ಕಿಚ್ಚ ಸುದೀಪ್ ನಟನೆಯ ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಚಿತ್ರ ಫೀವರ್ ಜೋರಾಗಿದೆ. ಬಹುಭಾಷೆಗಳಲ್ಲಿ ಸಿನಿಮಾ 3ಡಿ ರೂಪದಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಸುದೀಪ್‌ನ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಇದೀಗ ಬಾಲಿವುಡ್ ಬಿಗ್‌ಬಿ ಕೂಡ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ.
ಕನ್ನಡ ಸ್ಟಾರ್ ಸುದೀಪ್,ಪ್ಯಾನ್ ಇಂಡಿಯಾ ಸಿನಿಮಾ `ವಿಕ್ರಾಂತ್ ರೋಣ’ 3ಡಿ ರೂಪದಲ್ಲಿ ಐದು ಭಾಷೆಗಳಲ್ಲಿ ಜುಲೈ 28ಕ್ಕೆ ತೆರೆಗೆ ಬರಲಿದೆ ಅಂತ ಅವರು ಕನ್ನಡ ಟ್ರೈಲರ್ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.
ಅನೂಪ್ ಭಂಡಾರಿ ನಿರ್ಮಾಣದ ವಿಕ್ರಾಂತ್ ರೋಣ ಎಲ್ಲೆಡೆ ಹೊಸ ಕ್ರೇಜ್ ಹುಟ್ಟಿಸಿದೆ.