ಚೀನಾದಲ್ಲಿ ಧಾರ್ಮಿಕ ಸ್ವಾತಂತ್ರ್ಯಗಳ ಮೇಲಿನ ದಬ್ಬಾಳಿಕೆಯು ಹೆಚ್ಚಾಗುತ್ತಿದ್ದಂತೆ ದೇಶದಲ್ಲಿರುವ ಮಸೀದಿಗಳ ಮೇಲಿನ ಗುಮ್ಮಟ ಮತ್ತು ಮಿನಾರ್‌ಗಳನ್ನು ತೆಗೆದುಹಾಕಲು ಅಧಿಕಾರಿಗಳು ನಡೆಸಿದ ಪ್ರಯತ್ನ ನಡೆದಿದೆ. ಚೀನಾದ ಈ ನಡೆಯನ್ನು ತಡೆಯುವ ಕೊನೆಯ ಪ್ರಯತ್ನವಾಗಿ ನೈಋತ್ಯ ಚೀನಾದಲ್ಲಿ ಸಾವಿರಾರು ಅಲ್ಪಸಂಖ್ಯಾತ ಮುಸಲ್ಮಾನರು ತಮ್ಮ ಪ್ರಮುಖ ಮಸೀದಿಯನ್ನು ಸುತ್ತುವರೆದು ಗುಮ್ಮಟ ಮತ್ತು ಮಿನಾರ್ ಗಳನ್ನೂ ತೆರವು ಮಾಡುವುದನ್ನು ವಿರೋಧಿಸಿದರು.
ಚೀನಾದ ಯುನಾನ್ ಪ್ರಾಂತ್ಯದ ನಜಿಯಾಯಿಂಗ್ ಗ್ರಾಮದಲ್ಲಿ ಹುಯಿ ಮುಸಲ್ಮಾನ ಜನಾಂಗಕ್ಕೆ ಸೇರಿದ ಈ ಮಸೀದಿಯ ರೂಪವನ್ನು ದೇಶದ ನಾಯಕ ಶಿ ಜಿನ್‌ಪಿಂಗ್ ಅವರ ಧರ್ಮವನ್ನು ಚೀನೀಕರಣ ಮಾಡುವ ಪ್ರಯತ್ನದ ಭಾಗವಾಗಿ ಬದಲಾಯಿಸಲಾಗುತ್ತಿದೆ.
ಶಿ ಅವರ ಚೀನೀಕರಣ ನೀತಿಯ ಪ್ರಕಾರ ವಿದೇಶೀ ಪ್ರಭಾವ ವಿರುವ ಧಾರ್ಮಿಕ ನಂಬಿಕೆಗಳನ್ನು ಪರಿಷ್ಕರಿಸಿ ಅದನ್ನು ಚೀನೀ ಸಂಸ್ಕೃತಿಯೊಂದಿಗೆ ಹೊಂದಿಸುವುದಾಗಿದೆ. ಪರದೇಶದ ಧರ್ಮಗಳನ್ನು ಚೀನೀ ಸಂಸ್ಕೃತಿಗೆ ಜೋಡಿಸುವ ಗುರಿ ಇಡಲಾಗಿದೆ. ಇದನ್ನು ಚೀನಾದ ಅಧಿಕೃತವಾಗಿ ನಾಸ್ತಿಕವೆಂದು ಗುರುತಿಸಿಕೊಳ್ಳುವ ಕಮ್ಯುನಿಸ್ಟ್ ಪಕ್ಷದ ನಿರಂಕುಶ ಆಡಳಿತ ಮಾಡುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಚೀನೀ ಅಧಿಕಾರಿಗಳು ಬಹಿರಂಗವಾಗಿ ಇಸ್ಲಾಮಿಕ್ ವಾಸ್ತುಶಿಲ್ಪವನ್ನು ತೆರವು ಮಾಡಿದ್ದಾರೆ – ಗುಮ್ಮಟಗಳನ್ನು ನಾಶಪಡಿಸುವುದು ಮತ್ತು ಮಿನಾರ್‌ಗಳನ್ನು ಕಿತ್ತುಹಾಕುವುದು ದೇಶಾದ್ಯಂತ ಸಾವಿರಕ್ಕೂ ಹೆಚ್ಚು ಹುಯಿ ಮಸೀದಿಗಳಲ್ಲಿ ಆಗಿದೆ. ಇಂದನ್ನು ಹುಯಿ ಜನಾಂಗದವರು ಹೇಳುತ್ತಾರೆ, ನಾಜಿಯಿಂಗ್ ಮಸೀದಿಯು ಇಂಥಾ ಮಸೀದಿಗಳ ಪೈಕಿ ಒಂದಾಗಿದೆ.
ಈಗ, “ಚೀನೀಕಾರಣ” ಅಭಿಯಾನವು ಅಂತಿಮವಾಗಿ ನಾಜಿಯಿಂಗ್‌ಗೆ ಬಂದಿದೆ. ಈ ಪ್ರಾಂತ್ಯ ಹುಯಿ ಜನರ ಐತಿಹಾಸಿಕ ನೆಲೆಯಾಗಿದೆ ಮತ್ತು ಆಗ್ನೇಯ ಏಷ್ಯಾದೊಂದಿಗೆ ಚೀನಾದ ಗಡಿಯಲ್ಲಿರುವ ಜನಾಂಗೀಯವಾಗಿ ವೈವಿಧ್ಯಮಯ ಪ್ರಾಂತ್ಯವಾಜಿ ಇದು ಯುನಾನ್ ನಲ್ಲಿ ಇಸ್ಲಾಮಿಕ್ ಸಂಸ್ಕೃತಿಯ ಪ್ರಮುಖ ಕೇಂದ್ರವಾಗಿದೆ.
ಈ ಸರ್ಕಾರಿ ನಡೆಗೆ ಸ್ಥಳೀಯ ಜನರಿಂದ ವಿಪರೀತ ವಿರೋಧ ವ್ಯಕ್ತವಾಗಿದೆ.
2 Comments
необычные бизнес идеи необычные бизнес идеи .
курс евро к тенге курс евро к тенге .