ಬೆಂಗಳೂರು, ಮೇ.23 – ಐಷಾರಾಮಿ ಜೀವನಕ್ಕಾಗಿ ಕಾರಿನಲ್ಲಿ ಸಂಚರಿಸುತ್ತಾ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ಖತರ್ನಾಕ್
ಪದವಿ ವಿದ್ಯಾರ್ಥಿಗಳನ್ನು ಗಿರಿನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಳೇಕಳ್ಳಿಯ ಅನುಗ್ರಹ ಲೇಔಟ್ ನ ವಿ. ಮನೋರಂಜಿತ್ (20) ಬೊಮ್ಮನಹಳ್ಳಿಯ 9ನೇ ಸ್ಟೀಟ್ ನ ಸುಗೇಶ್ ಕುಮಾರನ್ ಅಲಿಯಾಸ್ ಕುಮಾರನ್ (20) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 51.44 ಗ್ರಾಂ ಗಾಂಜಾ, 51 ಗ್ರಾಂ ಎಕ್ಸ್ ಟಸಿ ಮಾತ್ರೆಗಳು, 3,850 ರೂ ನಗದು, 2 ಐ ಫೋನ್ ಮೊಬೈಲ್‌ಗಳು, ಸಿಲ್ವರ್ ಕಲರ್ ಹುಂಡೈ ಐ-20 ಕಾರು, ಸ್ಪೋರ್ಟ್ಸ್ ಬ್ಯಾಗ್ ಹಾಗೂ ಖಾಲಿ ಪ್ಲಾಸ್ಟಿಕ್ ಕವರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಆರೋಪಿಗಳು ಕಳೆದ ಮೇ.21 ರಂದು ಬನಶಂಕರಿ 3ನೇ ಹಂತದ 100 ಅಡಿ ರಿಂಗ್ ರಸ್ತೆ, ಹೊಸಕೆರೆಹಳ್ಳಿ ಕೆ.ಇ.ಬಿ.ಜಂಕ್ಷನ್ ಬಳಿ ಹುಂಡೈ ಐ-20 ಕಾರಿನಲ್ಲಿ ಗಾಂಜಾ ಇಟ್ಟುಕೊಂಡು ಕಾಲೇಜು ವಿದ್ಯಾರ್ಥಿಗಳು ಹಾಗು ಸಾರ್ವಜನಿಕರಿಗೆ ಮಾರಾಟ
ಮಾಡುತ್ತಿದ್ದ ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ.
ಆರೋಪಿ ವಿದ್ಯಾರ್ಥಿಗಳು ಪ್ರತಿಷ್ಠಿತ ಕಾಲೇಜೊಂದರಲ್ಲಿ ಬಿಕಾಂ ಓದುತ್ತಿದ್ದಾರೆ. ದಾಳಿ ನಡೆಸಿದ ಗಿರಿನಗರ ಪೊಲೀಸರು 51 ಗ್ರಾಂ ಎಕ್ಸ್ ಟಸಿ ಮಾತ್ರೆಗಳು, ವಿವಿಧ ಬಗೆಯ ಡ್ರಗ್ಸ್ಗಳು, ಮೊಬೈಲ್ ಫೋನ್, ಕಾರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Previous Articleಫೇಸ್ಬುಕ್ ನಲ್ಲಿ ಯುವತಿ ಎಂದು ನಂಬಿಸಿ ಮಹಿಳೆಯಿಂದ ವಂಚನೆ
Next Article ಆಂದೋಲನಕ್ಕೆ ಧುಮುಕಿದ ಮಾಜಿ CM ಗಳು.