Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Congress ‌ಅಭ್ಯರ್ಥಿಗಳ ಆಯ್ಕೆ Final ಪಟ್ಟಿ #siddaramaiah #kharge #aicc
    ರಾಜ್ಯ

    Congress ‌ಅಭ್ಯರ್ಥಿಗಳ ಆಯ್ಕೆ Final ಪಟ್ಟಿ #siddaramaiah #kharge #aicc

    vartha chakraBy vartha chakraMarch 17, 2023Updated:March 17, 202326 Comments3 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಮಾ.17- ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು‌ ಪಣ ತೊಟ್ಟಿರುವ ಕಾಂಗ್ರೆಸ್ ನಾಯಕರು ಚುನಾವಣೆ ವೇಳಾಪಟ್ಟಿ ಪ್ರಕಟಣೆಗೂ‌ ಮುನ್ನವೇ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದೆ.
    ದೆಹಲಿಯಲ್ಲಿ ‌ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಾಲಿ ಶಾಸಕರಿರುವ ನಾಲ್ಕು ಕ್ಷೇತ್ರಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಶಾಸಕರಿಗೂ ಟಿಕೆಟ್ ಖಚಿತಗೊಳಿಸಲಾಗಿದೆ. ಮೊದಲ ಹಂತದಲ್ಲಿ ಹಾಲಿ ಶಾಸಕರು ಸೇರಿ 135 ಹುರಿಯಾಳುಗಳ ಪಟ್ಟಿ ಅಂತಿಮಗೊಂಡಿದೆ
    ಗೆಲುವಿನ ಮಾನದಂಡ, ಸಾಮಾಜಿಕ ನ್ಯಾಯವನ್ನು ಪ್ರಮುಖ ಮಾನದಂಡವನ್ನಿಟ್ಟುಕೊಂಡಿದ್ದು.ಪಕ್ಷ ನಿಷ್ಠೆಗೆ ಆದ್ಯತೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಆಪ್ತ ಡಾ.ಎಚ್.ಸಿ.ಮಹಾದೇವಪ್ಪ ಮತ್ತು ರಾಮನಗರದಿಂದ ಸಂಸದ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸುವ ಸಂಬಂಧ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ
    ಕುಂದಗೋಳ ಕ್ಷೇತ್ರದಿಂದ ಶಾಸಕಿ ಕುಸುಮಾ ಶಿವಳ್ಳಿ, ಜೊತೆಗೆ ಕಾಂಗ್ರೆಸ್ ನಾಯಕ ಚಂದ್ರಶೇಖರ್ ಜತ್ತಲ್ ದೊಡ್ಡಬಳ್ಳಾಪುರಕ್ಕೆ ಶಾಸಕ ವೆಂಕಟರಮಣಯ್ಯ ಜೊತೆಗೆ ಬಿ.ಸಿ.ಆನಂದ್ ,ಪಾವಗಡ ಕ್ಷೇತ್ರಕ್ಕೆ ಶಾಸಕ ವೆಂಕಟರಮಣಪ್ಪ ಜೊತೆಗೆ ಅವರ ಪುತ್ರ ಎಚ್.ವಿ ವೆಂಕಟೇಶ್, ಲಿಂಗಸುಗೂರು ಕ್ಷೇತ್ರಕ್ಕೆ ಶಾಸಕ ಡಿ.ಎಸ್. ಹೂಲಗೇರಿ ಜೊತೆಗೆ ರುದ್ರಯ್ಯ ಹೆಸರು ಅಂತಿಮಗೊಳಿಸಿದ್ದು,ಮತ್ತೊಂದು ಸಭೆಯಲ್ಲಿ ಈ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಅಂತಿಮವಾಗಲಿದೆ ಎಂದು ಮೂಲಗಳು ತಿಳಿಸಿವೆ.
    ಈ ನಾಲ್ಕು ಕ್ಷೇತ್ರ ಹೊರತುಪಡಿಸಿ ಕನಕಪುರ-ಡಿ.ಕೆ.ಶಿವಕುಮಾರ್, ಬಿಟಿಎಂ ಲೇಔಟ್- ರಾಮಲಿಂಗಾರೆಡ್ಡಿ, ಜಯನಗರ- ಸೌಮ್ಯಾರೆಡ್ಡಿ, ಬ್ಯಾಟರಾಯನಪುರ- ಕೃಷ್ಣಬೈರೇಗೌಡ, ಹೆಬ್ಬಾಳ- ಭೈರತಿ ಸುರೇಶ್, ಗಾಂಧಿನಗರ- ದಿನೇಶ್ ಗುಂಡೂರಾವ್, ಕೊರಟಗೆರೆ- ಡಾ.ಜಿ.ಪರಮೇಶ್ವರ್, ಚಿತ್ತಾಪುರ- ಪ್ರಿಯಾಂಕ್ ಖರ್ಗೆ, ಕಂಪ್ಲಿ- ಗಣೇಶ್, ಬಳ್ಳಾರಿ ಗ್ರಾಮೀಣ- ನಾಗೇಂದ್ರ, ಸಂಡೂರು-ಇ.ತುಕಾರಾಂ, ಭದ್ರಾವತಿ- ಬಿ.ಕೆ.ಸಂಗಮೇಶ್, ದಾವಣಗೆರೆ ದಕ್ಷಿಣ- ಶಾಮನೂರು ಶಿವಶಂಕರಪ್ಪ, ಬೆಳಗಾವಿ ಗ್ರಾಮೀಣ- ಲಕ್ಷ್ಮೀ ಹೆಬ್ಬಾಳ್ಕರ್, ಖಾನಾಪುರ- ಅಂಜಲಿ ನಿಂಬಾಳ್ಕರ್, ಯಮಕನಮರಡಿ- ಸತೀಶ್ ಜಾರಕಿಹೊಳಿ, ಬಬಲೇಶ್ವರ- ಎಂ.ಬಿ.ಪಾಟೀಲ್, ಬಸವನಬಾಗೇವಾಡಿ- ಶಿವಾನಂದ ಪಾಟೀಲ್,
    ಕೊಪ್ಪಳ- ರಾಘವೇಂದ್ರ ಹಿಟ್ನಾಳ್, ಹೂವಿನಹಡಗಲಿ- ಪಿ.ಟಿ.ಪರಮೇಶ್ವರ್ ನಾಯ್ಕ, ಹಗರಿಬೊಮ್ಮನಹಳ್ಳಿ- ಭೀಮಾನಾಯ್ಕ, ಹೊಸಕೋಟೆ- ಶರತ್ ಬಚ್ಚೇಗೌಡ, ವರುಣಾ- ಯತೀಂದ್ರ ಸಿದ್ದರಾಮಯ್ಯ, ಕಲಘಟಗಿ- ಸಂತೋಷ್ ಲಾಡ್, ಹುಣಸೂರು-ಹೆಚ್.ಪಿ.ಮಂಜುನಾಥ್, ಪಿರಿಯಾ ಪಟ್ಟಣ- ವೆಂಕಟೇಶ್, ಚಾಮರಾಜನಗರ- ಸಿ.ಪುಟ್ಟರಂಗ ಶೆಟ್ಟಿ, ಹೆಗ್ಗಡದೇವನಕೋಟೆ- ಅನಿಲ್ ಚಿಕ್ಕಮಾದು, ಸರ್ವಜ ನಗರ- ಕೆ.ಜೆ.ಜಾರ್ಜ್,
    ಚಾಮರಾಜಪೇಟೆ- ಜಮೀರ್ ಅಹ್ಮದ್, ಶಿವಾಜಿನಗರ- ರಿಜ್ವಾನ್ ಅರ್ಷದ್, ವಿಜಯನಗರ- ಎಂ.ಕೃಷ್ಣಪ್ಪ, ಹುಬ್ಬಳ್ಳಿ- ಧಾರವಾಡ ಪೂರ್ವ- ಪ್ರಸಾದ್ ಅಬ್ಬಯ್ಯ, ಕೆಜಿಎಫ್ – ರೂಪ ಶಶಿಧರ್, ಬಂಗಾರಪೇಟೆ- ನಾರಾಯಣಸ್ವಾಮಿ, ಮಾಲೂರು- ನಂಜೇಗೌಡ, ರಾಯಚೂರು ಗ್ರಾಮೀಣ- ಬಸನಗೌಡ ದದ್ದಲ್ ,ದಾವಣಗೆರೆ ಉತ್ತರ- ಎಸ್.ಎಸ್.ಮಲ್ಲಿಕಾರ್ಜುನ್, ಹರಿಹರ- ಎಸ್.ರಾಮಪ್ಪ, ಹೊಸದುರ್ಗ- ಗೋವಿಂದಪ್ಪ, ಚಳ್ಳಕೆರೆ- ಟಿ.ರಘುಮೂರ್ತಿ, ಶಿರಾ- ಟಿ.ಬಿ.ಜಯಚಂದ್ರ, ಮಧುಗಿರಿ- ಕೆ.ಎನ್.ರಾಜಣ್ಣ, ರಾಣೆಬೆನ್ನೂರು- ಕೆ.ಬಿ.ಕೋಳಿವಾಡ, ಹಿರಿಯೂರು- ಸುಧಾಕರ್, ಕೆ.ಆರ್.ನಗರ- ಟಿ.ರವಿಶಂಕರ್, ಹನೂರು- ನರೇಂದ್ರ, ಚಿಕ್ಕನಾಯಕನಹಳ್ಳಿ- ಕಿರಣ್ ಕುಮಾರ್, ಮದ್ದೂರು- ಉದಯ್ ಕುಮಾರ್ ಗೌಡ, ನಾಗಮಂಗಲ-ಚೆಲುವರಾಯಸ್ವಾಮಿ, ಮಳವಳ್ಳಿ-ನರೇಂದ್ರ ಸ್ವಾಮಿ, ಗುಂಡ್ಲು ಪೇಟೆ- ಗಣೇಶ್ ಪ್ರಸಾದ್, ರಾಮದುರ್ಗ- ಅಶೋಕ್ ಪಟ್ಟಣ್, ಬಸವನಗುಡಿ-ಯುಬಿ ವೆಂಕಟೇಶ್, ರಾಜಾಜಿನಗರ- ಪುಟ್ಟಣ್ಣ, ಸೊರಬ-ಮಧು ಬಂಗಾರಪ್ಪ, ಚಿತ್ರದುರ್ಗ-ವೀರೇಂದ್ರ ಪಪ್ಪಿ, ಹಿರೇಕೆರೂರು-ಯುಬಿ ಬಣಕಾರ್, ವಿರಾಜಪೇಟೆ -ಪೊನ್ನಣ್ಣ, ಮಾಗಡಿ-ಬಾಲಕೃಷ್ಣ, ಹೊಸಕೋಟೆ- ಶರತ್ ಬಚ್ಚೇಗೌಡ, ಚಿಂತಾಮಣಿ-ಎಂಸಿ ಸುಧಾಕರ್, ನಿಪ್ಪಾಣಿ -ಕಾಕಾಸಾಹೇಬ್ ಪಾಟೀಲ್, ಹುಕ್ಕೇರಿ-ಎ.ಬಿ ಪಾಟೀಲ್ , ಗೋಕಾಕ್-ಅಶೋಕ್ ಪೂಜಾರಿ, ಹುನಗುಂದ -ವಿಜಯಾನಂದ ಕಾಶಪ್ಪನವರ್, ಮುದ್ದೇಬಿಹಾಳ-ಸಿ.ಎಸ್ ನಾಡಗೌಡ,
    ರಾಯಚೂರು-ಎನ್.ಎಸ್ ಬೋಸರಾಜ್, ಕನಕಗಿರಿ-ಶಿವರಾಜ್ ತಂಗಡಗಿ , ಯಲಬುರ್ಗಾ-ಬಸವರಾಜ್ ರಾಯರೆಡ್ಡಿ, ಕಾರವಾರ -ಸತೀಶ್ ಸೈಲ್, ಭಟ್ಕಳ-ಮಂಕಾಳ ವೈದ್ಯ, ಹಾನಗಲ್- ಶ್ರೀನಿವಾಸ್ ಮಾನೆ, ಬೈಂದೂರು-ಗೋಪಾಲ್ ಪೂಜಾರಿ,ಕಾಪು -ವಿನಯ್ ಕುಮಾರ್ ಸೊರಕೆ, ಕಡೂರು-ವೈಎಸ್‍ವಿ ದತ್ತಾ ಅವರ ಹೆಸರು ಅಂತಿಮಗೊಳಿಸಲಾಗಿದೆ.ಈ ಬಗ್ಗೆ ಪಕ್ಷದ ನಾಯಕಿ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರಿಗೆ ತಿಳಿಸಿ ಪಟ್ಟಿ ಪ್ರಕಟಿಸಲಾಗುವುದು ಎಂದು ಗೊತ್ತಾಗಿದೆ
    ಇದನ್ನು ಹೊರತುಪಡಿಸಿ ಕೆಲವು ಕ್ಷೇತ್ರಗಳಿಗೆ ಎರಡು ಹೆಸರುಗಳನ್ನು ಅಂತಿಮಗೊಳಿಸಿದ್ದು,ಈ ಬಗ್ಗೆ ಮತ್ತೊಂದು ಸುತ್ತಿನ ಸಭೆ ನಡೆಸಿ,ಒಂದೇ ಹೆಸರನ್ನು ಅಂತಿಮಗೊಳಿಸಲು ತೀರ್ಮಾನಿಸಲಾಗಿದೆ
    ಇವುಗಳಲ್ಲಿ ಹೊಳಲ್ಕೆರೆ ಕ್ಷೇತ್ರಕ್ಕೆ ಸವಿತಾ ರಘು, ಎಚ್.ಆಂಜನೇಯ, ತೀರ್ಥಹಳ್ಳಿ -ಕಿಮ್ಮನೆ ರತ್ನಾಕರ್, ಮಂಜುನಾಥ್ ಗೌಡ, ಬಳ್ಳಾರಿ ನಗರ-ಅಲ್ಲಂ ಪ್ರಶಾಂತ್, ಅನಿಲ್ ಲಾಡ್, ಶಿಗ್ಗಾಂವಿ-ಅಜ್ಜಂಪೀರ್ ಖಾದ್ರಿ, ಸೋಮಣ್ಣ ಬೇವಿನಮರದ, ಗಂಗಾವತಿ-ಇಕ್ಬಾಲ್ ಅನ್ಸಾರಿ, ಎಚ್.ಆರ್ ಶ್ರೀನಾಥ್, ಕಲಬುರಗಿ ಗ್ರಾಮೀಣ-ರೇವುನಾಯಕ ಬೆಳಮಗಿ, ವಿಜಯಕುಮಾರ್, ತೇರದಾಳ್-ಉಮಾಶ್ರೀ, ಮಲ್ಲೇಶಪ್ಪ, ಬಾಗಲಕೋಟೆ-ಎಚ್.ವೈ.ಮೇಟಿ, ದೇವರಾಜ್ ಪಾಟೀಲ್, ಬೆಳಗಾವಿ ಉತ್ತರ-ಫೀರೋಜ್ ಸೇಠ್, ಆಸೀಫ್ ಸೇಠ್, ಕುಡಚಿ – ಶ್ಯಾಮ್ ಭೀಮ್ ಘಾಟ್ಗೆ, ಮಹೇಂದ್ರ ತಮ್ಮಣ್ಣ, ಕಾಗವಾಡ -ರಾಜೂ ಕಾಗೆ, ದಿಗ್ವಿಜಯ್ ದೇಸಾಯಿ, ಅಥಣಿ -ಗಜಾನನ್ ಮಂಗಸೂಳಿ, ಶ್ರೀಕಾಂತ್ ಪೂಜಾರಿ, ನಂಜನಗೂಡು- ದರ್ಶನ್ ಧೃವನಾರಾಯಣ್ ,ಬೋಸ್ ಮಹಾದೇವಪ್ಪ ಚಾಮುಂಡೇಶ್ವರಿ-ಮರಿಗೌಡ, ಚಂದ್ರಶೇಖರ್,
    ಮಂಗಳೂರು ದಕ್ಷಿಣ-ಐವಾನ್ ಡಿಸೋಜಾ, ಜೆ.ಆರ್.ಲೋಬೋ, ಬೆಳ್ತಂಗಡಿ- ರಕ್ಷಿತ್, ಶಿವರಾಂ, ಬೆಂಗಳೂರು ದಕ್ಷಿಣ-ಆರ್.ಕೆ.ರಮೇಶ್, ಸುಷ್ಮಾ ರಾಜಗೋಪಾಲ್, ದಾಸರಹಳ್ಳಿ- ಕೃಷ್ಣಮೂರ್ತಿ, ನಾಗಲಕ್ಷ್ಮಿ ಚೌದರಿ, ಕಲಘಟಗಿ-ಸಂತೋಷ್ ಲಾಡ್, ನಾಗರಾಜ್ ಚಬ್ಬಿ ಅವರ ಹೆಸರುಗಳು ಪಟ್ಟಿಯಲ್ಲಿವೆ.
    ಉಳಿದಂತೆ ಪಕ್ಷ ಚಟುವಟಿಕೆಯಲ್ಲಿ ನಿರಾಸಕ್ತಿ ತೋರಿದ ಪ್ರಭಾವಿ ನಾಯಕರ ಕ್ಷೇತ್ರಗಳಿಗೂ ಪರ್ಯಾಯ ಅಭ್ಯರ್ಥಿಯ ಹೆಸರನ್ನು ನಮೂದಿಸಲಾಗಿದೆ. ಅದರಲ್ಲಿ ಸಿದ್ದರಾಮಯ್ಯ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡ ಮಾಜಿ ಶಾಸಕರ ಕ್ಷೇತ್ರಗಳು ಸೇರಿರುವುದು ಈ ಬಾರಿಯ ವಿಶೇಷವಾಗಿದೆ.
    ಟಿಕೆಟ್ ಹಂಚಿಕೆ ಸಂಬಂಧ ಕೇಂದ್ರ ಚುನಾವಣೆ ಸಮಿತಿ ಸಭೆಯ ಬೆನ್ನಲ್ಲೆ ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ತೀವ್ರಗೊಂಡಿದೆ. ಸಮೀಕ್ಷಾ ವರದಿ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕಲು ವರಿಷ್ಠರು ನಿರ್ಧರಿಸಿದ್ದಾರೆ.
    ಈ ನಡುವೆ ಆಕಾಂಕ್ಷಿಗಳ ದಂಡು ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದು, ಪ್ರಬಲ ಲಾಬಿಗಳು ನಡೆಯುತ್ತಿವೆ. ಶ್ರಿಮಂತರೂ, ಉದ್ಯಮಿಗಳು ಟಿಕೆಟ್‍ಗಾಗಿ ಮುಗಿ ಬಿದ್ದಿದ್ದಾರೆ. ಜೊತೆಗೆ ವಲಸಿಗ ನಾಯಕರ ಅಬ್ಬರವೂ ಜೋರಾಗಿದೆ.

    #siddaramaiah AICC Congress m ಕಾಂಗ್ರೆಸ್ Election ಧಾರವಾಡ ನಿಪ್ಪಾಣಿ ನ್ಯಾಯ ರಾಜಕೀಯ ಸಿದ್ದರಾಮಯ್ಯ ಹುಬ್ಬಳ್ಳಿ
    Share. Facebook Twitter Pinterest LinkedIn Tumblr Email WhatsApp
    Previous ArticleFacebookನಿಂದ ಮನೆಗೆ ಹೊರಟ10000 ಮಂದಿ #meta #jobs
    Next Article ಬಯಲಾಯ್ತು Express ಹೆದ್ದಾರಿ ‌ಬಣ್ಣ!
    vartha chakra
    • Website

    Related Posts

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    October 7, 2025

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    October 7, 2025

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    October 4, 2025

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಹೈಕಮಾಂಡ್ ಮುಂದೆ ಶಿವಕುಮಾರ್ ಗರಂ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • zapojchelyabinskvucky on ಬೇಸಿಗೆಯಲ್ಲಿ ರಾಜ್ಯಕ್ಕೆ ಎಷ್ಟು ವಿದ್ಯುತ್ ಬೇಕು ಗೊತ್ತಾ.
    • double happiness cigarette australia on ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    • double happiness cigarette australia on ಕೈಲಾಸವಾಸಿಯಾದ ‘ಕಲೈವಾಣಿ’
    Latest Kannada News

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    October 7, 2025

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    October 7, 2025

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    October 4, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಒಂದೇ ವರ್ಷದಲ್ಲಿ 3ನೇ ಗಂಡನನ್ನೂ ಬಿಟ್ಟನಟಿ#varthachakra #malayalamactresses #meeravasudevan #divorce #fact
    Subscribe