Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಶಿಗ್ಗಾಂವಿಯಲ್ಲಿ ಸಿ ಎಂ ಫೈಜ್ ಎಂಬ ಮಿಂಚು
    Trending

    ಶಿಗ್ಗಾಂವಿಯಲ್ಲಿ ಸಿ ಎಂ ಫೈಜ್ ಎಂಬ ಮಿಂಚು

    cm-FAIZ-wins-hearts-in-Shiggaon
    vartha chakraBy vartha chakraOctober 4, 2024Updated:October 4, 202447 Comments4 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ Shiggaon- ಸವಣೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣಕ್ಕೆ ಭರ್ಜರಿ ರಂಗು ಬಂದಿದೆ.

    ಚುನಾವಣೆ ಆಯೋಗ ಇಲ್ಲಿಯವರೆಗೆ ಈ ಕ್ಷೇತ್ರದ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿಲ್ಲ ಒಂದು ಅಂದಾಜಿನ ಪ್ರಕಾರ ನವೆಂಬರ್ ನಲ್ಲಿ ಈ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಗೆಲುವು ಸಾಧಿಸಲು ದೊಡ್ಡ ಪ್ರಮಾಣದಲ್ಲಿ ತಂತ್ರ ರೂಪಿಸುತ್ತಿವೆ.

    ಹಾವೇರಿ ಜಿಲ್ಲೆಯ ಈ ಕ್ಷೇತ್ರ ಒಂದು ಕಾಲಕ್ಕೆ ಕಾಂಗ್ರೆಸ್ಸಿನ ಭದ್ರಕೋಟೆ. ಆದರೆ ಸತತವಾಗಿ ಇಲ್ಲಿ ನಾಲ್ಕು ಬಾರಿ ಬಿಜೆಪಿಯಿಂದ ಆಯ್ಕೆಯಾಗುವ ಮೂಲಕ ಬಸವರಾಜ ಬೊಮ್ಮಾಯಿ ಈ ಕ್ಷೇತ್ರದಲ್ಲಿ ದಾಖಲೆ ನಿರ್ಮಾಣ ಮಾಡಿದ್ದಾರೆ ಹೀಗಾಗಿ ಈ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂದು ಬಿಜೆಪಿ ಪಣತೊಟ್ಟಿದೆ.

    ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ತನ್ನ ಭದ್ರಕೋಟೆಯಲ್ಲಿ ಮತ್ತೆ ಪಾರಮ್ಯ ಸಾಧಿಸಬೇಕು ಎಂದು ಹೋರಾಟ ನಡೆಸಿದೆ.

    ಕಳೆದ ವಿಧಾನಸಭೆ ಚುನಾವಣೆಯ‌ ಕಾಂಗ್ರೆಸ್ ಪಕ್ಷದಲ್ಲಿ ಉಂಟಾದ ಆಂತರಿಕ ಬಿನ್ನಮತದ ಲಾಭ ಪಡೆದ ಬಸವರಾಜ ಬೊಮ್ಮಾಯಿ ಮೂವತ್ತು ಸಾವಿರ ಮತಗಳ ದಾಖಲೆ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಆದರೆ ಲೋಕಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ಸಿನ ಎಲ್ಲ ಬಣಗಳು ಒಗ್ಗಟ್ಟಾದ ಪರಿಣಾಮ ಮುಖ್ಯಮಂತ್ರಿಯಾಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬಸವರಾಜ ಬೊಮ್ಮಾಯಿ ಸಂಸತ್ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಬೇಕಾಯಿತು.

    ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಸವರಾಜ ಬೊಮ್ಮಾಯಿ ತೀವ್ರ ಮುಖಭಂಗ ಅನುಭವಿಸಿದರು. ಕಾಂಗ್ರೆಸ್ ಅಭ್ಯರ್ಥಿ ವಿನಯ್ ಅಸೂಟಿ ಅವರು 8500 ಮತಗಳ ಮುನ್ನಡೆ ಸಾಧಿಸುವ ಮೂಲಕ ಬಿಜೆಪಿಗೆ ಮರ್ಮಾಘಾತ ನೀಡಿದ್ದರು.

    ಸದ್ಯ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು, ಸುಭದ್ರ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡುತ್ತಿರುವ ಆಡಳಿತ, ತೋರಿಸುತ್ತಿರುವ ಒಗ್ಗಟ್ಟು ,ಕಾಂಗ್ರೆಸ್ಸಿಗೆ ಉತ್ತಮ ವಾತಾವರಣ ಕಲ್ಪಿಸಿದೆ. ಇದರ ಪರಿಣಾಮ ಲೋಕಸಭಾ ಚುನಾವಣೆಯ ನಂತರ ಹಾವೇರಿಯ Shiggaon ಕ್ಷೇತ್ರದಲ್ಲಿ ಚಿತ್ರಣ ಸಂಪೂರ್ಣ ಬದಲಾಗಿದ್ದು, ಕಾಂಗ್ರೆಸ್ಸಿಗೆ ಗೆಲುವಿನ ಅವಕಾಶಗಳು ಹೆಚ್ಚಿವೆ ಎಂದು ಹಲವು ಸಮೀಕ್ಷೆಗಳು ತಿಳಿಸಿವೆ. ಆದರೆ ಈ ಗೆಲುವು ಸುಲಭವಾಗಿ ಧಕ್ಕ ಬೇಕಾದರೆ ಎಲ್ಲ ನಾಯಕರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕು ಎಂಬ ಸಲಹೆ ನೀಡಿವೆ.

    ಈ ಸಲಹೆಯನ್ನು ಚಾಚೂ ತಪ್ಪದೇ ಪಾಲಿಸುತ್ತಿರುವ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಿಎಂ ಫೈಜ್ ಎಲ್ಲರ ಗಮನ ಸೆಳೆಯುತ್ತಾರೆ.

    ಅಂದಹಾಗೆ C M Faiz ಹಿರಿಯ ರಾಜಕಾರಣಿ ಕೇಂದ್ರದ ಮಾಜಿ ಸಚಿವC M Ibrahim ಅವರ ಪುತ್ರ‌. ತಮ್ಮ ತಂದೆಯ ಎಲ್ಲ ರಾಜಕೀಯ ಪಟ್ಟುಗಳನ್ನು ನೋಡಿ ಕಲಿತಿರುವ C M Faiz ಇದೀಗ Shiggaon ಸವಣೂರು ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಚುನಾವಣಾ ರಾಜಕಾರಣಕ್ಕೆ ಪ್ರವೇಶಿಸಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ.

    ಯಾವುದೇ ರಾಜಕಾರಣಿಗೆ ಯಶಸ್ಸಿನ ಮೊದಲ ಮೆಟ್ಟಿಲು ಎಂದರೆ ಎಲ್ಲ ನಾಯಕರ ವಿಶ್ವಾಸ ಗಳಿಸುವುದು ಎಂಬ ಮೂಲ ತತ್ವವನ್ನು ಅರಿತವರಂತೆ ದುಡಿಯುತ್ತಿರುವ C M Faiz ಈಗಾಗಲೇ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದ್ದಾರೆ ಮತದಾರರ ಅಹವಾಲು ಕೇಳಿದ್ದಾರೆ.ಜನರ ನಾಡಿ ಮಿಡಿತ ತಿಳಿಯುವ ಪ್ರಯತ್ನ ಮಾಡಿದ್ದಾರೆ.

    ಲೋಕಸಭೆ ಚುನಾವಣೆಯ ಸಮಯದಲ್ಲಿ ಇಲ್ಲಿನ ಮತದಾರರು ಕಾಂಗ್ರೆಸ್ ಪಕ್ಷದ ಪರ ಒಲವು ವ್ಯಕ್ತಪಡಿಸಿದ್ದರು ಎನ್ನುವುದು ಎಷ್ಟು ಸತ್ಯವೋ ಇದೀಗ ಕಾಂಗ್ರೆಸ್ ಗೆಲುವಿಗೆ ಹೆಚ್ಚಿನ ಅವಕಾಶಗಳು ಇವೆ ಎಂಬ ವರದಿಗಳು ಬರಲು ಕಾರಣ C M Faiz ಅವರ ಅವಿರತ ಶ್ರಮ ಎನ್ನುವುದು ಕೂಡ ಅಷ್ಟೇ ಸತ್ಯ.

    ತಂದೆಗೆ ತಕ್ಕ ಮಗಎಂಬ ವಿಶೇಷಣದೊಂದಿಗೆ ಕ್ಷೇತ್ರದಲ್ಲಿ ತಮ್ಮದೇ ಛಾಪು ಮುಡಿಸುತ್ತಿರುವ C M Faiz ಕ್ಷೇತ್ರದ ಎಲ್ಲ ಸಮುದಾಯಗಳ ವಿಶ್ವಾಸ ಗಳಿಸುವ ಜೊತೆಗೆ ಯುವಕರ ಕಣ್ಮಣಿಯಾಗಿ ಹೊರಹಮ್ಮಿದ್ದಾರೆ.

    ಕಾಂಗ್ರೆಸ್ ಪಕ್ಷದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ತಾವು ಪ್ರಬಲ ಆಕಾಂಕ್ಷಿ ಎಂದು ಎಲ್ಲೆಡೆ ಹೇಳುತ್ತಾ ಬರುತ್ತಿದ್ದಾರೆ ಅದರ ಜೊತೆಗೆ ಕಾಂಗ್ರೆಸ್ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಕೂಡ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದು ಹೇಳುವ ಮೂಲಕ ತಾವೊಬ್ಬ ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತ, ಶಿಸ್ತಿನ ಸಿಪಾಯಿ ಎನ್ನುವುದನ್ನು ಹೆಜ್ಜೆ ಹೆಜ್ಜೆಗೂ ಮನದಟ್ಟು ಮಾಡುತ್ತಿದ್ದಾರೆ ಇವರ ಈ ವಿಶೇಷ ಗುಣ ಕ್ಷೇತ್ರದ ಎಲ್ಲ ನಾಯಕರು ಮತ್ತು ಕಾರ್ಯಕರ್ತರ ಮೆಚ್ಚುಗೆಗೆ ಪಾತ್ರವಾಗಿದೆ.

    ಪಕ್ಷದ ನಾಯಕತ್ವದ ವಿಶ್ವಾಸದೊಂದಿಗೆ ಟಿಕೆಟ್ ಗಿಟ್ಟಿಸಬಹುದು ಎಂಬ ಲೆಕ್ಕಾಚಾರದಲ್ಲಿ ಬಹುತೇಕ ನಾಯಕರು ಬೆಂಗಳೂರಿನ ನಾಯಕರ ಮನೆಯಲ್ಲಿ ಕಾಲ ಹರಣ ಮಾಡುತ್ತಿದ್ದರೆ C M Faiz ಮಾತ್ರ ಕ್ಷೇತ್ರದ ಮತದಾರರ ಜೊತೆ ಕೆಲಸ ಮಾಡುತ್ತಿದ್ದಾರೆ.

    ಕಳೆದ ಎರಡು ತಿಂಗಳ ಅವಧಿಯಲ್ಲಿ ಕ್ಷೇತ್ರ ವ್ಯಾಪ್ತಿಯ ಅಂದಲಗಿ, ಅತ್ತಿಗೆರಿ, ಬಾಡ, ಬನ್ನೂರು, ಬಸವನಾಳ, ಚಂದಾಪುರ ,ದುಂಡಸಿ, ಗುಡ್ಡದ ಚನ್ನಾಪುರ, ಹಳೆ ಬಂಕಾಪುರ, ಹಿರೇ ಬೆಂಡಿಗೇರಿ, ಹಿರೇಮಲ್ಲೂರು, ಹೋತನಹಳ್ಳಿ, ಕುನ್ನೂರು, ತಡಸ, ಕೋಣನಕೇರಿ, ವನಹಳ್ಳಿ ಸೇರಿದಂತೆ ಎಲ್ಲ ಗ್ರಾಮಗಳಿಗೆ ನಾಲ್ಕೈದು ಬಾರಿ ಭೇಟಿ ನೀಡಿರುವ C M Faiz ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತುತ್ತಿದ್ದಾರೆ ಇವರಿಗೆ ಸಚಿವರಾದ ಈಶ್ವರ ಖಂಡ್ರೆ ಮತ್ತು ಸತೀಶ ಜಾರಕಿಹೊಳಿ ಅವರು ಬೆನ್ನೆಲುಬಾಗಿ ನಿಂತಿದ್ದಾರೆ.

    ಇವರಷ್ಟೇ ಅಲ್ಲದೆ ಕಾಂಗ್ರೆಸ್ಸಿನಲ್ಲಿ ಚುನಾವಣೆಗೆ ಸ್ಪರ್ಧಿಸಲು ನಾಯಕರ ದೊಡ್ಡ ದಂಡೆ ಸಿದ್ಧವಾಗಿ ನಿಂತಿದೆ ಪ್ರಮುಖವಾಗಿ ಮಾಜಿ ಶಾಸಕ ಅಜ್ಜಂಪಿರ್ ಖಾದ್ರಿ ಯಾಸೀರ್ ಖಾನ್ ಪಠಾಣ್ ಸಂಜೀವ್ ಕುಮಾರ್ ನೀರಲಗಿ ಸೋಮಣ್ಣ ಬೇವಿನಮರದ ರಜತ್ ಉಳ್ಳಾಗಡ್ಡಿ ಮಠ ಮತ್ತು ಲೋಕಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿ ವಿನಯ್ ಅಸೂಟಿ ಪೈಪೋಟಿ ನಡೆಸಿದ್ದಾರೆ.

    ಈ ಎಲ್ಲಾ ನಾಯಕರ ಜೊತೆಗೂ ಉತ್ತಮ ಒಡನಾಟ ಹೊಂದಿರುವ C M Faiz ಕ್ಷೇತ್ರದಲ್ಲಿ ಅಭ್ಯರ್ಥಿ ಯಾರೇ ಆಗಲಿ ಕಾಂಗ್ರೆಸ್ ಗೆಲುವು ಮಾತ್ರ ಮುಖ್ಯ ಎಂದು ಹೋರಾಟ ನಡೆಸಿದ್ದಾರೆ.

    ಇನ್ನು ಬಿಜೆಪಿಯಲ್ಲೂ ಬಾರಿ ಪೈಪೋಟಿ ನಡೆಯುತ್ತಿದೆ ಆದರೆ ಕಾಂಗ್ರೆಸ್ಸಿನಲ್ಲಿರುವ ಉತ್ಸಾಹ ಮತ್ತು ಚಟುವಟಿಕೆ ಅಲ್ಲಿ ಅಷ್ಟಾಗಿ ಕಾಣುತ್ತಿಲ್ಲ ತಮ್ಮ ತಂದೆ ಸಂಸದರಾಗಿದ್ದಾರೆ ನಾಲ್ಕು ಬಾರಿ ಈ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳುತ್ತಿರುವ ಭರತ್ ಬೊಮ್ಮಾಯಿ ತಾವೇ ಅಭ್ಯರ್ಥಿ ಅಷ್ಟೇ ಅಲ್ಲ ಗೆಲುವು ಕೂಡ ನನ್ನದೇ ಎಂದು ಆತ್ಮವಿಶ್ವಾಸದಿಂದ ಹೋರಾಟ ನಡೆಸಿದ್ದಾರೆ ಇವರಿಗೆ ಎದುರಾಗಿ ಬಿಜೆಪಿಗೆ ಹಿರಿಯ ನಾಯಕರಾದ

    ಶ್ರೀಕಾಂತ್ ದುಂಡಿ ಗೌಡರ ಶಶಿಕಾಂತ್ಎಲಿಗಾರ, ಶೋಭಾ ನಿಸ್ಸೀಮ ಗೌಡ ನಾವು ಕೂಡ ಪ್ರಬಲ ಅಭ್ಯರ್ಥಿಗಳು ಎಂದು ತೊಡೆತಟ್ಟಿದ್ದಾರೆ ಹೀಗಾಗಿ ಚುನಾವಣೆಗು ಮುನ್ನವೇ ಬಿಜೆಪಿ ಒಡೆದ ಮನೆ ಯಂತಾಗಿದೆ.

    ರಾಷ್ಟ್ರೀಯ ಪಕ್ಷಗಳ ಈ ಪೈಪೋಟಿಯ ನಡುವೆಯೂ ದೊಡ್ಡ ಹುಣಸೆ ಕಲ್ಮಠದ ಮಠಾಧೀಶರಾದ ಚೆನ್ನ ಬಸವೇಶ್ವರ ಸ್ವಾಮೀಜಿ ತಾವು ಕೂಡ ಚುನಾವಣೆಗೆ ಸ್ಪರ್ಧಿಸಲು ರೆಡಿ ಎಂದು ಘೋಷಿಸಿರುವುದು ಕುತೂಹಲ ಮೂಡಿಸಿದೆ.

    AI Bangalore C M Ibrahim Congress Government m News Politics shiggaon Trending Varthachakra ಕಾಂಗ್ರೆಸ್ Election ಧಾರವಾಡ ಪಠಾಣ್ ಬೊಮ್ಮಾಯಿ ರಾಜಕೀಯ ಸಂಸತ್ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಸ್ವಪಕ್ಷೀಯರ ವಿರುದ್ಧ ಗುಡುಗಿದ ದೇವೇಗೌಡ.
    Next Article ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ BMRCL ಚಿಂತನೆ, ಪ್ರಯಾಣಿಕರಿಗೆ ಶಾಕ್.
    vartha chakra
    • Website

    Related Posts

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    October 7, 2025

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    October 7, 2025

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    October 4, 2025

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಹೈಕಮಾಂಡ್ ಮುಂದೆ ಶಿವಕುಮಾರ್ ಗರಂ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • https://mellstroy-casino.io on ಯಡಿಯೂರಪ್ಪ ಅವರನ್ನು ಅನುಕರಿಸುವ ವಿಜಯೇಂದ್ರ | Yediyurappa
    • DonaldBrose on ಬೇಸಿಗೆಯಲ್ಲಿ ರಾಜ್ಯಕ್ಕೆ ಎಷ್ಟು ವಿದ್ಯುತ್ ಬೇಕು ಗೊತ್ತಾ.
    • compare prescription drug prices on ಅನ್ನಭಾಗ್ಯ ಯೋಜನೆಯ ಸ್ವರೂಪ ಬದಲು.
    Latest Kannada News

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    October 7, 2025

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    October 7, 2025

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    October 4, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಮತ್ತೊಮ್ಮೆ ಮೋದಿ ವಿಜಯ? #varthachakra #bihar #election #result #nda #modi #winner #announce #latestnews
    Subscribe