ಚಾಮರಾಜನಗರ: ಚಿಂತಕರ ಚಾವಡಿ, ಮೇಲ್ಮನೆಗೆ ಹೋಗಲು ದಕ್ಷಿಣ ಪದವೀದರರ ಕ್ಷೇತ್ರದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತದಾರರಿಗೆ ಕಳೆದ ಮೂರು ದಿನಗಳಿಂದ ಭರ್ಜರಿ ಬಾಡೂಟ ಕೇಳಿದವರಿಗೆ ಮದ್ಯದ ಸೇವೆ ಮಾಡುತ್ತಿರುವ ವಿಡಿಯೋ ವೈರಲ್ಲಾಗಿದೆ. ಚಾಮರಾಜನಗರದ ಖಾಸಗಿ ಹೋಟೆಲ್ ಹಾಗು ಯಳಂದೂರಿನ ತೋಟದ ಮನೆಯೊಂದರಲ್ಲಿ ಈ ಬಾಡೂಟ ಸೇವೆ ನಡೆದಿದ್ದು ನೂರಾರು ಮಂದಿಯ ‘ಬೇಕು-ಬೇಡಗಳನ್ನು’ ಒಂದು ಪಕ್ಷದ ಮುಖಂಡರು ನೋಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಾಡೂಟಕ್ಕೆ ಹೋದ ವ್ಯಕ್ತಿಯೊಬ್ಬರು ತೆಗೆದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ, ಪ್ರಜ್ಞಾವಂತರು ಎನಿಸಿಕೊಂಡವರು ಆಮೀಷಕ್ಕೆ ಒಳಗಾದರೇ? ಎಂಬ ಪ್ರಶ್ನೆ ಮೂಡಿದೆ.
Previous Articleಅಕ್ರಮ ವಲಸಿಗರಿಗೆ ಆಧಾರ್ ಕಾರ್ಡ್ !!
Next Article ಇನ್ನಾರು ತಿಂಗಳಲ್ಲಿ ಶೇ.86ರಷ್ಟು ಉದ್ಯೋಗಿಗಳಿಂದ ರಾಜೀನಾಮೆ