ಬೆಂಗಳೂರು, ನ.21 – ಮಹಾನಗರ ಬೆಂಗಳೂರಿನ ಪಿ.ಜಿ. ಗಳಲ್ಲಿನ ಅಕ್ರಮಗಳು ಹಾಗೂ ಅವ್ಯವಸ್ಥೆಗಳಿಗೆ ಕಡಿವಾಣ ಹಾಕಲು ಬೆಂಗಳೂರು ಪೊಲೀಸ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಂದಾಗಿವೆ.
ಅಕ್ರಮಗಳು ಹಾಗೂ ಅವ್ಯವಸ್ಥೆ ಬಗ್ಗೆ ಪಿಜಿಯ ಅಕ್ಕ- ಪಕ್ಕದ ಮನೆಯವರಿಂದ ಬಿಬಿಎಂಪಿಗೆ ಬರುವ ದೂರುಗಳ ಹಿನ್ನೆಲೆಯಲ್ಲಿ ಬಿಬಿಎಂಪಿ ಪಿಜಿಗಳಿಗೆ ಹೊಸ ಗೈಡ್ ಲೈನ್ ಬಿಡುಗಡೆ ಮಾಡಲು ಮುಂದಾಗಿದೆ.
ಇದರ ಬೆನ್ನಲ್ಲೇ ನಗರದ ಪಿಜಿಗಳ ಅಂಕಿ ಅಂಶ ಕಲೆ ಹಾಕಲು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಅವರು ಸಲಹೆ ನೀಡಿದ್ದಾರೆ.
ಜೊತೆಗೆ ಪಿಜಿ,ಗಳಿಗೆ ವೆಬ್ ಪೋರ್ಟಲ್ ನೀಡಲಾಗಿದ್ದು ಅದಕ್ಕೆ ಪಿಜಿ ಮಾಲೀಕರು ಮಾಹಿತಿ ಅಪ್ಲೋಡ್ ಮಾಡಬಹುದು ಎಂದು ತಿಳಿಸಿದ್ದಾರೆ. ನಗರದಲ್ಲಿ ಸುಮಾರು 5 ಸಾವಿರ ಪಿಜಿ ಹಾಸ್ಟೆಲ್ ಗಳಿವೆ ಎಂದು ಸುದ್ದಿಗೋಷ್ಠಿಯಲ್ಲಿ ಬಿ ದಯಾನಂದ್ ತಿಳಿಸಿದರು. ಪಿಜಿಗಳಲ್ಲಿ ಸುಮಾರು 4 ಲಕ್ಷ ಜನ ವಾಸವಾಗಿದ್ದಾರೆ. ಬೆಂಗಳೂರಿನ ಪೂರ್ವ, ಸೌತ್ ಈಸ್ಟ್, ವೈಟ್ ಫೀಲ್ಡ್ ಭಾಗದಲ್ಲಿ ಹೆಚ್ಚಾಗಿ ವಾಸವಾಗಿದ್ದಾರೆ. ಐಟಿ ಬಿಟಿ ಕಂಪನಿ ನೌಕರರು ಹೆಚ್ಚಾಗಿ ಪಿಜಿಗಳಲ್ಲಿ ವಾಸ ಮಾಡುತ್ತಿದ್ದಾರೆ ಪಿಜಿ ನಿವಾಸಿಗಳ ವಿವರ ಹೆಚ್ಚು ಗೊತ್ತಿಲ್ಲ. ಹೀಗಾಗಿ ಕಾನೂನಿನ ವಿಚಾರದಲ್ಲಿ ತೊಡಕುಗಳಾಗುತ್ತಿದೆ. ಪಿಜಿ, ಹಾಸ್ಟೆಲ್ ಗಳಿಗೆ ವೆಬ್ ಪೋರ್ಟಲ್ ಸಜೆಸ್ಟ್ ಮಾಡಿದ್ದೀವಿ. ಪಿಜಿ ಮಾಲೀಕರು ಇದಕ್ಕೆ ಮಾಹಿತಿ ಅಪ್ಲೋಡ್ ಮಾಡಬಹುದು. ಆದರೆ ಇದು ಕಡ್ಡಾಯವೇನಲ್ಲ. ಮಾಲೀಕರೇ ಸ್ವಯಂಪ್ರೇರಿತವಾಗಿ ಮಾಡಬಹುದು. ಮಾರತ್ತಹಳ್ಳಿಯ 167 ಪಿಜಿಗಳಲ್ಲಿ ಇದನ್ನ ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ. ಈ ಯೋಜನೆ ಈಗಾಗಲೇ ದೇಶದ ಹಲವಾರು ರಾಜ್ಯದಲ್ಲಿ ಇದೆ. ಇದರಿಂದ ಯಾರು ಬರಲಿದ್ದಾರೆ, ಯಾರು ಪಿಜಿಗಳಲ್ಲಿ ಇರಲಿದ್ದಾರೆ ಎಂಬ ಮಾಹಿತಿ ದೊರೆಯಲಿದೆ ಎಂದು ತಿಳಿಸಿದರು.
ಗೈಡ್ ಲೈನ್ ಬಿಡುಗಡೆ:
ನಗರದಲ್ಲಿ ಬಿಬಿಎಂಪಿಯ ವಾಣಿಜ್ಯ ಪರವಾನಗಿ ಹಾಗೂ ಸುರಕ್ಷತೆಯ ನಿಯಮ ಉಲ್ಲಂಘಿಸಿ ಹಲವು ಪಿಜಿಗಳು ನಡೆಯುತ್ತಿವೆ. ಇದನ್ನು ಪರಿಶೀಲಿಸಲು ಹಾಗೂ ವಾಣಿಜ್ಯ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಲಾಗಿದೆ. ಆ ಬಳಿಕ ಮಾರ್ಗಸೂಚಿ ಹೊರಡಿಸಲಾಗುವುದು ಅಂತ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಮಾನವಸಂಪನ್ಮೂಲಗಳಿಗೆ ಅನುಗುಣವಾಗುವಂತ ರೀತಿಯಲ್ಲಿ ಪಿಜಿಯನ್ನ ನಿರ್ವಾಹಿಸುತ್ತಿಲ್ಲ. ದುಡ್ಡಿನ ಆಸೆಗೆ ನಿಯಮ ಮೀರಿ ಒಂದು ರೂಂನಲ್ಲಿ ಹೆಚ್ಚಿನ ಜನರನ್ನು ಹಾಕಲಾಗುತ್ತಿದೆ. ಮೂಲ ಸೌಕರ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ. ಒಂದು ಪಿಜಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯದ ವ್ಯವಸ್ಥೆ ಇಲ್ಲ. ಸ್ವಚ್ಚತೆ ಕಾಪಾಡುವಲ್ಲಿ ವಿಫಲವಾಗಿದ್ದಾರೆ. ನಿಯಮ ಮೀರಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಹೀಗೆ ಪಿಜಿಗಳಿರುವ ಏರಿಯಾಗಳಿಂದ ಸಾರ್ವಜನಿಕರಿಂದ ಸಾಕಷ್ಟು ಕಂಪ್ಲೇಂಟ್ ಬಂದಿವೆ. ಈ ನಿಟ್ಟಿನಲ್ಲಿ ಪಿಜಿಗಳಿಗೆ ಬಿಬಿಎಂಪಿಯಿಂದ ಹೊಸ ಗೈಡ್ ಲೈನ್ ರಿಲೀಸ್ ಮಾಡಲು ನಿರ್ಧಾರ ಕೈಗೊಂಡಿದ್ದು, ನಗರದಲ್ಲಿ ಬಿಬಿಎಂಪಿಯ ವಾಣಿಜ್ಯ ಪರವಾನಗಿ ಹಾಗೂ ಸುರಕ್ಷತೆಯ ನಿಯಮ ಉಲ್ಲಂಘಿಸಿ ಹಲವು ಪಿಜಿಗಳು ನಡೆಯುತ್ತಿವೆ. ಇದನ್ನು ಪರಿಶೀಲಿಸಲು ಹಾಗೂ ವಾಣಿಜ್ಯ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಲಾಗಿದೆ. ಆ ಬಳಿಕ ಮಾರ್ಗಸೂಚಿ ಹೊರಡಿಸಲಾಗುವುದು ಅಂತ ಬಿಬಿಎಂಪಿ (BBMP) ಆಯುಕ್ತ ತುಷಾರ್ ಗಿರಿನಾಥ್ ಹೇಳುತ್ತಿದ್ದಾರೆ.
5 Comments
прокарниз прокарниз .
вывод из запоя в ростове вывод из запоя в ростове .
вывод из запоя в санкт петербурге вывод из запоя в санкт петербурге .
купить диплом в москве цена купить диплом в москве цена .
Пошаговая инструкция по официальной покупке диплома о высшем образовании