Picture Credit – FORBES
ಇದು Artificial Intelligence ಜಮಾನಾ. ಇಡೀ ವಿಶ್ವದ ಪ್ರತಿ ವಿಷಯವೂ ಅಂಗೈ ಬೆರಳ ತುದಿಯಲ್ಲಿಯೇ ಲಭ್ಯವಿರುವ instant ಯುಗ. LKG ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯರೂ ತಮಗೆ ಬೇಕಾದ ಮಾಹಿತಿಯನ್ನು ಪಡೆಯಲು ಅಂತರ್ಜಾಲದ search engine ಗಳ ಮೊರೆ ಹೋಗುತ್ತಾರೆ. ಕೇಳಿದ್ದನ್ನೆಲ್ಲ ಕೊಡುವ search engine ಬಳಕೆಯ ಅನುಭವವನ್ನು ಮತ್ತಷ್ಟು ಸುಲಭವಾಗಿಸಲು ಕಳೆದ November ನಲ್ಲಿ Open AI ಎನ್ನುವ ಕಂಪನಿ “ChatGPT” ಎಂಬ chatbot ಅನ್ನು ವಿಶ್ವಕ್ಕೆ ಪರಿಚಯಿಸಿತು. ಇದಕ್ಕೆ ಬಂಡವಾಳ ಹೂಡಿದ್ದು “Microsoft“. ಮೊದಲ ದಿನದಿಂದಲೇ ಭಾರಿ ಸಂಚಲನವನ್ನು ಮೂಡಿಸಿದೆ ಈ ChatGPT.
ಏನಿದು ChatGPT (Chat Generative Pre-trained Transformer)?
ಹೆಸರೇ ಹೇಳುವಂತೆ ಇದರೊಂದಿಗೆ ನಾವು ಸಹಜ ಮತ್ತು ಸರಳವಾದ ಭಾಷೆಯಲ್ಲಿ chat ಮಾಡುತ್ತಾ, ಬೇಕಾದ ವಿಷಗಳನ್ನು ತಿಳಿದುಕೊಳ್ಳಬಹುದು.
ನಾವು ಕೇಳಿದ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು, ಅದಕ್ಕೆ ತಕ್ಕನಾದ ಮತ್ತು ಸ್ಪಷ್ಟವಾದ ಉತ್ತರವನ್ನು ಅದು ನೀಡುತ್ತದೆ.
ಒಂದು ವೇಳೆ, ಆ ಉತ್ತರ ನಮಗೆ ಸರಿ ಎನಿಸಿಲ್ಲದಿದ್ದರೆ ಅದೇ ಉತ್ತರವನ್ನು ಮತ್ತೊಂದು ಬಗೆಯಲ್ಲಿ ತಿಳಿಸುತ್ತದೆ.
ಈಗಿರುವ search engine ಗಳಿಗೂ ChatGPT ಗೂ ಇರುವ ವ್ಯತ್ಯಾಸವೇನು?
ಈಗಿರುವ search engine ಗಳಲ್ಲಿ ನಮಗೆ ಬೇಕಾದ ವಿಷಯವನ್ನು ಹೇಳಿದಾಗ, ಅದು ನಾವು ಹೇಳಿದ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಇರುವ ಹಲವು website ಗಳನ್ನು ತೋರಿಸುತ್ತದೆ. ನಾವು ಪ್ರತಿ website ಗೂ ಹೋಗಿ ನಮಗೆ ಬೇಕಾದ ಸಮರ್ಪಕ ಮಾಹಿತಿಯನ್ನು ಹುಡುಕಿಕೊಳ್ಳಬೇಕು.
ಆದರೆ, ChatGPT ಹಾಗಲ್ಲ. ನಮ್ಮ ನೇರ ಪ್ರಶ್ನೆಗೆ ಅದು ನೇರ ಉತ್ತರವನ್ನು ನೀಡುತ್ತದೆ.
ಉದಾಹರಣೆಗೆ – ಪ್ರಜಾಪ್ರಭುತ್ವದ ಮೇಲೆ ನಿಮಗೊಂದು ಪ್ರಬಂಧ ಬರೆಯಬೇಕು. search engine ನಲ್ಲಿ ಹುಡುಕಿದಾಗ, ಪ್ರಜಾಪ್ರಭುತ್ವಕ್ಕೆ ಸಂಬಂಧಿತ ವಿಷಯಗಳಿರುವ ಹಲವು website ಗಳನ್ನು ಅದು ನೀಡುತ್ತದೆ. ಅದರಲ್ಲಿ ನಾವು ಒಂದೊಂದೇ website ಅನ್ನು ಕ್ಲಿಕ್ ಮಾಡಿ ನೋಡಬೇಕು. ಆದರೆ ChatGPT ಗೆ ಪ್ರಜಾಪ್ರಭುತ್ವದ ಪ್ರಬಂಧ ಬರೆ ಎಂದು ಹೇಳಿದರೆ, ಅದು ಸ್ವತಃ ಪೂರ್ತಿ ಪ್ರಬಂಧವನ್ನು ಬರೆದುಕೊಡುತ್ತದೆ.
ಹೀಗೆ, ChatGPT ನಮ್ಮ ಪ್ರಶ್ನೆಯನ್ನು ಅರ್ಥೈಸಿಕೊಂಡು, ಅದಕ್ಕೆ ಸರಿಯಾದ ಉತ್ತರಗಳನ್ನು ನೀಡುತ್ತದೆ. ಹಾಗಾಗಿ ಇದರ ಮೂಲಕ ಮಾಹಿತಿ ಪಡೆಯುವುದು ಸುಲಭವಷ್ಟೇ ಅಲ್ಲ ವೇಗವಾಗಿಯೂ ಹೌದು.
Google ಅನ್ನು ಹಿಂದಿಕ್ಕುವುದೇ ChatGPT?
Microsoft ಬಿಡುಗಡೆ ಮಾಡಿದ ChatGPT ಅತ್ಯಂತ ಶೀಘ್ರವಾಗಿ ಜನರ ಮೆಚ್ಚುಗೆಯನ್ನು ಪಡೆಯಿತು. ಕೇವಲ 5 ದಿನಗಳಲ್ಲಿ ಒಂದು ಮಿಲಿಯನ್ ಜನರು ಅದನ್ನು ಬಳಸಲಾರಂಭಿಸಿದರು. Google search engine ನನ್ನೂ ಮೀರಿಸಿ, ChatGPT ಯೇ ಮುಂದಿನ Google ಆಗುವುದು ಎಂಬಷ್ಟರ ಮಟ್ಟಿಗೆ ChatGPT ಪ್ರಖ್ಯಾತಿಯನ್ನು ಪಡೆಯಿತು. ಇದರ ಓಟಕ್ಕೆ ಕಡಿವಾಣ ಹಾಕಲೆಂದೇ Google ನ CEO ಸುಂದರ್ ಪಿಚೈ (Sundar Pichai) ಫೆಬ್ರವರಿ 6 ರಂದು ತಮ್ಮ ಕಂಪನಿಯಿಂದ ಬಿಡುಗಡೆಗೊಳ್ಳುತ್ತಿರುವ “Bard” ಎನ್ನುವ AI Chatbot ಬಗ್ಗೆ ಘೋಷಿಸಿದರು.
ಏನಿದು Bard? ChatGPT ಗೂ Bard ಗೂ ಏನು ವ್ಯತ್ಯಾಸ?
Bard ಕೂಡ ChatGPT ನಂತೆಯೇ ಒಂದು chatbot. ChatGPT ಒಂದು Generative Pre-trained Transformer. ಅಂದರೆ ಅದರಲ್ಲಿ ಈಗಾಗಲೇ ಸಾಧ್ಯವಿರುವ ಎಲ್ಲ ಮಾಹಿತಿಯನ್ನೂ ತುಂಬಲಾಗಿದೆ. ಆದರೆ, ಸದ್ಯಕ್ಕೆ ಅದು ಹೊಂದಿರುವುದು 2021 ರ ವರೆಗಿನ ಮಾಹಿತಿಯನ್ನು ಮಾತ್ರ. ಹಾಗಾಗಿ 2021 ರ ನಂತರದ ವಿಷಯಗಳನ್ನು ChatGPT ನೀಡಲಾರದು. ಇದಕ್ಕೆ ಪ್ರತಿಯಾಗಿ, Bard real – time ಮಾಹಿತಿಯನ್ನು ಒದಗಿಸುತ್ತದೆಯಂತೆ. ಅಲ್ಲದೆ ಪದವನ್ನಷ್ಟೇ ಅಲ್ಲದೆ ಅದರ ಭಾವಾರ್ಥವನ್ನೂ ಅರ್ಥೈಸಿಕೊಂಡು, ನಿಖರವಾದ ಉತ್ತರವನ್ನು Bard ನೀಡಬಲ್ಲದು ಎಂದು Sundar Pichai ಹೇಳುತ್ತಾರೆ.
ಇವುಗಳನ್ನು ಹೇಗೆ ಬಳಸಬಹುದು?
ChatGPT ಈಗಾಗಲೇ ಜನರ ಬಳಕೆಗೆ ಲಭ್ಯವಿದೆ. ಅಲ್ಲದೆ, ಈ ಸೌಲಭ್ಯವನ್ನು ಸುಲಭವಾಗಿ ಎಲ್ಲರೂ ಬಳಸುವಂತಾಗಲಿ ಎಂದು Microsoft ಇದೀಗ ತಮ್ಮ search engine ಗಳಾದ Bing ಮತ್ತು Edge ನಲ್ಲಿ ChatGPT ಯನ್ನು ಅಳವಡಿಸಿದೆ. ಇಂದಿನಿಂದ ನೀವು Bing ಮತ್ತು Edge ಗಳನ್ನು ಹೊಸ ರೂಪದಲ್ಲಿ ಕಾಣಬಹುದು. Bard ಇನ್ನೂ testing ಹಂತದಲ್ಲಿರುವ ಕಾರಣ, ಅದನ್ನು ಜನತೆಯ ಬಳಕೆಗೆ ಇನ್ನೂ ಬಿಟ್ಟುಕೊಟ್ಟಿಲ್ಲ.