ಬೆಂಗಳೂರು,ಫೆ.24- ಮಕ್ಕಳು ಬಾಯಿ ಚಪ್ಪರಿಸಿಕೊಂಡು ತಿನ್ನುವ ಕಾಟನ್ ಕ್ಯಾಂಡಿ ರಾಜ್ಯದಲ್ಲಿ ಬ್ಯಾನ್ ಆಗುವ ಸಾಧ್ಯತೆಗಳಿವೆ.
ಮಕ್ಕಳ ಅತ್ಯಂತ ಇಷ್ಟವಾದ ಈ ತಿಂಡಿ ತಯಾರಿಸಲು
ಅತಿಯಾದ ಕಲರ್ ಹಾಗೂ ರಾಸಾಯನಿಕ ಬೆರಕೆ ಹೊಂದಿರುವ ಸಕ್ಕರೆ ಬಳಸಲಾಗುತ್ತದೆ ಇದರಿಂದ ಅದನ್ನು ಸೇವಿಸುವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ತಮಿಳುನಾಡು ಮತ್ತು ಗೋವಾದಲ್ಲಿ ಈಗಾಗಲೇ ಇದನ್ನು ನಿಷೇಧಿಸಲಾಗಿದೆ.
ಆಹಾರ ಮತ್ತು ಸುರಕ್ಷತಾ ಇಲಾಖೆ ಅಧಿಕಾರಿಗಳು ರಸ್ತೆಯಲ್ಲಿ ಮಾರಾಟ ಮಾಡುವ ಕಾಟನ್ ಕ್ಯಾಂಡಿ ಮಾದರಿಯನ್ನು ಬೆಂಗಳೂರು ಸೇರಿದಂತೆ ರಾಜ್ಯದ್ಯಾಂತ ಸಂಗ್ರಹಿಸಿ,ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಈ ವರದಿ ಕಾಟನ್ ಕ್ಯಾಂಡಿ ಯಲ್ಲಿ ರೋಡಮೈನ್-ಬಿ ಕ್ಯಾನ್ಸರ್‍ಕಾರಕ ಅಂಶ ಇದೆ ಎಂದು ತಿಳಿಸಿದೆ.ಈ ರಾಸಾಯನಿಕ ಸೇವನೆಯಿಂದ ಕ್ಯಾನ್ಸರ್ ಸೇರಿದಂತೆ ಹಲವು ಮಾರಕ ರೋಗಗಳು ಬರುತ್ತವೆ ಎಂಬ ಅಂಶ ದೃಢಪಟ್ಟಿರುವುದರಿಂದ ಕಾಟನ್ ಕ್ಯಾಂಡಿಯನ್ನು ನಿಷೇಧಕ್ಕೆ ಮುಂದಾಗಿದ್ದಾರೆ.