ಸೊರಬ(ಶಿವಮೊಗ್ಗ): ಹೋರಿ ಹಬ್ಬದಲ್ಲಿ ರಾಜ್ಯದಾದ್ಯಂತ ಹೆಸರು ಮಾಡಿ, ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ಚಾಮುಂಡಿ ಎಕ್ಸ್‌ಪ್ರೆಸ್ ಎಂದು ಹೆಸರಾದ ಹೋರಿಯನ್ನು ತಾಲ್ಲೂಕಿನ ಸಮನವಳ್ಳಿ ಗ್ರಾಮದ ಸಮಾಜ ಸೇವಕ ಪ್ರಸನ್ನಕುಮಾರ್ ಎಂ. ಸಮನವಳ್ಳಿ ಅವರು ದಾಖಲೆಯ ಮೊತ್ತಕ್ಕೆ ಖರೀದಿ ಮಾಡಿದ್ದಾರೆ.
ಚಿಕ್ಕಲಿಂಗದಹಳ್ಳಿಯ ಚಾಮುಂಡಿ ಎಕ್ಸ್‌ಪ್ರೆಸ್ ಭಾಗವಹಿಸಿರುವ ಎಲ್ಲ ಹೋರಿ ಹಬ್ಬಗಳಲ್ಲೂ ಬಂಪರ್ ಬಹುಮಾನ ಪಡೆದಿದೆ. ಈ ಹೋರಿಯನ್ನು ಪ್ರಸನ್ನ ಕುಮಾರ್ 18 ಲಕ್ಷ ರೂ.ಗಳಿಗೆ ಖರೀದಿಸುವ ಮೂಲಕ ಹೋರಿಯ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾರೆ.
‘ಅಖಾಡದಲ್ಲಿ ಪೀಪಿ, ಬಲೂನ್, ಜೂಲಗಳನ್ನು ಹೊತ್ತು ಯಾರೊಬ್ಬರ ಕೈಗೂ ಸಿಗದೇ ಓಡುವುದೇ ಈ ಹೋರಿಯ ವಿಶೇಷವಾಗಿದೆ. ಓಟದ ಸಮಯ ಬಿಟ್ಟರೆ ಸೌಮ್ಯವಾಗಿರುವ ಈ ಹೋರಿ ಅಂದರೆ ಮಕ್ಕಳಿಗೂ ಅಚ್ಚುಮೆಚ್ಚು.
18 ಲಕ್ಷ ರೂ.ಗಳಿಗೆ ಮಾರಾಟವಾಯ್ತು ಚಾಮುಂಡಿ ಎಕ್ಸ್‌ಪ್ರೆಸ್
Previous Article11ನೇ ಮಹಡಿಯಿಂದ ಜಿಗಿದು ವಿಕ್ಟೋರಿಯಾ ಆಸ್ಪತ್ರೆ ಯುವ ವೈದ್ಯ ಸಾವು
Next Article ಮುಸ್ಲೀಂ ಸಮುದಾಯದವರು ಗೋ ಮಾಂಸ ತಿಂದು ಕೊಬ್ಬಿದ್ದಾರೆ!