ಬೆಂಗಳೂರು,ಮಾ.1- ಬಿಜೆಪಿಗೆ ಮಲೆ ಮಾದೇಶ್ವರನ ಆಶೀರ್ವಾದ ಲಭಿಸಿದೆ.ವಿಜಯ ಸಂಕಲ್ಪ ಯಾತ್ರೆಗೆ ಜನ ಬೆಂಬಲ ವ್ಯಕ್ತವಾಗಿದ್ದು,ಈ ಯಾತ್ರೆ ಮೂಲಕ ಬಿಜೆಪಿಗೆ ಬಹುಮತ ಲಭಿಸಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ವಿಜಯ ಸಂಕಲ್ಪ ರಥ ಯಾತ್ರೆಗೆ ಚಾಲನೆ ನೀಡಿದ ಅವರು ಬಳಿಕ ಸೋಲಿಗ ಜನಾಂಗದವರ ಸಂವಾದ ಸಭೆಯಲ್ಲಿ ಮಾತನಾಡಿದರು.
ರಾಜ್ಯದ 4 ಕಡೆಗಳಿಂದ ಆರಂಭವಾಗುವ ಯಾತ್ರೆ 224 ಕ್ಷೇತ್ರಗಳಲ್ಲೂ ನಡೆಯಲಿದೆ. 150ಕ್ಕೂ ಹೆಚ್ಚು ರೋಡ್ ಷೋ, ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದೇವೆ. ಬೆಳಗಾವಿಯಲ್ಲಿ ಸಚಿವ ರಾಜನಾಥ ಸಿಂಗ್ ಅವರು ಉದ್ಘಾಟನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ನದ್ದು
ಮತಬ್ಯಾಂಕ್, ಜಾತಿವಾದ, ಭ್ರಷ್ಟಾಚಾರದ ರಾಜಕಾರಣವಾದರೆ ,ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಎಲ್ಲರ ವಿಕಾಸ, ಎಲ್ಲರ ವಿಶ್ವಾಸದೊಂದಿಗೆ ರಾಜಕಾರಣ ಮಾಡುತ್ತಿದೆ ಇದರಿಂದ, ದೇಶವು 5ನೇ ಬೃಹತ್ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದೆ ಎಂದು ಹೇಳಿದರು
ಮೊಬೈಲ್ ಉತ್ಪಾದನೆ, ಕೈಗಾರಿಕೆ ಸೇರಿ ಭಾರತದ ಪ್ರಗತಿ ಅತ್ಯದ್ಭುತ ಅವಕಾಶ ವಂಚಿತರು, ಶೋಷಿತರು, ಮಹಿಳೆಯರು, ಯುವಕರು, ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಎಲ್ಲ ವರ್ಗದವರಿಗೆ ಸೌಲಭ್ಯಗಳನ್ನು ನೀಡಲು ನಮ್ಮ ಪಕ್ಷ ಶ್ರಮಿಸುತ್ತಿದೆ. ಇದಕ್ಕೆ ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇ ಸಾಕ್ಷಿ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ,
ವಿಜಯ ಸಂಕಲ್ಪ ಯಾತ್ರೆಯನ್ನು ಜೆ.ಪಿ.ನಡ್ಡಾ ಅವರು ಉದ್ಘಾಟಿಸಿರುವುದು ಪಕ್ಷದವರಿಗೆ ಸಂತಸ, ಸಂಭ್ರಮದ ವಿಚಾರವಾಗಿದೆ. ಈ ರಥ 224 ಕ್ಷೇತ್ರಗಳಲ್ಲಿ ಸುಮಾರು 8 ಸಾವಿರ ಕಿಮೀ ಉದ್ದಕ್ಕೆ 4 ರಥಗಳು ಸಂಚರಿಸಲಿವೆ ಎಂದು ವಿವರಿಸಿದರು.
ರಾಜ್ಯದಲ್ಲಿ ಭಾಗ್ಯಲಕ್ಷ್ಮಿ ಯೋಜನೆ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ,ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೇಂದ್ರ- ರಾಜ್ಯ ಸರಕಾರಗಳು ಜಾರಿಗೊಳಿಸಿವೆ ಎಂದು ತಿಳಿಸಿದರು. ಪಕ್ಷದ ಸರಕಾರಗಳ ಜನಪರ ಯೋಜನೆಗಳನ್ನು ಗಮನಿಸಿ ಜನರು ಬಿಜೆಪಿಯನ್ನು ಗೆಲ್ಲಿಸುವುದು ಶತಸ್ಸಿದ್ಧ ಎಂದು ತಿಳಿಸಿದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅಲ್ಲಿ ನಾಯಕರೇ ಇಲ್ಲ ನಮ್ಮಲ್ಲಿ ಮೋದಿಜಿ, ಅಮಿತ್ ಶಾ ಅವರು ಸೇರಿದಂತೆ ಸಮರ್ಥ ನಾಯಕರಿದ್ದಾರೆ ಇದರಿಂದಾಗಿ ಮತ್ತೊಮ್ಮೆ ಬಿಜೆಪಿ ಗೆಲುವು ಖಚಿತ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಸೋಲಿಗರ ಸಮುದಾಯಕ್ಕೆ ವಿಶೇಷ ಗಮನ ನೀಡಲಿದ್ದೇವೆ. ಕಾಡಿನಲ್ಲಿ ವಾಸಿಸುವವರಿಗೆ ಸೌಲಭ್ಯ ಕೊಡಲು ಅರಣ್ಯ ಕಾಯ್ದೆಗೆ ಕೆಲವು ತಿದ್ದುಪಡಿ ತರಲಾಗುವುದು ಎಂದು ಪ್ರಕಟಿಸಿದರು.
ಇಲ್ಲಿ ಶೀಘ್ರವೇ ಹೊಸ ಆಸ್ಪತ್ರೆ ತೆರೆಯುತ್ತೇವೆ. ಸ್ತ್ರೀ ಸಾಮಥ್ರ್ಯ ಯೋಜನೆಯಡಿ ಅನುದಾನವನ್ನು ಇಲ್ಲಿನ ಮಹಿಳಾ ಸಂಘಕ್ಕೆ ಕೊಡಲಾಗುವುದು. ಸಣ್ಣ, ಅತಿ ಸಣ್ಣ ಕೈಗಾರಿಕೆ ಮಾಡಲು ಗರಿಷ್ಠ ಅನುದಾನ ನೀಡಲಿದ್ದೇನೆ ಎಂದು ತಿಳಿಸಿದರು.
ಕಾಡಿನ ಅಂಚಿನಲ್ಲಿರುವ ಜನರಿಗೆ ಪುನರ್ವಸತಿ ಕಲ್ಪಿಸುತ್ತೇವೆ ಎಂದು ತಿಳಿಸಿದರು. ಸಾಮಾಜಿಕ ನ್ಯಾಯ ಒದಗಿಸಲು ಬದ್ಧ ಎಂದರು.
ವಿಜಯ ಸಂಕಲ್ಪ ರಥ ಯಾತ್ರೆಗೆ ಮಲೆ ಮಾದೇಶ್ವರ ಬೆಟ್ಟದಲ್ಲಿ ಚಾಲನೆ ನೀಡಿದ್ದೇವೆ. ಬಿಜೆಪಿ ಗೆಲುವಿನ ಸಂಕಲ್ಪ ಸಿದ್ಧಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ- ರಾಜ್ಯ ಸರಕಾರಗಳ ಜನಕಲ್ಯಾಣ ಯೋಜನೆಗಳನ್ನು ಗಮನಿಸಿ ಜನರು ಬಿಜೆಪಿಗೆ ಮತ ಕೊಡಲಿದ್ದಾರೆ ಎಂದು ತಿಳಿಸಿದರು. ಮೀಸಲಾತಿ ಹೆಚ್ಚಳ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಅವರು ತಿಳಿಸಿದರು. ಜನರ ಆಶೀರ್ವಾದ ಬಿಜೆಪಿಯ ಶಕ್ತಿಯಾಗಲಿದೆ ಎಂದು ನುಡಿದರು.
ಕೇಂದ್ರ ಸಚಿವೆ ಕು.ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಪ್ರಪಂಚದ ಅತ್ಯಂತ ದೊಡ್ಡ ರಾಜಕೀಯ ಪಕ್ಷ ಬಿಜೆಪಿ. ಬೇಡರ ಕಣ್ಣಪ್ಪನ ಜಾತಿಗೆ ಸೇರಿದವರು ಸೋಲಿಗರು. ಅವರು ಕಷ್ಟಕರ ಜೀವನ ಮಾಡುತ್ತಿದ್ದಾರೆ. ಅವರಿಗೆ ಹೆಚ್ಚು ಶೈಕ್ಷಣಿಕ- ಔದ್ಯೋಗಿಕ ಅನುಕೂಲ ಮಾಡಿಕೊಡಲು ಬದ್ಧತೆಯನ್ನು ಪ್ರದರ್ಶಿಸಲಿದ್ದೇವೆ ಎಂದು ತಿಳಿಸಿದರು.
ಈ ವೇಳೆ ವಿವಿಧ ಜನಪದ ಕಲಾತಂಡಗಳು, ಗೊರವರ ಕುಣಿತ, ವೀರಗಾಸೆ, ಬೇಡಗಂಪಣ ನೃತ್ಯ, ಮಂಗಳವಾದ್ಯ ಮತ್ತಿತರ ಸಾಂಸ್ಕೃತಿಕ ಕಲಾ ತಂಡಗಳ ನಡುವೆ ಯಾತ್ರೆಗೆ ಚಾಲನೆ ನೀಡಲಾಯಿತು. ರಥಯಾತ್ರೆಗೆ ಸಜ್ಜುಗೊಂಡಿರುವ ಬಸ್ ಮೇಲೆ ನಿಂತು ಬಿಜೆಪಿ ನಾಯಕರು ಜನರತ್ತ ಕೈ ಬೀಸಿದರು
BJP ವಿಜಯಸಂಕಲ್ಪ ರಥ ಯಾತ್ರೆಗೆ ಚಾಲನೆ #vijayasankalpa
Previous ArticleAAP ಗೆ ಭಾಸ್ಕರ್ ರಾವ್ ಗುಡ್ ಬೈ-BJP ಸೇರಲು ನಿರ್ಧಾರ
Next Article ಉತ್ಸವಮೂರ್ತಿ ಯಡಿಯೂರಪ್ಪ ವಿಸರ್ಜನೆಗೊಳ್ಳಲಿದ್ದಾರೆ!