ಲಾಸ್ ಏಂಜಲೀಸ್ – ಪಶ್ಚಿಮ ಅಮೇರಿಕಾದ ಅತ್ಯಂತ ಸುಂದರ ನಗರ ಕ್ಯಾಲಿಪೋರ್ನಿಯಾ ಇಲ್ಲಿನ ಪ್ರತಿಷ್ಠಿತ ನಗರ ಲಾಸ್ ಏಂಜಲೀಸ್. ಈ ನಗರವನ್ನು ಸ್ವೇಚ್ಚಾಚಾರಿಗಳ ಸ್ವರ್ಗ ಎನ್ನುತ್ತಾರೆ. ಅದರಲ್ಲೂ ಇಲ್ಲಿನ ಡೌನ್ ಟೌನ್ ಸ್ಟ್ರೀಟ್ ಅಂತೂ ಸ್ವೇಚ್ಚಾಚಾರಿಗಳ ಪಾಲಿಗೆ ಅತ್ಯಂತ ಪ್ರೀತಿಪಾತ್ರವಾದ ತಾಣ.
ಈ ರಸ್ತೆಯಲ್ಲಿ ಕಳೆದ ಭಾನುವಾರ ತೆರಳುತ್ತಿದ್ದವರು ಬೆಚ್ಚಿ ಬೀಳಿಸುವ ಘಟನೆಯೊಂದು ನಡೆಯಿತು
ಅಮಂಡಾ ಬೈನ್ಸ್ ಕಳೆದ 1990-2000 ಅವಧಿಯಲ್ಲಿ ಅಮೇರಿಕಾದ ಟೀವಿ ಮತ್ತು ಸಿನಿಮಾಗಳಲ್ಲಿ ನೋಡ ಸಿಗುತ್ತಿದ್ದ ಅತ್ಯಂತ ಪ್ರತಿಭಾನ್ವಿತ ನಟಿ.
ಆದರೆ ಈ ನಟಿ ತಮ್ಮ ನಟನೆಗಿಂತಲೂ ತನ್ನ ಚಿತ್ರ ವಿಚಿತ್ರ ನಡವಳಿಕೆಗಳು ಹಾಗೂ ವಿವಾದಗಳಿಂದಲೇ ಸುದ್ದಿಯಾಗಿದ್ದರು.
ಇದೀಗ ಅವರನ್ನು ಕಳೆದ ಭಾನುವಾರ ಲಾಸ್ ಏಂಜಲೀಸ್ ನ ಡೌನ್ ಟೌನ್ ಸ್ಟ್ರೀಟ್ ನಲ್ಲಿ
ಬೆತ್ತಲೆಯಾಗಿ ತಿರುಗಾಡಿದ್ದನ್ನು ಸ್ಥಳೀಯರು ಕಂಡಿದ್ದಾರೆ.
ಅಷ್ಟೇ ಅಲ್ಲ ಅವರು ಅಮಂಡಾ ಬೈನ್ಸ್ ಅವರು ಬೆತ್ತಲೆಯಾಗಿ ತಿರುಗಾಡುವಾಗ ಕೆಲವು ಕಾರುಗಳನ್ನು ತಡೆದು ನಿಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಅಮಂಡಾ ಬೈನ್ಸ್ ಅವರನ್ನು 72 ಗಂಟೆ ಮಾನಸಿಕ ಕೇಂದ್ರದ ಬಂಧನದಲ್ಲಿರಿಸಲಾಗಿತ್ತು ಎಂದು ದಿ ಮಿರರ್ ವರದಿ ಮಾಡಿದೆ.
ಅಮಂಡಾ ಬೈನ್ಸ್ ಮಾನಸಿಕ ಸಮಸ್ಯೆ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಹೇರ್‌ಸ್ಪ್ರೇ, ಶೀಸ್ ದಿ ಮ್ಯಾನ್ ಎಂಬ ಕಿರುತರೆ ಜನಪ್ರಿಯ ಶೋ ಮೂಲಕ ಹಾಗೂ ಬಾಲನಟಿಯಾಗಿ ಅಮಂಡಾ ಬೈನ್ಸ್ ಹೆಸರು ಮಾಡಿದ್ದಾರೆ ಎಂದು ವರದಿ ತಿಳಿಸಿದೆ.