ಬೆಂಗಳೂರು – ಕಾಂಗ್ರೆಸ್ ಸದಾಕಾಲ ಓಲೈಕೆ ರಾಜಕಾರಣ ಮಾಡುತ್ತದೆ ಅಲ್ಪಸಂಖ್ಯಾತರ ಪರವಾಗಿ ನಿಲ್ಲುತ್ತದೆ ಎನ್ನುವ ಸಾಂಪ್ರದಾಯಿಕ ಹಣೆ ಪಟ್ಟಿಯನ್ನು ಕಳಚಿಕೊಳ್ಳಲು ಮುಂದಾಗಿದೆ.
ಬಿಜೆಪಿ ಮತ್ತು ಸಂಘ ಪರಿವಾರದ ಮಾದರಿಯಲ್ಲಿ ಹಿಂದೂಗಳ ಓಲೈಕೆಗೆ ಮುಂದಾಗಿರುವ ರಾಜ್ಯ ಸರ್ಕಾರ ಇದೆ ಮೊದಲ ಬಾರಿಗೆ ಇಂತಹ ಆದೇಶವನ್ನು ಹೊರಡಿಸಿದೆ.
ಶ್ರಾವಣ ಮಾಸ ಆರಂಭದೊಂದಿಗೆ ಹಿಂದೂಗಳ ಸಾಂಪ್ರದಾಯಿಕ ಹಬ್ಬಗಳು ಸಾಲು ಸಾಲಾಗಿ ಆರಂಭಗೊಳ್ಳುತ್ತವೆ. ಇದಕ್ಕೆ ಓ ನಾಮ ಹಾಡುವುದು ವರಮಹಾಲಕ್ಷ್ಮಿ ವ್ರತ.
ವರ ಮಹಾ ಲಕ್ಷ್ಮಿ ಹಬ್ಬದ ಹಿನ್ನೆಲೆ ಯಲ್ಲಿ ದೇವಾಲಯಗಳಿಗೆ ವಿಶೇಷ ಪೂಜೆ ಸಲ್ಲಿಸಲು ಆಗಮಿಸುವ ಮಹಿಳೆಯರಿಗೆ ಹರಿಶಿಣ, ಕುಂಕುಮ, ಬಳೆ ಮೊದಲಾದ ವಸ್ತುಗಳನ್ನು ಉಡುಗೊರೆಯಾಗಿ ನೀಡಲು ತೀರ್ಮಾನಿಸಿದೆ. ಈ ಮೂಲಕ ಕಾಂಗ್ರೆಸ್ ಹಿಂದು ವಿರೋಧಿ ಎಂಬ ಆರೋಪದಿಂದ ಹೊರಬರಲು ಪ್ರಯತ್ನ ನಡೆಸಿದೆ.