ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಾಂಕ್ರಾಮಿಕ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಸೋಂಕು ನಿಯಂತ್ರಣ ದೃಷ್ಟಿಯಿಂದ ರಾಜ್ಯ ಸರ್ಕಾರ ಶಾಲಾ-ಕಾಲೇಜು ಹಾಗು ಅಪಾರ್ಟ್ ಮೆಂಟ್ ಗಳಿಗೆ ಅನ್ವಯವಾಗುವಂತೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಪ್ರಕಾರ ಅಪಾರ್ಟ್‍ಮೆಂಟ್‍ಗಳಲ್ಲಿ ಮೂರರಿಂದ ರಿಂದ 5 ಪ್ರಕರಣ ದಾಖಲಾದಲ್ಲಿ ಸಣ್ಣ ಕ್ಲಸ್ಟರ್ ಎಂದು ಪರಿಗಣಿಸಬೇಕು. 15ಕ್ಕಿಂತ ಹೆಚ್ಚು ಪ್ರಕರಣ ದಾಖಲಾದಲ್ಲಿ ಎಲ್ಲರಿಗೂ ರ್‍ಯಾಪಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಬೇಕು. ಮನೆ ಕೆಲಸಕ್ಕೆ 60 ವರ್ಷ ವಯೋಮಾನಕ್ಕಿಂತ ಕೆಳಗಿನವರನ್ನು ನೇಮಿಸಿಕೊಳ್ಳಬೇಕು.
ಮನೆಕೆಲಸಗಾರರು, ಸಿಬ್ಬಂದಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಸೋಂಕು ಪತ್ತೆಯಾದಲ್ಲಿ ಪಾರ್ಕ್, ಸ್ವಿಮ್ಮಿಂಗ್‍ಪೂಲ್, ಕ್ಲಬ್‍ಹೌಸ್‍ಗಳನ್ನು ಮುಚ್ಚುವಂತೆ ಸಲಹೆ ಮಾಡಲಾಗಿದೆ.
ಸೋಂಕು ಕಂಡು ಬಂದ ಫ್ಲೋರ್, ಅಪಾರ್ಟ್‍ಮೆಂಟ್ ಸೀಲ್‍ಡೌನ್ ಮಾಡಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸೋಂಕು ಬಂದ್ರೆ ಕಡ್ಡಾಯ ರಜೆ ಹಾಕಬೇಕು. ಈ ಎಲ್ಲಾ ಮಾರ್ಗಸೂಚಿಗಳು ಖಾಸಗಿ ಕಚೇರಿಗಳಿಗೂ ಅನ್ವಯವಾಗಲಿದೆ ಎಂದು ಹೇಳಿದೆ
Previous Articleಕಮಲಿ ಧಾರಾವಾಹಿ ನಟಿ ಅಂಕಿತಾ ಎಂಗೇಜ್ಮೆಂಟ್
Next Article ಬೆಂಗಳೂರಲ್ಲಿ ಹೊಸ Traffic Rules..