ಬೆಂಗಳೂರು,ಫೆ.6-
ಅನುಮತಿ ಇಲ್ಲದೆ ಪ್ರದೇಶ Congress ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಕ್ಕಳ ವೀಡಿಯೊ ಅಪ್ಲೋಡ್ ಮಾಡಿದ ಹಿನ್ನೆಲೆಯಲ್ಲಿ ಎರಡು ಖಾಸಗಿ ಯೂಟ್ಯೂಬ್ ಚಾನಲ್ಗಳ ವಿರುದ್ಧ ಕೇಂದ್ರ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಡಿ.ಕೆ.ಶಿವಕುಮಾರ್ ಕಚೇರಿ ಸಿಬ್ಬಂದಿ ಉಮೇಶ್ ಎಂಬುವರ ದೂರು ಆಧರಿಸಿ ಎಫ್ಐಆರ್ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.
ಬಿ4ಯು ಕರ್ನಾಟಕ ಹಾಗೂ ಇಂಡಿಯಾ ರಿಪೋರ್ಟ್ ಎಂಬ ಹೆಸರಿನ ಎರಡು ಖಾಸಗಿ ಯೂಟ್ಯೂಬ್ ಚಾನಲ್ಗಳು (YouTube) ‘ಹೂ ಇಸ್ ಆಭರಣ ಡಿ.ಕೆ ಶಿವಕುಮಾರ್’ ಹಾಗೂ ‘ಡಿಕೆಶಿ ಮಗ ಯಾರು..?’, ‘ಬಂಡೆ ಮಕ್ಕಳು ಏನ್ಮಾಡ್ತಿದ್ದಾರೆ?’ ಎಂಬ ಟೈಟಲ್ ನೀಡಿ ವೀಡಿಯೊ ಸೃಷ್ಟಿಸಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅನುಮತಿ ಇಲ್ಲದೆ ಫೋಟೋ, ವೀಡಿಯೊ ಅಪ್ಲೋಡ್ ಮಾಡಿರುವ ಹಿನ್ನೆಲೆಯಲ್ಲಿ ಐಟಿ ಅಕ್ಟ್ (IT Act) ನಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಉಮೇಶ್ ದೂರು ನೀಡಿದ್ದರು. ‘ಡಿಕೆ ಶಿವಕುಮಾರ್ ಮಕ್ಕಳು ಮೀಡಿಯಾ ಮುಂದೆ ಬರೋದಿಲ್ಲ ಯಾಕೆ?’ ಎಂದು ಇಂಡಿಯಾ ರಿಪೋರ್ಟ್ ವರದಿ ಮಾಡಿದೆ.
ಈ ರೀತಿ ಅನುಮತಿ ಇಲ್ಲದೇ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿರುವ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೇ, ವೀಡಿಯೊವನ್ನು ಡಿಲೀಟ್ ಮಾಡಿಸಬೇಕೆಂದು ಮಾಹಿತಿ ಮತ್ತು ತಂತ್ರಜ್ಞಾನ (ಐಟಿ) ಕಾಯ್ದೆಯಡಿ ಉಮೇಶ್ ಕೇಂದ್ರ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಹೀಗಾಗಿ ಈ ದೂರಿನನ್ವಯ ಎರಡೂ ಯೂಟ್ಯೂಬ್ ವಾಹಿನಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


1 Comment
Тяговые аккумуляторные https://ab-resurs.ru батареи для складской техники: погрузчики, ричтраки, электротележки, штабелеры. Новые АКБ с гарантией, помощь в подборе, совместимость с популярными моделями, доставка и сервисное сопровождение.