ರೆಹೋಬೋತ್ ಬೀಚ್(ಯುಎಸ್): ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರ ಬೀಚ್ ಹೌಸ್ನ ನಿರ್ಬಂಧಿತ ವಾಯುಪ್ರದೇಶಕ್ಕೆ ಖಾಸಗಿ ವಿಮಾನವೊಂದು ಪ್ರವೇಶಿಸಿದ್ದು, ಬೈಡೆನ್ ಹಾಗೂ ಅವರ ಪತ್ನಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಶ್ವೇತಭವನ ಈ ಮಾಹಿತಿ ನೀಡಿದ್ದು, ವಾಷಿಂಗ್ಟನ್ನಿಂದ ಪೂರ್ವಕ್ಕೆ 200 ಕಿಮೀ ದೂರದಲ್ಲಿರುವ ಡೆಲವೇರ್ನ ರೆಹೋಬೋತ್ ಬೀಚ್ನಲ್ಲಿ ಜೋ ಬೈಡೆನ್ ಅವರ ನಿವಾಸದ ನಿರ್ಬಂಧಿತ ವಾಯು ಪ್ರದೇಶಕ್ಕೆ ವಿಮಾನ ಪ್ರವೇಶಿಸಿತ್ತು. ಅಧ್ಯಕ್ಷರು ಹಾಗೂ ಅವರ ಪತ್ನಿ ಮೇಲೆ ಯಾವುದೇ ದಾಳಿ ನಡೆದಿಲ್ಲ. ಅವರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ.
ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡ ನಂತರ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರನ್ನು ಮರಳಿ ಬೀಚ್ ಹೌಸ್ಗೆ ಬಿಡಲಾಯಿತು ಎಂದು ಶ್ವೇತಭವನದ ಅಧಿಕಾರಿ ತಿಳಿಸಿದ್ದಾರೆ.
ವಿಮಾನ ತಪ್ಪಾಗಿ ನಿರ್ಬಂಧಿತ ಪ್ರದೇಶವನ್ನು ಪ್ರವೇಶಿಸಿದೆ. ಪ್ರವೇಶಿಸಿದ ತಕ್ಷಣವೇ ಅದನ್ನು ಹೊರಗೆ ಕಳುಹಿಸಲಾಯಿತು. ಪೈಲಟ್ ಅನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಸೀಕ್ರೆಟ್ ಹೌಸ್ ವಕ್ತಾರ ಆಂಥೋನಿ ಗುಗ್ಲಿಲ್ಮಿ ತಿಳಿಸಿದ್ದಾರೆ