ಡಾ. ರಾಜಕುಮಾರ್ ಹಾಗು ಬಿ. ಸರೋಜಾದೇವಿ ಅಭಿನಯಸಿದ್ದ ಸೂಪರ್ ಹಿಟ್ ಸಿನಿಮಾ “ಭಾಗ್ಯವಂತರು” ಜುಲೈ 8ರಂದು ಹೊಸ ತಂತ್ರಜ್ಞಾನದೊಂದಿಗೆ ರೀ ರಿಲೀಸ್ ಆಗಲಿದೆ.
ಮೇರುನಟ ಡಾ. ರಾಜ್ಕುಮಾರ್ ನಟಿಸಿದ ಅನೇಕ ಸಿನಿಮಾಗಳು ಈಗಾಗಲೇ ಮರುಬಿಡುಗಡೆ ಆಗಿ ದಾಖಲೆ ಮಾಡಿವೆ. ಈಗ ಮತ್ತೊಮ್ಮೆ ‘ಭಾಗ್ಯವಂತರು’ ಸಿನಿಮಾ ರಿಲೀಸ್ ಆಗಲಿದೆ. ದ್ವಾರಕೀಶ್ ನಿರ್ಮಾಣ ಮಾಡಿದ್ದ ಈ ಸಿನಿಮಾದಲ್ಲಿ ಡಾ. ರಾಜ್ಕುಮಾರ್ ಮತ್ತು ಬಿ. ಸರೋಜಾದೇವಿ ಜೋಡಿಯಾಗಿ ನಟಿಸಿದ್ದರು. ಅಭಿಮಾನಿಗಳ ಫೇವರಿಟ್ ಸಿನಿಮಾಗಳ ಪಟ್ಟಿಯಲ್ಲಿ ‘ಭಾಗ್ಯವಂತರು’ ಚಿತ್ರ ಇಂದಿಗೂ ಸ್ಥಾನ ಪಡೆದುಕೊಂಡಿದೆ. ಈ ಚಿತ್ರಕ್ಕೆ ಹೊಸ ತಂತ್ರಜ್ಞಾನ ಅಳವಡಿಸಲಾಗಿದ್ದು, ಮುನಿರಾಜು ಎಂ. ಅವರು ಮರು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.
Previous Articleಮಾಜಿ ಶಾಸಕರ ಕಾರು ಡಿಕ್ಕಿ..
Next Article ಪೃಥ್ವಿ ಅಂಬರ್ ನಟನೆಯ ‘ಶುಗರ್ ಲೆಸ್ ಟ್ರೈಲರ್