ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 17,092 ಕೊರೋನಾ ಪ್ರಕರಣ ವರದಿಯಾಗಿದೆ. ಕೊರೋನಾ ಸೋಂಕಿತರಾಗಿದ್ದ 14,684 ಮಂದಿ ಇದೇ ಅವಧಿಯಲ್ಲಿ ಗುಣಮುಖರಾಗಿದ್ದಾರೆ.
ಕೊರೋನಾದಿಂದ ಕಳೆದ 24 ಗಂಟೆ ಅವಧಿಯಲ್ಲಿ29 ಮಂದಿ ಮೃತಪಟ್ಟಿದ್ದಾರೆ. ದೇಶದ ವಿವಿಧ ಆಸ್ಪತ್ರೆಗಳಲ್ಲಿ 1,09,568 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಸಿಟಿವಿಟಿ ದರ ಶೇಕಡ 4.14ಕ್ಕೆ ತಲುಪಿದೆ.
ಕೊರೋನಾ ಸೋಂಕು ತಡೆಗಟ್ಟಲು ಪರಿಣಾಮಕಾರಿ ಕ್ರಮತೆಗೆದುಕೊಳ್ಳುವಂತೆ ಕೇಂದ್ರ ಆರೋಗ್ಯ ಇಲಾಖೆ ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.