ಬೆಳಗಾವಿ,ಡಿ.19:
ಅಧಿಕಾರ ಹಸ್ತಾಂತರ ಕುರಿತು ಚರ್ಚೆ ನಡೆಯುತ್ತಿರುವ ನಡುವೆಯೇ ಮುಖ್ಯಮಂತ್ರಿಯ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ವಿದಾಯದ ಭಾಷಣ ಮಾಡಿದರಾ ಎಂಬ ಚರ್ಚೆ ಆರಂಭವಾಗಿದೆ.
ಉತ್ತರ ಕರ್ನಾಟಕದ ಕುರಿತು ನಡೆದ ಚರ್ಚೆಗೆ ಉತ್ತರ ನೀಡುವ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದ ಎಲ್ಲ ಶಾಸಕರು, ಮಂತ್ರಿಗಳು ಮತ್ತು ಅಧಿಕಾರಿಗಳು ಧನ್ಯವಾದ ಅರ್ಪಿಸುವ ಮೂಲಕ ಗಮನ ಸೆಳೆದರು. ಭಾಷಣ ಆರಂಭಿಸುವ ಮೊದಲೇ ಎಲ್ಲರನ್ನೂ ಉಲ್ಲೇಖಿಸಿ ಧನ್ಯವಾದಗಳು ಎಂದು ಹೇಳಿದ್ದು ಅಚ್ಚರಿ ಮೂಡಿಸಿತು.
ಆದರೆ ನಂತರ ಸ್ಪಷ್ಟನೆ ನೀಡಿದ ಅವರು ಮುಖ್ಯಮಂತ್ರಿಯಾಗಿ ತಾವು ಐದು ವರ್ಷ ಅಧಿಕಾರ ಪೂರ್ಣಗೊಳಿಸಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ತರುತ್ತೇನೆ ಎಂದು ಘೋಷಿಸಿದರು.
ಭಾಷಣ ಆರಂಭಿಸುವ ಮುನ್ನ ಧನ್ಯವಾದ ಹೇಳಿದ್ದನ್ನು ಪ್ರಸ್ತಾಪಿಸಿದ ಬಿಜೆಪಿ ಸದಸ್ಯರು ಮುಖ್ಯಮಂತ್ರಿ ಆಗಿ ತಮಗೆ ಬೆಳಗಾವಿ ಅಧಿವೇಶನವೇ ಕೊನೆಯ ಅಧಿವೇಶನವ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್, ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವರು ಪ್ರಶ್ನಿಸಿದರು.
ನಿನ್ನೆ ಸದನದಲ್ಲಿ ನೀವು ಕಾಣಿಸಿಕೊಂಡಾಗ ನಿಮ್ಮ ಮುಖದಲ್ಲಿ ನಿಶ್ಯಕ್ತಿ ಎದ್ದು ಕಾಣುತ್ತಿತ್ತು. ದಣಿದವರಂತೆ ಗೋಚರಿಸುತ್ತಿದ್ದೀರಿ ಈಗ ನಿಮ್ಮ ಭಾಷಣ ನೋಡಿದರೆ ಇದೇನು ರಾಜಕೀಯ ನಿವೃತ್ತಿಯ ಅಥವಾ ನಿಶ್ಯಕ್ತಿಯ ಎಂಬ ಪ್ರಶ್ನೆ ಮೂಡಿಸುತ್ತದೆ ಎಂದು ಯತ್ನಾಳ್ ಹೇಳಿದರು.
ಯತ್ನಾಳ್ ಅವರ ಈ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ರಾಜಕೀಯವಾಗಿ ನಿಶ್ಯಕ್ತಿ ಎಂಬುದೇ ಇಲ್ಲ ಇನ್ನು ನಿವೃತ್ತಿ ಮಾತಂತೂ ಇಲ್ಲವೇ ಇಲ್ಲ ಯತ್ನಾಳ್ ಅವರಿಗೆ ಸಾಕಷ್ಟು ಸಂಶಯಗಳಿವೆ ಈ ಸಂಶಯಗಳ ಕಾರಣಕ್ಕಾಗಿ ಅವರನ್ನು ಅವರ ಪಕ್ಷದಿಂದ ಹೊರ ಹಾಕಿದರು ಎಂದು ಹೇಳಿದರು.
ನನಗೆ ರಾಜಕೀಯ ನ್ಯಿಶಕ್ತಿ ಎಂಬುದೇ ಇಲ್ಲ. ನಿಶ್ಯಕ್ತಿ ಆಗುವಷ್ಟು ರಾಜಕೀಯವನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಮತದಾರರು ಎಲ್ಲಿಯವರೆಗೆ ಆಶೀರ್ವಾದ ಮಾಡುತ್ತಾರೋ ಅಲ್ಲಿಯವರೆಗೆ ರಾಜಕೀಯದಲ್ಲಿ ಇರುತ್ತೇನೆ ಜನರ ಆಶೀರ್ವಾದ ಇರುವಷ್ಟು ದಿನ ನನ್ನನ್ನು ಯಾರು ಏನು ಮಾಡಲು ಆಗುವುದಿಲ್ಲ ಎಂದು ತಿಳಿಸಿದರು.
ನನಗೆ ರಾಜಕೀಯ ನಿಶ್ಯಕ್ತಿ ಎನ್ನುವುದೇ ಇಲ್ಲ ಮುಂದೆಯೂ ಇಲ್ಲ ಯಾವಾಗಲೂ ಇಲ್ಲ ನೀವು ಹಾಗೇನಾದರೂ ಭಾವಿಸಿದ್ದರೆ ಅದು ತಪ್ಪು, ಮುಖ್ಯಮಂತ್ರಿ ಆಗಿ ಅಧಿಕಾರ ಅವಧಿ ಪೂರ್ಣಗೊಳಿಸುತ್ತೇನೆ ಮತ್ತೆ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಅಸ್ತಿತ್ವಕ್ಕೆ ತರುತ್ತೇನೆ ಎಂದು ಹೇಳಿದರು
Previous Articleಕಲೆಕ್ಷನ್ ಕಿಂಗ್ ಯಾರು ಗೊತ್ತಾ..?!
Next Article ದೇವಿಗೆ ಶಿವಕುಮಾರ್ ಕೇಳಿದ ಐದು ಪ್ರಶ್ನೆ!

