ಬೆಂಗಳೂರು, ಜು.19-ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳವು ಮಾಡುತ್ತಿದ್ದ ಇಬ್ಬರು ಕುಖ್ಯಾತ ಸರಗಳ್ಳರನ್ನು ಅನ್ನಪೂರ್ಣೇಶ್ವರಿನಗರ ಪೋಲೀಸರು ಬಂಧಿಸಿದ್ದಾರೆ.
ವಿಶ್ವೇಶ್ವರಯ್ಯ ಲೇಔಟ್, ಮುದ್ದಿನಪಾಳ್ಯದ ಸುರೇಶ್(26) ಹಾಗು ಸಂಗಮೇಶ ಮ್ಯಾಗೇರಿ ಅಲಿಯಾಸ್ ಸಂಗಮೇಶ( 22) ಬಂಧಿತ
ಆರೋಪಿಗಳಾಗಿದ್ದಾರೆ. ಬಂಧಿತ ಸರಗಳ್ಳರಿಂದ 1.25ಲಕ್ಷ ಮೌಲ್ಯದ 29 ಗ್ರಾಂ ತೂಕದ ಕಟ್ ಆಗಿರುವ ಚಿನ್ನದ ಸರವನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ಅವರು ತಿಳಿಸಿದ್ದಾರೆ.
ಆರೋಪಿಗಳು ಕಳೆದ ಜು.12 ರಂದು ರಾತ್ರಿ 9ರ ವೇಳೆ ಅನ್ನಪೂರ್ಣೇಶ್ವರಿನಗರದ ಡಿ ಗ್ರೂಪ್ ಲೇಔಟ್ ನ ಶೀಲಾ ಅವರು 22ನೇ ಕ್ರಾಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಒಂದು ಹೀರೋ ಹೆಚ್‍ಎಫ್ ಡಿಲಕ್ಸ್ ಮೋಟಾರ್ ಸೈಕಲ್‍ನಲ್ಲಿ ಬಂದ ಬಂಧಿತ ಆರೋಪಿಗಳು ಅವರ ಕತ್ತಿನಿಂದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ.
ಶೀಲಾ ಅವರು ಚಿನ್ನದ ಮಾಂಗಲ್ಯ ಸರವನ್ನು ಗಟ್ಟಿಯಾಗಿ ಹಿಡಿದುಕೊಳ್ಳಲಾಗಿ ಚಿನ್ನದ ಮಾಂಗಲ್ಯ ಸರದ ಅರ್ಧ 29 ಗ್ರಾಂ ತೂಕದ ಕಟ್ ಆಗಿರುವ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದರು.
ಈ ಸಂಬಂಧ ಶೀಲಾ ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಅನ್ನಪೂರ್ಣೇಶ್ವರಿನಗರ ಪೋಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Previous Articleಗಿಣಿ ಹುಡುಕಿಕೊಟ್ಟವರಿಗೆ 50 ಸಾವಿರ ನಗದು ಬಹುಮಾನ ..!
Next Article ಅಮಲಿನಲ್ಲಿ ಜಗಳ ಓರ್ವನ ಹತ್ಯೆ..