ಪ್ರಖ್ಯಾತ ಹಾಲಿವುಡ್ ನಟ ಅಲ್ ಪಚೀನೋ ಅವರು ತಮ್ಮ 83 ನೇ ವಯಸ್ಸಿನಲ್ಲಿ ಮತ್ತೆ ತಂದೆಯಾಗಲಿದ್ದಾರೆ ಪಚೀನೋ ತಮ್ಮ 29 ವರ್ಷದ ಸಂಗಾತಿ ನೂರ್ ಅಲ್ಫಾಲ್ಲ ಅವರೊಂದಿಗೆ ಮಗುವನ್ನು ಸ್ವಾಗತಿಸಲು ಸಿದ್ದರಾಗಿದ್ದಾರೆ ಎಂದು ಅವರ ಪ್ರತಿನಿಧಿ CNNಗೆ ಖಚಿತಪಡಿಸಿದ್ದಾರೆ.
“ಸ್ಕಾರ್ಫೇಸ್” (1983) ಮತ್ತು “ದಿ ಗಾಡ್‌ಫಾದರ್” ಸರಣಿ ಚಿತ್ರಗಳಲ್ಲಿ ತಮ್ಮ ಪಾತ್ರಗಳಿಂದಾಗಿ ಹೆಸರುವಾಸಿಯಾದ ನಟನಿಗೆ ಈಗಾಗಲೇ ಮೂರು ಮಕ್ಕಳಿದ್ದಾರೆ
ಅವರ ಸದ್ಯದ ಸಂಗಾತಿ ಅಲ್ಫಲ್ಲಾ ಮನರಂಜನಾ ಉದ್ಯಮದಲ್ಲಿ ನಿರ್ಮಾಪಕರಾಗಿ ಕೆಲಸ ಮಾಡುತ್ತಾರೆ. ಪಚೀನೋ ಅವರು 1992 ರ ಚಿತ್ರ “ಸೆಂಟ್ ಆಫ್ ಎ ವುಮನ್” ಗಾಗಿ ಅತ್ಯುತ್ತಮ ನಟ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರ ವೃತ್ತಿಜೀವನದುದ್ದಕ್ಕೂ ಅನೇಕ ನಾಮನಿರ್ದೇಶನಗಳನ್ನು ಸಹ ಪಡೆದರು.
ವೃದ್ಧರಾಗಿರುವ ಹಾಲಿವುಡ್ ನಟರು ತಮ್ಮ ವೃದ್ದಾಪ್ಯದಲ್ಲಿ ತಂದೆಯಾಗಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಹಾಲಿವುಡ್ ನ ಇನ್ನೊಬ್ಬ ಪ್ರಖ್ಯಾತ ನಟ ರಾಬರ್ಟ್ ಡಿ ನಿರೋ 79ನೇ ವಯಸ್ಸಿನಲ್ಲಿ ತಮ್ಮ ಏಳನೇ ಮಗುವಿಗೆ ತಂದೆಯಾಗಿದ್ದಾರೆ.