ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಸ್ವಕ್ಷೇತ್ರ ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಉದ್ಘಾಟನೆಯಾಗುವ ದಿನ ಮತ್ತು ಅಲ್ಲಿ ಶ್ರೀ ರಾಮನ ಬಾಲ ಮೂರ್ತಿ ಪ್ರತಿಷ್ಠಾಪನೆಯಾಗುವ ದಿನವಾದ ಜನವರಿ ೨೨ರಂದು ದೇಶದ ಕೆಲವು ರಾಜ್ಯಗಳಲ್ಲಿ ಮದ್ಯ ಮತ್ತು ಮಾಂಸ ಮಾರಾಟ ನಿಷೇಧಿಸಲ್ಪಡುವ ಆದೇಶ ಹೊರಬಿದ್ದಿದೆ. ಈ ರಾಜ್ಯಗಳು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಾಗಿದ್ದು ಅವು ಪ್ರಮುಖವಾಗಿ ಛತ್ತೀಸಘಡ, ಅಸ್ಸಾಂ ಮತ್ತು ಉತ್ತರ ಪ್ರದೇಶ ಎನ್ನುವ ಸುದ್ದಿ ಹೊರಬಂದಿದೆ.
ಮದ್ಯ ನಿಷೇಧದ ಆದೇಶ ಛತ್ತೀಸಘಡದಲ್ಲಿ ಮೊದಲು ಘೋಷಣೆಯಾದ ಬೆನ್ನಲ್ಲೇ ಬಿಜೆಪಿ ಆಡಳಿತದ ಅಸ್ಸಾಮ್ ರಾಜ್ಯವೂ ಇಂಥದ್ದೇ ಘೋಷಣೆಯನ್ನು ಮಾಡಿದೆ. ಉತ್ತರ ಪ್ರದೇಶದಲ್ಲೂ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ. ರಾಜಸ್ಥಾನದಲ್ಲಿ ರಾಜ್ಯವ್ಯಾಪಿ ನಿಷೇಧವಲ್ಲದಿದ್ದರೂ ಅಂದಿನ ದಿನಕ್ಕೆ ಜೈಪುರ ನಗರದ ಮಿತಿಯೊಳಗೆ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಜೈಪುರದಲ್ಲೂ ಮದ್ಯ ನಿಷೇಧ ಮಾಡಬೇಕು ಎನ್ನುವ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದೆ. ಆದರೆ ಈ ಬಗ್ಗೆ ಬಿಜೆಪಿ ಸಹಭಾಗಿತ್ವದ ಆಡಳಿತವಿರುವ ಮಹಾರಾಷ್ಟ್ರದಲ್ಲಿ ಇಂಥಾ ಪ್ರಸ್ತಾವನೆ ಇನ್ನೂ ಬಂದಿಲ್ಲ.
ಜನವರಿ ೨೨ರಂದು ಬಿಜೆಪಿ ಆಡಳಿತವಿರುವ ಅನೇಕ ರಾಜ್ಯಗಳಲ್ಲಿ ಮಾಂಸ ಮಾರಾಟವೂ ನಿಷೇಧಿಸಲ್ಪಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ ಮತ್ತು ಈ ನಿಟ್ಟಿನಲ್ಲಿ ಕೆಲವು ಬಿಜೆಪಿ ನಾಯಕರು ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎಂದು ವರದಿಯಾಗಿದೆ. ಇದೆಲ್ಲದರ ಮಧ್ಯೆ ಇನ್ನೂ ಅಪೂರ್ಣವಾಗಿರುವ ಮಂದಿರದಲ್ಲಿ ಆತುರದಿಂದ ರಾಮ ಲಲ್ಲಾನ ಮೂರ್ತಿಯ ಪ್ರತಿಷ್ಠಾಪನೆ ಯಾಕೆ ಆಗುತ್ತಿದೆ ಎನ್ನುವ ಪ್ರಶ್ನೆಯೂ ಬಿಜೆಪಿಗರನ್ನು ಕೆರಳಿಸುತ್ತಿದೆ.
1 Comment
оценка условий труда на предприятии специальная оценка безопасных условий труда