬೇಕು ಎಂದು ಬಯಸುತ್ತಿದೆ. ಸ್ವತಃ ಅಶೋಕ್ ಗೆಹಲೋತ್ ಅವರೂ ರಾಹುಲ್ ಹೆಸರನ್ನು ಸೂಚಿಸಿದ್ದಾರೆ.
ಒಂದು ವೇಳೆ ಗಾಂಧಿ ಕುಟುಂಬದವರು ಚುನಾವಣೆಗೆ ಸ್ಪರ್ಧೆ ಮಾಡದೇ ಹೋದರೆ, ಜಿ–23 ಬಣದಿಂದ ಅಭ್ಯರ್ಥಿಯೊಬ್ಬರು ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ.ಹಾಗೇನಾದರೂ ಸ್ಪರ್ಧೆ ಮಾಡಿದ್ದೇ ಆದರೆ, ಅದು ಸೋನಿಯಾ ಗಾಂಧಿ ಅವರ ಆಯ್ಕೆಗೆ ಸವಾಲೊಡ್ಡಿದಂತೆ ಆಗಲಿದೆ.
ಸದ್ಯ ಕೇರಳ ಕಾಂಗ್ರೆಸ್ ನ ಪ್ರಮುಖ ನಾಯಕ ಶಶಿ ತರೂರ್ ಈ ಸ್ಥಾನದ ಆಕಾಂಕ್ಷೆ ಹೊಂದಿದ್ದು ಕಣಕ್ಕಿಳಿಯವ ಸಿದ್ದತೆಯಲ್ಲಿದ್ದಾರೆ.ಮತ್ತೊಂದೆಡೆ ಮಹಾರಾಷ್ಟ್ರ ಕಾಂಗ್ರೆಸ್ ನ ನಾಯಕ ಪೃಥ್ವಿರಾಜ್ ಚೌಹಾಣ್ ಕೂಡಾ ಸ್ಪರ್ಧೆ ಗೆ ಆಸಕ್ತಿ ಹೊಂದಿದ್ದಾರೆ.
2000ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೊನೆಯ ಬಾರಿ ಚುನಾವಣೆ ನಡೆದಾಗ ಜಿತೇಂದ್ರ ಪ್ರಸಾದ್ ಅವರು ಸೋನಿಯಾ ಗಾಂಧಿ ಅವರ ವಿರುದ್ಧ ಸ್ಪರ್ಧಿಸಿದ್ದರಾದರೂ, ಸೋತಿದ್ದರು.
Previous Articleಎಲ್ಲಿದೆ ನ್ಯಾಯ..ಕಾನೂನು ಹೇಗೆ ಪಾಲಿಸಲಾಗುತ್ತಿದೆ.?
Next Article POCSO ಬೆನ್ನಲ್ಲೇ ದೌರ್ಜನ್ಯ ಕಾಯ್ದೆ ಕಂಟಕ