ರಾಜ್ಯ ವಿಧಾನಸಭೆ Election ಪ್ರಚಾರ ಭರಾಟೆಯಿಂದ ನಡೆಯುತ್ತಿದೆ. ಅಖಾಡದಲ್ಲಿ ಕಣಕ್ಕಿಳಿದಿರುವ ಅಭ್ಯರ್ಥಿಗಳು ಶಕ್ತಿ ಪ್ರದರ್ಶನದ ಮೂಲಕ ಮತದಾರರ ಮನ ಗೆಲ್ಲಲು ಕಸರತ್ತು ನಡೆಸಿದ್ದಾರೆ.
ರಾಜಕೀಯ ಪಕ್ಷಗಳ ನಾಯಕರಂತೂ, ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ನಾನಾ ರೀತಿಯ ಪ್ರಯತ್ನಗಳನ್ನು ನಡೆಸಿದ್ದಾರೆ. ಅಖಾಡದಲ್ಲಿ ಆರೋಪ- ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ. ಮತ ಗಿಟ್ಟಿಸಲು ಭರಪೂರ ಭರವಸೆಗಳ ಘೋಷಣೆ ಮಾಡುತ್ತಿದ್ದರೆ ಕೆಲವು ಕಡೆ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಅನೇಕ ಮಾರ್ಗಗಳ ಮೂಲಕ ಮತದಾರರನ್ನು ಓಲೈಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. (Bengaluru)
ಈ ಬಾರಿ ನಡೆಯುತ್ತಿರುವ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ವಿರುದ್ಧ ಶೇಕಡ 40ರಷ್ಟು ಕಮಿಷನ್ ಆರೋಪದ ಮೂಲಕ ಭ್ರಷ್ಟಾಚಾರದ ಆರೋಪಗಳ ಸುರಿಮಳೆಯನ್ನೇ ಮಾಡುತ್ತಿರುವ ಕಾಂಗ್ರೆಸ್ ನಾಯಕರು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜನರಿಗೆ ಹಲವು ಜನಪರ ಯೋಜನೆಗಳನ್ನು ಕೊಡುವುದರ ಜೊತೆಗೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಭರವಸೆ ನೀಡುತ್ತಿದ್ದಾರೆ.
ಮತ್ತೊಂದೆಡೆ ಬಿಜೆಪಿ, ಪ್ರತಿ ಪಕ್ಷ ತನ್ನ ವಿರುದ್ಧ ಮಾಡುತ್ತಿರುವ ಆರೋಪಗಳೆಲ್ಲ ಸುಳ್ಳು ಡಬಲ್ ಇಂಜಿನ್ ಸರ್ಕಾರದ ಮೂಲಕ, ರಾಜ್ಯದಲ್ಲಿ ಅಭಿವೃದ್ಧಿಯ ಪರ್ವ ಆರಂಭಗೊಂಡಿದೆ ಇವು ಮುಂದುವರಿಯಬೇಕಾದರೆ ಮತ್ತೆ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ.
ಪ್ರಾದೇಶಿಕ ಮಂತ್ರ ಜಪದೊಂದಿಗೆ ಜೆಡಿಎಸ್ ಪಂಚರತ್ನ ಯೋಜನೆಗಳನ್ನು ಮುಂದಿಟ್ಟು ಮತ ಮತಯಾಚಿಸುತ್ತಿದೆ. (Bengaluru)
ಎಲ್ಲವೂ ನಮ್ಮ ಕಣ್ಣಿಗೆ ಕಾಣುತ್ತಿರುವ ಸಂಗತಿಗಳಾಗಿವೆ. ಈ ಭರವಸೆ, ಘೋಷಣೆಗಳೆಲ್ಲ ಇಡೀ ರಾಜ್ಯಕ್ಕೆ ಸಂಬಂಧಪಟ್ಟ ವಾಗಿವೆ. ಹಾಗೆ ಎಷ್ಟೋ ಸಂಗತಿಗಳು ರಾಜಧಾನಿ ಬೆಂಗಳೂರಿಗೂ ಅನ್ವಯಿಸುತ್ತಿವೆ. ಇವುಗಳ ಹೊರತಾಗಿ ಸಿಲಿಕಾನ್ ಸಿಟಿ ರಾಜಧಾನಿ ಬೆಂಗಳೂರನ್ನು ನೋಡಬೇಕಿದೆ. ರಾಜ್ಯದಲ್ಲಿ ಅತಿ ಹೆಚ್ಚು ಆರ್ಥಿಕ ಸಂಪನ್ಮೂಲ ಸಂಗ್ರಹವಾಗುವ ಪ್ರದೇಶ ಹಾಗೂ ಅತಿ ಹೆಚ್ಚು ಜನದಟ್ಟಣೆ ಇರುವ ಪ್ರದೇಶ ಎಂದು ಬೆಂಗಳೂರನ್ನು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ 28 ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿಂದ ಆಯ್ಕೆಯಾಗುವ ಪ್ರತಿನಿಧಿಗಳು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ.
ಬೆಂಗಳೂರಿನಲ್ಲಿ (Bengaluru) ನೂರಾರು ಸಮಸ್ಯೆಗಳಿವೆ ಒಂದೊಂದು ಸಮಸ್ಯೆಯ ಉದ್ದ ಆಳ ಅಗಲ ವಿಭಿನ್ನವಾಗಿದೆ. ಈ ಸಮಸ್ಯೆಗಳಿಗೆ ನಮ್ಮ ಪ್ರತಿನಿಧಿಗಳು ಪರಿಹಾರ ರೂಪಿಸುತ್ತಾರೆ ಎಂದು ಇಲ್ಲಿನ ಮತದಾರರು ನಂಬಿದ್ದಾರೆ. ಹಾಗೆ ಈ ಚುನಾವಣೆಯಲ್ಲಿ ಸಂಚಾರ ದಟ್ಟಣೆ ಒಳಚರಂಡಿ ಕುಡಿಯುವ ನೀರು ರಾಜ ಕಾಲುವೆಗಳ ಒತ್ತುವರಿ ತೆರವು ಸೇರಿದಂತೆ ಹಲವು ವಿಷಯಗಳು ಪ್ರಮುಖವಾಗಿ ಚರ್ಚೆಗೆ ಬರುತ್ತವೆ ಅದಕ್ಕೆ ರಾಜಕೀಯ ಪಕ್ಷಗಳು ಪರಿಹಾರವನ್ನು ನೀಡುತ್ತಾರೆ ಎಂದು ಕಾಯುತ್ತಿದ್ದಾರೆ. ಆದರೆ, ಚುನಾವಣೆ ಘೋಷಣೆಯಾಗಿ ಮತದಾನದ ದಿನ ಸಮೀಪಿಸಿದರೂ, ಇಂತಹ ಯಾವುದೇ ಭರವಸೆ ಆಶ್ವಾಸನೆ ಜನರನ್ನು ತಲುಪಿಯೇ ಇಲ್ಲ ಒಟ್ಟಾರೆ ರಾಜಕೀಯ ಪಕ್ಷಗಳು ಬೆಂಗಳೂರಿನ ಜನರನ್ನು ಕೇವಲ ಮತ ಹಾಕುವ ಯಂತ್ರಗಳು ಎಂಬಂತೆ ಪರಿಗಣಿಸಿರಬಹುದು ಎಂಬ ಅನುಮಾನಗಳು ಕಾಡುತ್ತಿವೆ.
Also read.