ಬೆಂಗಳೂರು,ಫೆ.8-
ಮುಂಬರುವ ವಿಧಾನಸಭೆ Electionಗೆ ಭರದ ಸಿದ್ಧತೆ ನಡೆಸಿರುವ BJP ಇದಕ್ಕಾಗಿ ವಿವಿಧ ಸಮಿತಿಗಳನ್ನು ರಚಿಸಿ, ತಕ್ಷಣವೇ ಕೆಲಸ ಆರಂಭಿಸುವಂತೆ ಸೂಚಿಸಿದೆ. ಮೊನ್ನೆ ನಡೆದ ಪಕ್ಷದ ಕಾರ್ಯಕಾರಿಣಿಯಲ್ಲಿ ಕೈಗೊಂಡ ನಿರ್ಧಾರದಂತೆ ಚುನಾವಣಾ ಪ್ರಣಾಳಿಕೆ ಸಲಹಾ ಸಮಿತಿ, ಜಿಲ್ಲಾ ಮೋರ್ಚಾ, ಫಲಾನುಭವಿಗಳ ಸಮ್ಮೇಳನ, ಯಾತ್ರಾ ಪ್ರಮುಖ್ ಸೇರಿದಂತೆ ಮತ್ತಿತರ ಸಮಿತಿಗಳಿಗೆ ನೇಮಕ ಮಾಡಿದೆ.
ಯಾತ್ರಾ ಪ್ರಮುಖ್‍ಗೆ ಸಚಿವ ಸಿ.ಸಿ.ಪಾಟೀಲ್, ವಿಧಾನಪರಿಷತ್ ಸದಸ್ಯ ರವಿಕುಮಾರ್ ಹಾಗು ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಅವರನ್ನು ನೇಮಿಸಿದೆ.
ಯಾತ್ರೆ 1 ಕ್ಕೆ ಎಂ.ರಾಜೇಂದ್ರ ಸಂಚಾಲಕರು, ಎಂ.ದತ್ತಾತ್ರಿ, ಕಿಶೋರ್ ಅವರನ್ನು ಸಹಸಂಚಾಲಕರನ್ನಾಗಿ ನೇಮಿಸಲಾಗಿದೆ.
ಯಾತ್ರೆ 2 ಕ್ಕೆ ಸಂಚಾಲಕರಾಗಿ ಛಲವಾದಿ ನಾರಾಯಣಸ್ವಾಮಿ ಹಾಗೂ ಸಚ್ಚಿದಾನಂದಮೂರ್ತಿ, ಅ.ದೇವೇಗೌಡ ಅವರು ಸಹಸಂಚಲಾಕರಾಗಿದ್ದಾರೆ.
ಯಾತ್ರೆ 3 ಕ್ಕೆ ಅರುಣ್ ಶಹಾಪುರ ಸಂಚಾಲಕರು ಹಾಗೂ ವಿವೇಕಾನಂದ ಡಬ್ಬಿ, ಮತ್ತು ಮಲ್ಲಿಕಾರ್ಜುನ ಬಾಳೆಕಾಯಿ ಅವರುಗಳನ್ನು ಸಹಸಂಚಾಲಕರನ್ನಾಗಿ ನೇಮಿಸಲಾಗಿದೆ.
ಯಾತ್ರೆ 4ಕ್ಕೆ ರಘುನಾಥರಾವ್ ಮಲ್ಕಾಪುರೆ ಸಂಚಾಲಕರು, ಅಮರನಾಥ್ ಪಾಟೀಲ್ ಮತ್ತು ಸಿದ್ದೇಶ್ ಯಾದವ್ ಅವರುಗಳನ್ನು ಸಹಸಂಚಾಲಕರನ್ನಾಗಿ ನೇಮಿಸಲಾಗಿದೆ.
ಮೋರ್ಚಾಗಳ ಜಿಲ್ಲಾ ಸಮಾವೇಶಕ್ಕೆ ಸಂಚಾಲಕರಾಗಿ ಬಿ.ವೈ.ವಿಜಯೇಂದ್ರ, ಸಹಸಂಚಾಲಕರಾಗಿ ಜಗದೀಶ್ ಹೀರೇಮನಿ ಮತ್ತು ಯಶಪಾಲ್ ಸುವರ್ಣ ಅವರನ್ನು ನೇಮಿಸಲಾಗಿದೆ. ಸದಸ್ಯರಾಗಿ ಈರಣ್ಣ ಕಡಾಡಿ, ಛಲವಾದಿ ನಾರಾಯಣಸ್ವಾಮಿ, ಗೀತಾ ವಿವೇಕಾನಂದ, ನರೇಂದ್ರಬಾಬು, ತಿಪ್ಪರಾಜು ಹವಾಲ್ದಾರ್, ಸಂದೀಪ್‍ಕುಮಾರ್ ಹಾಗೂ ಸಯ್ಯದ್ ಸಲಾಂ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.
ಫಲಾನುಭವಿಗಳ ಸಮ್ಮೇಳನಕ್ಕೆ ಸಚಿವ ಆಚಾರ್ ಹಾಲಪ್ಪ ಸಂಚಾಲಕರಾದರೆ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಶಾಸಕ ಪಿ.ರಾಜೀವ್ ಅವರನ್ನು ಸಹಸಂಚಾಲಕರನ್ನಾಗಿ, ಸದಸ್ಯರಾಗಿ ವೈ.ಎ.ನಾರಾಯಣಸ್ವಾಮಿ, ಪಿ.ಮುನಿರಾಜು ಗೌಡ, ಹೇಮಲತಾ ನಾಯಕ್ ಮತ್ತು ಜಯತೀರ್ಥ ಕಟ್ಟಿ ಅವರಿಗೆ ಜವಾಬ್ದಾರಿ ನೀಡಲಾಗಿದೆ.
ವೀಡಿಯೊ ವ್ಯಾನ್ ಪ್ರಚಾರಕ್ಕೆ ಎಸ್.ವಿ.ರಾಘವೇಂದ್ರ ಸಂಚಾಲಕರಾಗಿ, ಪ್ರೇಮಾನಂದ ಶೆಟ್ಟಿ ಭಾರತಿ ಮದ್ಗುಲ್ ಹಾಗೂ ಅಜಿತ್ ಹೆಗಡೆ ಬೆಳ್ಳಿಕೇರಿ ಅವರನ್ನು ಸಹಸಂಚಾಲಕರನ್ನಾಗಿ ನೇಮಿಸಲಾಗಿದೆ.
ಚುನಾವಣಾ ತಯಾರಿಕಾ ಸಲಹಾ ಅಭಿಯಾನದ ಸಂಚಾಲಕರಾಗಿ ಡಾ.ಕೆ.ಸುಧಾಕರ್, ಸಹ ಸಂಚಾಲಕರಾಗಿ ಬಿ.ಸಿ.ನಾಗೇಶ್, ತೇಜಸ್ವಿನಿ ಅನಂತಕುಮಾರ್, ತೇಜಸ್ವಿ ಸೂರ್ಯ, ಎಸ್.ಸುರೇಶ್‍ಕುಮಾರ್, ಅಭಯ್ ಪಾಟೀಲ್, ರಾಜ್‍ಕುಮಾರ್ ಪಾಟೀಲ್ ತೇಲ್ಕೂರ್, ಎನ್.ಮಹೇಶ್, ಪಿ.ರಾಜೀವ್, ಕೆ.ಎಸ್.ನವೀನ್, ಸಮೀರ್ ಕಾಗಲ್ಕರ್, ಡಾ.ಪ್ರಕಾಶ್, ರವೀಂದ್ರ ಪೈ, ವಿಶ್ವನಾಥ್ ಭಟ್ ಮತ್ತು ಮಾಳವಿಕ ಅವಿನಾಶ್ ಅವರನ್ನು ಬಿಜೆಪಿ ನೇಮಿಸಿದೆ.