Bengaluru: ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಚಿತ್ರನಟ ಅನಂತ್ ನಾಗ್, ಹೆಸರಾಂತ ಶಹನಾಯ್ ವಾದಕ ಎಸ್.ಬಲ್ಲೇಶ್ ಭಜಂತ್ರಿ ಹಾಗೂ ಶರತ್ ಶರ್ಮ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಡಿ ಲಿಟ್ ಪದವಿ ನೀಡಲು ನಿರ್ಧರಿಸಲಾಗಿದೆ.
ಕೋಲಾರದ ನಂದಿನಿ ಪ್ಯಾಲೇಸ್‌ನಲ್ಲಿ ಶುಕ್ರವಾರ(ಜು.15) ನಡೆಯಲಿರುವ ವಿ.ವಿ.ಯ ಘಟಿಕೋತ್ವವ ಸಮಾರಂಭದಲ್ಲಿ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ ಸೇರಿದಂತೆ ಮತ್ತಿತರ ಗಣ್ಯರು ಸಾಧಕರಿಗೆ ಡಿ.ಲಿಟ್ ಪದವಿ ನೀಡಿ ಗೌರವಿಸಲಿದ್ದಾರೆ ಎಂದು ಕುಲಪತಿ ಪ್ರೊ. ನಿರಂಜನ ವಾನಳ್ಳಿ ತಿಳಿಸಿದ್ದಾರೆ.
ಇದು ವಿಶ್ವವಿದ್ಯಾನಿಲಯದ ಮೊದಲ ಘಟಿಕೋತ್ಸವವಾಗಿದ್ದು, ವಿವಿಧ ವಿಷಯಗಳಲ್ಲಿಮೊದಲ ರ‌್ಯಾಂಕ್ ಪಡೆದಿರುವ 41 ಅಭ್ಯರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕನ್ನಡ, ಹಿಂದಿ, ಮರಾಠಿ, ಮಲೆಯಾಳಿ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ದಕ್ಷಿಣ ಭಾರತದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ ಕೆಲವೇ ಕೆಲವು ನಟರಲ್ಲಿ ಅನಂತ್ ನಾಗ್ ಕೂಡ ಒಬ್ಬರು.
ಪದ್ಮಶ್ರೀ ಎಸ್ ಬಲ್ಲೇಶ್ ಭಜಂತ್ರಿ ಅವರು ಭಾರತರತ್ನ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಶಾಹನ್ ವಾಯ್ ವಾದಕರಾದ ಬಿಸ್ಮಿಲ್ಲಾ ಖಾನ್ ಅವರ ಶಿಷ್ಯರು. ಸುಮಾರು ನಾಲ್ಕು ದಶಕಗಳ ಕಾಲ ಬಿಸ್ಮಿಲ್ಲಾ ಖಾನ್ ಅವರ ಜತೆ ಶಹನ್ ವಾಯ್ ನುಡಿಸಿರುವ ಹೆಗ್ಗಳಿಕೆ ಬಜಂತ್ರಿ ಅವರದ್ದು.
ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಬೆಂಗಳೂರಿನ ಐ ಸ್ಪಿರ್ಟ ಸಾಪ್ಟ್ ರ್ವೇ ಕಂಪನಿಯ ಸಹಾ ಸಂಸ್ಥಾಪಕ ಶರತ್ ಶರ್ಮ ಅವರು ಕೂಡ ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾಗಿದ್ದಾರೆ. ದೇಶದೆಲ್ಲೆಡೆ ಇಂದು ಮನೆಮತರಾಗಿರುವ ಡಿಜಿಟಲ್ ಪೇಮೆಂಟ್ ನ ಹಿಂದಿನ ರೂವಾರಿಯೇ ಶರತ್ ಶರ್ಮ ಎಂದು ಕರೆಯಲಾಗುತ್ತದೆ.
ಅನಂತ್‌ನಾಗ್, ಭಜಂತ್ರಿ, ಶರತ್‌ಗೆ ಬೆಂಗಳೂರು ಉತ್ತರ ವಿವಿ ಗೌರವ ಡಾಕ್ಟರೇಟ್, ನಾಳೆ ಪ್ರದಾನ
Previous Article‘ಗಾಳಿಪಟ-2’ ಎಣ್ಙೆ ಸಾಂಗ್ ರಿಲೀಸ್!
Next Article ಅಂಡಾಣು ಸಂಗ್ರಹ, ಮಾರಾಟ ಜಾಲ ಪತ್ತೆ: 4 ಆಸ್ಪತ್ರೆ ಬಂದ್