ಬೆಂಗಳೂರು, ಫೆ.4: ಲೋಕಸಭಾ ಚುನಾವಣೆಯಲ್ಲಿ (Lok Sabha 2024) ಕರ್ನಾಟಕದಿಂದ ಕನಿಷ್ಠ 20 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಬೇಕೆಂದು ಪಣತೊಟ್ಟಿರುವ ರಾಜ್ಯ ಕಾಂಗ್ರೆಸ್ ಇದೀಗ ಎಲ್ಲ 28 ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ್ಯ ಆಧರಿಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಪ್ರತಿ ಲೋಕಸಭಾ ಕ್ಷೇತ್ರಕ್ಕೆ ನೇಮಿಸಲಾಗಿರುವ ಉಸ್ತುವಾರಿ ಸಚಿವರು ಜಿಲ್ಲಾ ಮುಖಂಡರು ಮತ್ತು ವೀಕ್ಷಕರ ಅಭಿಪ್ರಾಯವನ್ನು ಆಧರಿಸಿ ಎಲ್ಲಾ 28 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಯನ್ನು ಪೂರ್ಣಗೊಳಿಸಲಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಅಡ್ಡಿಯಾದ ಅಂಶಗಳು, ಚುನಾವಣಾ ಕಾರ್ಯತಂತ್ರದಲ್ಲಿನ ಲೋಪಗಳು, ಮುಖಂಡರು ಮತ್ತು ಕಾರ್ಯಕರ್ತರ ನಡುವಿನ ಸಮನ್ವಯತೆ ಸೇರಿದಂತೆ ಎಲ್ಲ ವಿಷಯಗಳ ಕುರಿತು ಹಲವು ಸುತ್ತಿನಲ್ಲಿ ಸಭೆ ನಡೆಸಿರುವ ನಾಯಕರು ಈ ಬಾರಿ ಕಳೆದ ಚುನಾವಣೆಯಲ್ಲಿ ಆದ ಯಾವುದೇ ಲೋಪ ಪುನರಾವರ್ತನೆಯಾಗಬಾರದು ಎಂದು ತೀರ್ಮಾನ ಕೈಗೊಂಡಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಲು ಸದ್ಯದಲ್ಲೇ ಪ್ರದೇಶ ಕಾಂಗ್ರೆಸ್ ನ ರಾಜ್ಯ ಚುನಾವಣಾ ಸಮಿತಿ ಸಭೆ ಸೇರಲಿದೆ ಈ ಸಭೆಯಲ್ಲಿ ಚರ್ಚಿಸಲು ಅನುಕೂಲವಾಗುವಂತೆ ಎಲ್ಲಾ ಕ್ಷೇತ್ರಗಳಿಂದ ಪ್ರದೇಶ ಕಾಂಗ್ರೆಸ್ ಗೆ ಈಗಾಗಲೇ ಸಂಭಾವ್ಯರ ಪಟ್ಟಿಯನ್ನು ರವಾನಿಸಲಾಗಿದೆ.
ಈ ಪಟ್ಟಿಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಪರಹಮರ್ಶೆ ನಡೆಸಿದ ಬಳಿಕ ಆತರ ಇಲ್ಲಿನ ಹೆಸರುಗಳನ್ನು ಅಂತಿಮಗೊಳಿಸಿ ಅನುಮೋದನೆಗಾಗಿ ಎ ಐ ಸಿ ಸಿ ಗೆ ರವಾನಿಸಲಾಗುತ್ತದೆ ಫೆಬ್ರವರಿ ಮೂರನೇ ವಾರದಲ್ಲಿ ಎಐಸಿಸಿ ಉನ್ನತ ಸಮಿತಿ ಸಭೆ ಸೇರಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಗೊತ್ತಾಗಿದೆ.
ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಿಂದ ಪ್ರದೇಶ ಕಾಂಗ್ರೆಸ್ಗೆ ಸಲ್ಲಿಕೆಯಾಗಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಈ ರೀತಿ ಇದೆ.
ಬೆಳಗಾವಿ:
ಗಿರೀಶ ಸೊನವಾಲ್ಕರ
ವಿನಯ ನಾವಲಗಟ್ಟಿ, ಮೃಣಾಲ್,
ಚಿಕ್ಕೋಡಿ:
ಲಕ್ಷ್ಮಣರಾವ್ ಚಿಂಗಳೆ
ಚಿದಾನಂದ ಸವದಿ,ಗಜಾನನ ಮಂಗಸೂಳಿ
ಬಾಗಲಕೋಟೆ:
ವೀಣಾ ಕಾಶಪ್ಪನವರ್, ಪ್ರಕಾಶ ತಪಶೆಟ್ಟಿ, ಅಜಯಕುಮಾರ ಸರನಾಯಕ
ಬೀದರ್:
ಈಶ್ವರ ಖಂಡ್ರೆ,ರಾಜಶೇಖರ ಪಾಟೀಲ್ ಹುಮ್ನಾಬಾದ್,ಬಸವರಾಜ ಬುಳ್ಳಾ
ಧಾರವಾಡ:
ಶಿವಲೀಲಾ ವಿನಯ್ ಕುಲಕರ್ಣಿ, ರಜತ್ ಉಳ್ಳಾಗಡ್ಡಿಮಠ, ಮೋಹನ ಲಿಂಬಿಕಾಯಿ
ಹಾವೇರಿ-ಗದಗ :
ಸಲೀಂ ಅಹಮದ್, ಆನಂದ್ ಗಡ್ಡದೇವರ ಮಠ, ಸೋಮಣ್ಣ ಬೇವಿನಮರದ
ಕೊಪ್ಪಳ:
ರಾಜಶೇಖರ ಹಿಟ್ನಾಳ್,ಬಸನಗೌಡ ಬಾದರ್ಲಿ,ಅಮರೇಗೌಡ ಬಯ್ಯಾಪುರ
ಕಾರವಾರ:
ಆರ್.ವಿ.ದೇಶಪಾಂಡೆ, ನಿವೇದಿತ್ ಆಳ್ವ,ಅಂಜಲಿ ನಿಂಬಾಳ್ಕರ್
ಬಳ್ಳಾರಿ:
ವಿ.ಎಸ್.ಉಗ್ರಪ್ಪ , ವೆಂಕಟೇಶ್ ಪ್ರಸಾದ್, ಗುಜ್ಜಲ್ ನಾಗರಾಜ
ಚಿತ್ರದುರ್ಗ:
ಬಿ.ಎನ್ ಚಂದ್ರಪ್ಪ, ಎಚ್.ಆಂಜನೇಯ, ಜಿ.ಎಸ್.ಮಂಜುನಾಥ್
ದಾವಣಗೆರೆ:
ಪ್ರಭಾ ಮಲ್ಲಿಕಾರ್ಜುನ,ಮಂಜಪ್ಪ,ವಿನಯ್ ಕುಮಾರ್
ಕಲಬುರಗಿ: Not confirmed
ರಾಯಚೂರು:
ರವಿ ಪಾಟೀಲ್, ದೇವಣ್ಣ ವಕೀಲ,ಕುಮಾರ್ ನಾಯಕ್
ಬೆಂಗಳೂರು ಕೇಂದ್ರ :
ತಬು ದಿನೇಶ್ ಗುಂಡೂರಾವ್, ಬಿ.ಕೆ.ಹರಿಪ್ರಸಾದ್
ಮೊಹಮ್ಮದ್ ನಲಪಾಡ್ ಹ್ಯಾರೀಸ್
ಬೆಂಗಳೂರು ಉತ್ತರ:
ಕುಸುಮಾ ಹನುಮಂತರಾಯಪ್ಪ, ಪ್ರೊ.ರಾಜೀವ್ ಗೌಡ,
ಬೆಂಗಳೂರು ದಕ್ಷಿಣ :
ಸೌಮ್ಯ ರಾಮಲಿಂಗಾರೆಡ್ಡಿ
ಮಂಗಳೂರು:
ಮಿಥುನ್ ರೈ, ರಮಾನಾಥ ರೈ
ಉಡುಪಿ– ಚಿಕ್ಕಮಗಳೂರು
ಸುಧೀರ್‌ಕುಮಾರ್ ಮೂರಳ್ಳಿ, ಆರತಿ ಕೃಷ್ಣ
ಡಾ ಕೆ ಪಿ ಅಂಶುಮಂತ್
ಚಾಮರಾಜನಗರ :
ಬೋಸ್ ಮಹಾದೇವಪ್ಪ, ಎಂ.ಶಿವಣ್ಣ,
ಹಾಸನ:
ಬೀರೂರು ದೇವರಾಜು,ಶ್ರೇಯಸ್ ಪಟೇಲ್,ಶಿವಲಿಂಗೇಗೌಡ
ಮಂಡ್ಯ:
ಸ್ಟಾರ್ ಚಂದ್ರು, ರಮ್ಯಾ ದಿವ್ಯಸ್ಪಂದನ
ಮೈಸೂರು- ಕೊಡಗು,
ಯತೀಂದ್ರ ಸಿದ್ದರಾಮಯ್ಯ, ಲಕ್ಷ್ಮಣ್
ಶಿವಮೊಗ್ಗ : ಗೀತಾ ಶಿವರಾಜ್ ಕುಮಾರ್
ವಿಜಯಪುರ:
ಪ್ರಕಾಶ್ ರಾಥೋಡ್,ಶಾಂತಾ ನಾಯಕ್,ದೇವಾನಂದ್ ಚೌಹಾನ್
ತುಮಕೂರು: ಎಸ್.ಪಿ.ಮುದ್ದಹನುಮೇಗೌಡ,ಕೆ.ಎನ್.ರಾಜಣ್ಣ,
ಬೆಂಗಳೂರು ಗ್ರಾಮಾಂತರ: ಡಿ.ಕೆ.ಸುರೇಶ್
ಕೋಲಾರ: ಕೆ.ಎಚ್.ಮುನಿಯಪ್ಪ, ಸಿ.ಎಂ.ಮುನಿಯಪ್ಪ, ಚಿಕ್ಕ ಪೆದ್ದನ್ನ
ಚಿಕ್ಕಬಳ್ಳಾಪುರ : ವೀರಪ್ಪ ಮೊಯ್ಲಿ, ರಕ್ಷಾ ರಾಮಯ್ಯ,ಶಿವಶಂಕರ್ ರೆಡ್ಡಿ