ಮಧ್ಯಪ್ರದೇಶ ರಾಜ್ಯದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಯೊಂದು (Cheetah) ಸಾವನ್ನಪ್ಪಿದ್ದು, ಇದು ಒಂದು ತಿಂಗಳೊಳಗೆ ಸಾವನ್ನಪ್ಪಿದ ಎರಡನೇ ಚಿರತೆಯಾಗಿದೆ.
ಸತ್ತಿದ್ದು ಆರು ವರ್ಷದ ಗಂಡು ಚಿರತೆಯಾಗಿದ್ದು ಇದರ ಸಾವಿಗೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾದ 12 ಚಿರತೆಗಳಲ್ಲಿ ಇದು ಒಂದಾಗಿದೆ.
ಕಳೆದ ವರ್ಷ ಭಾರತವು ಚಿರತೆಗಳನ್ನು ಭಾರತಕ್ಕೆ ಪುನಃ ಪರಿಚಯಿಸಿತು. ನಮೀಬಿಯಾದಿಂದ ತರಲಾದ ಮೊದಲ ಗುಂಪಿನ ಚಿರತೆಗಳ ಪೈಕಿ ಒಂದಾಗಿದ್ದ ಹೆಣ್ಣು ಚಿರತೆಯೊಂದು ಮೂತ್ರಪಿಂಡದ ಕಾಯಿಲೆಯಿಂದ ಮಾರ್ಚ್ 27 ರಂದು,ಸಾವನ್ನಪ್ಪಿತ್ತು.
ಭಾರತದಲ್ಲಿ ಚಿರತೆಗಳ (Cheetah) ಮರುಪರಿಚಯವು ಉತ್ಸಾಹವನ್ನು ಉಂಟುಮಾಡಿದೆ ಮತ್ತು ಅವುಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಯು ಪತ್ರಿಕೆಗಳ ಮುಖಪುಟದಲ್ಲಿ ವರದಿಯಾಗುತ್ತಿದೆ.
ಕಳೆದ ವರ್ಷ ಭಾರತಕ್ಕೆ ನಮೀಬಿಯಾ ದೇಶದಿಂದ ಎಂಟು ಚಿರತೆಗಳನ್ನು(ಐದು ಗಂಡು ಮತ್ತು ಮೂರು ಹೆಣ್ಣು) ತರಲಾಯಿತು. ಈ ವರ್ಷ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚಿರತೆಗಳನ್ನು ಭಾರತಕ್ಕೆ ತರಲಾಯಿತು. ಅವನ್ನು ಕಾಡಿಗೆ ಬಿಡುವ ಮೊದಲು ಕುನೊದಲ್ಲಿನ ಉದ್ಯಾನವನದಲ್ಲಿ ನಿಯಂತ್ರಿತ ಕ್ವಾರಂಟೈನ್ ವಲಯದಲ್ಲಿ ಇರಿಸಲಾಗಿತ್ತು. ಅರಣ್ಯಾಧಿಕಾರಿಗಳು ಮತ್ತು ವೈದ್ಯರ ತಂಡವು ಅವುಗಳ ಚಲನವಲನದ ಮೇಲೆ ನಿಗಾ ಇರಿಸಿದ್ದಾರೆ.
ಮಾರ್ಚ್ 29 ರಂದು ನಾಲ್ಕು ಚಿರತೆ ಮರಿಗಳ ಜನನವನ್ನು ಭಾರತವು ಸ್ವಾಗತಿಸಿತು. ಅವು ನಮೀಬಿಯಾದಿಂದ ತಂದ ಹೆಣ್ಣು ಚಿರತೆಗಳ ಪೈಕಿ ಒಂದಕ್ಕೆ ಜನಿಸಿದವಾಗಿದ್ದವು.
ಚಿರತೆಗಳು ಭಾರತದಲ್ಲಿ ಸಾಂಕೇತಿಕ ಮೌಲ್ಯವನ್ನು ಹೊಂದಿವೆ. ಅವು ಅನೇಕ ಜಾನಪದ ಕಥೆಗಳ ಭಾಗವಾಗಿವೆ. ಆದರೆ 1947 ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ಅಳಿವಿನಂಚಿನಲ್ಲಿರುವ ಏಕೈಕ ದೊಡ್ಡ ಸಸ್ತನಿ ಚಿರತೆಯಾಗಿತ್ತು.
ವನ್ಯಜೀವಿ ತಜ್ಞರು ಭಾರತದಲ್ಲಿ ಚಿರತೆಗಳ ಮರುಪರಿಚಯವನ್ನು ಸ್ವಾಗತಿಸಿದ್ದಾರೆ ಆದರೆ ಕೆಲವರು ಚಿರತೆಗಳ (Cheetah) ಸಹಜ ಬದುಕಿಗೆ ಒದಗಬಹುದಾದ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ALSO READ –