ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಜೀವನಾಧಾರಿತ ಸಿನಿಮಾ ತೆರೆಗೆ ಬರಲಿದೆ. ನಿರ್ಮಾಣ ಸಂಸ್ಥೆ ಟಿ ಸಿರೀಸ್ ಫಿಲ್ಮ್ ಅಲ್ಮ್ ಲೈಟ್ ಮೋಷನ್ ಪಿಕ್ಚರ್ ಮತ್ತು ಕರ್ಮ ಮೀಡಿಯಾ ಎಂಟರ್ಟೈನ್ಮೆಂಟ್ ಸಿದ್ದಾರ್ಥ್ ಬಯೋಪಿಕ್ ಮಾಡುವುದಕ್ಕೆ ಸಿದ್ದವಾಗಿದೆ. ಈ ಮುನ್ನ ಇದೇ ನಿರ್ಮಾಣ ಸಂಸ್ಥೆಗಳು ಉದ್ಯಮಿ ರತನ್ ಟಾಟಾ ಅವರ ಕುಟುಂಬ ಸದಸ್ಯರು ಬಯೋಪಿಕ್ ಮಾಡೋದಾಗಿ ಘೋಷಿಸಿದ್ದವು.
Coffee King: The Swift Rise and Sudden Death of Cafe Coffee Day Founder V. G. Siddhartha ಪುಸ್ತಕವನ್ನು ತನಿಖಾ ಪತ್ರಕರ್ತರಾದ ರುಕ್ಮಿಣಿ ಬಿಆರ್ ಮತ್ತು ಪ್ರೊಸೆನ್‌ಜಿತ್ ದತ್ತಾ ಬರೆದಿದ್ದಾರೆ. ಈ ಪುಸ್ತಕ ಮ್ಯಾಕ್‌ಮಿಲನ್ (ಇಂಡಿಯಾ) ದಿಂದ ಪ್ರಕಟವಾಗಲಿದೆ. ಟಿ-ಸೀರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಭೂಷಣ್ ಕುಮಾರ್, “ಪ್ರತಿಯೊಬ್ಬರೂ ಕೆಫೆ ಕಾಫಿ ಡೇ ಬ್ರ್ಯಾಂಡ್ ಪರಿಚಯ ಹೊಂದಿದ್ದಾರೆ. ದೇಶದ ಅತಿದೊಡ್ಡ ರಿಟೇಲ್ ಚೈನ್ ನ್ನು ಸ್ಥಾಪಿಸಿದ ವ್ಯಕ್ತಿಯ ಈ ಕುತೂಹಲಕಾರಿ ಬಯೋಪಿಕ್ ಅನ್ನು ತೆರೆಗೆ ತರಲು ನಾವು ಸಾಕಷ್ಟು ಉತ್ಸಾಹದಿಂದಿದ್ದೇವೆ.” ಎಂದಿದ್ದಾರೆ.
ದೇಶದ ಅತಿದೊಡ್ಡ ಕಾಫಿ ರಿಟೇಲ್ ಚೈನ್ ಸಿಸಿಡಿ ಸಹ-ಸ್ಥಾಪಕರಾಗಿದ್ದ ಸಿದ್ಧಾರ್ಥ ಅವರು ಜುಲೈ 31, 2019 ರಂದು ಮಂಗಳೂರಿನ ಬಳಿ ಶವವಾಗಿ ಪತ್ತೆಯಾಗಿದ್ದರು. Businessದಲ್ಲಿ ಅಪಾರ ಆರ್ಥಿಕ ನಷ್ಟ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿತ್ತು.
Previous Articleಜನರ ಬದುಕು ನಾಶಪಡಿಸುವ ಸರ್ಕಾರ..
Next Article ಶಿವಣ್ಣ ರಜನಿ ಜೋಡಿಯ ಮೆಗಾ ಚಿತ್ರಕ್ಕೆ ಶೀರ್ಷಿಕೆ ಫಿಕ್ಸ್!