ಕೋಲ್ಕತಾ: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುವುದರಿಂದ ಹಿಡಿದು ಸ್ಫೋಟಕ ಹೇಳಿಕೆ ನೀಡುವವರೆಗೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರ್ತಾರೆ.
ಸದ್ಯ ಡಾರ್ಜಿಲಿಂಗ್ನಲ್ಲಿ ಮೂರು ದಿನಗಳ ಪ್ರವಾಸದಲ್ಲಿರುವ ಮಮತಾ ಬ್ಯಾನರ್ಜಿ ಪಾನಿಪುರಿಯನ್ನು ಉಣಬಡಿಸುತ್ತಿರುವ ದೃಶ್ಯ ಕಂಡುಬಂತು.
ಗೂರ್ಖಾಲ್ಯಾಂಡ್ ಪ್ರಾದೇಶಿಕ ಪ್ರದೇಶದಲ್ಲಿ ಹೊಸದಾಗಿ ಆಯ್ಕೆಯಾದ 45 ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಗುರುವಾರದಂದು ಮಮತಾ ಬ್ಯಾನರ್ಜಿ ಕೋಲ್ಕತ್ತಾಗೆ ಮರಳಲಿದ್ದಾರೆ.
ಪ್ರಮಾಣವಚನ ಸ್ವೀಕಾರ ಸಮಾರಂಭದ ಬಳಿಕ ಸಿಎಂ ಮಮತಾ ರಿಚ್ಮಂಡ್ ಹಿಲ್ನಿಂದ ಡಾರ್ಜೆಲಿಂಗ್ ಮೃಗಾಲಯದ ಕಡೆಗೆ ತೆರಳಿದರು. ಮಾರ್ಗ ಮಧ್ಯದಲ್ಲಿ ಪಾನಿಪುರಿ ಅಂಗಡಿಯನ್ನು ವೀಕ್ಷಿಸಿದ ಸಿಎಂ ಮಮತಾ ಬ್ಯಾನರ್ಜಿ ಪಾನಿ ಪುರಿ ಮಾರಾಟ ಮಾಡಿದ್ದಾರೆ. ಪಾನಿ ಪುರಿ ಅಂಗಡಿಯಲ್ಲಿ ಸಿಎಂ ಮಮತಾರನ್ನು ನೋಡುತ್ತಿದ್ದಂತೆಯೇ ಜನರು ಅಂಗಡಿಗಳತ್ತ ಧಾವಿಸಿದ್ದಾರೆ.
Previous Articleಉಕ್ರೇನಿಯನ್ನರ ಉಸಿರು ನಿಲ್ಲಿಸಲು ನಾಯಿಗೆ ಬಾಂಬ್ ಕಟ್ಟಿದ ರಷ್ಯಾ ಸೈನಿಕರು!
Next Article ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ಫ್ಲವರ್ ಶೋ