Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » DGP ಬೆವರಿಳಿಸಿದ ಸಿಎಂ..
    ಸುದ್ದಿ

    DGP ಬೆವರಿಳಿಸಿದ ಸಿಎಂ..

    vartha chakraBy vartha chakraMay 18, 2022Updated:May 19, 2022No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷೆ ಅಕ್ರಮದ ಆಳ ಬಗೆದಷ್ಟು ಆಳವಾಗುತ್ತಲೇ ಇದೆ. ಈ ವಿಷಯವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಗೆ ಬೆವರಿಳಿಸಿದ್ದಾರೆ.
    ಕಾಂಗ್ರೆಸ್ ಯುವ ನಾಯಕ ಪ್ರಿಯಾಂಕ್ ಖರ್ಗೆ ಈ ಹಗರಣದ ಬಗ್ಗೆ ಮಾಹಿತಿ ಹೊರ ಹಾಕುತ್ತಿದ್ದಂತೆ ಸಿಎಂ ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಕರೆದು ವಿವರಣೆ ಪಡೆದಿದ್ದರು.ಆಗ ಸುದೀರ್ಘ ವರದಿಯೊಂದನ್ನು ಒಪ್ಪಿಸಿದ್ದ ಪ್ರವೀಣ್ ಸೂದ್ ಇದರಲ್ಲಿ ಇಲಾಖೆಯ ಪಾತ್ರ ಏನೂ ಇಲ್ಲ. ಇಲಾಖೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಪರೀಕ್ಷಾ ಕೇಂದ್ರವನ್ನು ಗೊತ್ತು ಪಡಿಸುತ್ತದೆ. ನಂತರ ಪ್ರಶ್ನೆಪತ್ರಿಕೆ ಸಿದ್ದ ಪಡಿಸಿ ರವಾನಿಸುವುದನ್ನು ಬಿಟ್ಟರೆ ಬೇರೆನೂ ಮಾಡುವುದಿಲ್ಲ ಅಕ್ರಮಕ್ಕೂ ಇಲಾಖೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರೆನ್ನಲಾಗಿದೆ.
    ಪರೀಕ್ಷೆಯಲ್ಲಿ ನಡೆದ ಅಕ್ರಮಗಳೆಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸೀಮಿತವಾದವು. ನೇಮಕಾತಿ ವಿಭಾಗದಲ್ಲಿ ಯಾವುದೇ ರೀತಿಯ ಅಕ್ರಮ ನಡೆಯಲು ಸಾಧ್ಯವೇ ಇಲ್ಲ. ಈ ವಿಭಾಗದಲ್ಲಿ ಅಷ್ಟೊಂದು ಶಿಸ್ತು ಮತ್ತು ಕಠಿಣ ನಿಯಮಗಳಿವೆ ನಮ್ಮ ನೇಮಕಾತಿ ವಿಭಾಗ ದೇಶಕ್ಕೆ ಮಾದರಿಯಾಗಿದೆ ಎಂದು ಪ್ರವೀಣ್ ಸೂದ್ ಹೇಳಿದ್ದು, ಅದನ್ನು ನಂಬಿದ ಸಿಎಂ ಹಾಗಾದರೆ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮವೆಸಗಿದವರನ್ನು ಬಲಿ ಹಾಕಿ ಎಂದು ಹೇಳಿ ಪ್ರವಿಣ್ ಸೂದ್ ಅವರನ್ನು ಪ್ರಶಂಸಿದರೆಂದು ಮೂಲಗಳು ತಿಳಿಸಿವೆ.
    ಇದಾದ ನಂತರ ಅಕ್ರಮದ ಜಾಲ ಕಲಬುರಗಿಯಿಂದ ಬೆಂಗಳೂರನ್ನು ತಲುಪುತ್ತಿದ್ದಂತೆ ಸಿಎಂ ಕೆಂಡಾಮಂಡಲರಾದರು. ತನಿಖಾಧಿಕಾರಿಗಳನ್ನು ಕಚೇರಿಗೆ ಕರೆಯಿಸಿಕೊಂಡು‌ ಮಾಹಿತಿ ಪಡೆದುಕೊಂಡರು ಇವರು ನೀಡಿದ ಮಾಹಿತಿ ಕೇಳಿ‌ ಸಿಎಂ ಬೆಚ್ಚಿಬಿದ್ದರೆನ್ನಲಾಗಿದೆ.
    ಪರೀಕ್ಷಾ ಕೇಂದ್ರದಲ್ಲಿ ಮಾತ್ರ ಅಕ್ರಮ ನಡೆದಿದೆ ಎಂಬ ಪೊಲೀಸ್ ಮಹಾನಿರ್ದೇಶಕರ ವರದಿ ನಂಬಿದ್ದ ಸಿಎಂ ಈ ಕರ್ಮಕಾಂಡ ಪ್ರವೀಣ್ ಸೂದ್ ಕಾಲ ಬುಡದಲ್ಲಿ ನಡೆದಿದೆ ಎಂಬುದನ್ನು‌ ಕೇಳಿ ಕೆಂಡಾಮಂಡಲರಾದರೆನ್ನಲಾಗಿದೆ.
    ಅಕ್ರಮದ ಬಹುತೇಕ ಎಲ್ಲಾ ಒಎಂಆರ್ ಪ್ರತಿಗಳನ್ನು ಡಿ.ಜಿ.ಕಚೇರಿಯ ನೇಮಕಾತಿ ವಿಭಾಗದಲ್ಲೇ ತಿದ್ದಲಾಗಿದೆ. ತಿದ್ದಲ್ಪಟ್ಟಿರುವ ಒಎಂಆರ್ ಪ್ರತಿಗಳಲ್ಲಿ ಎರಡು ಮೂರು ಬಗೆಯ‌ ಇಂಕ್ ಬಳಕೆಯಾಗಿದೆ. ಪ್ರತಿಯೊಂದು ಒಎಮ್ ಅರ್ ಮೇಲೆ ಎಳೆಂಟು ಬೆರಳಚ್ಚಿನ ಗುರುತುಗಳಿರುವುದನ್ನು ಸಿಐಡಿ ತನಿಖಾ ತಂಡ ಪತ್ತೆ‌ ಹಚ್ಚಿದ್ದು ಎಲ್ಲವನ್ನೂ ಸಿಎಂ ಗಮನಕ್ಕೆ ತಂದಿದೆ.
    ಈ ವಿಷಯ‌ ತಿಳಿದ ಸಿಎಂ ಪೊಲೀಸ್ ಮಹಾನಿರ್ದೇಶಕರನ್ನು ತಮ್ಮ ಕೊಠಡಿಗೆ ಕರೆಯಿಸಿಕೊಂಡು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರೆನ್ನಲಾಗಿದೆ. ನಿಮ್ಮ ಕಾಲ ಬುಡದಲ್ಲೇ‌ ಬ್ರಹ್ಮಾಂಡ ಕರ್ಮಕಾಂಡ ನಡೆಯುತ್ತಿದ್ದರೂ ಏನೂ ಗೊತ್ತಿಲ್ಲದಂತೆ ವರ್ತಿಸುತ್ತಿರಾ.. ಈ ಒಂದು ಪ್ರಕರಣ ಸಾಕಲ್ಲವೇ ನೀವು‌ ಎಷ್ಟು ಸಮರ್ಥ, ದಕ್ಷ ಅಧಿಕಾರಿ ಎಂದು ಗೊತ್ತಾಗಲು, ನಿಮ್ಮ‌ ಅಧೀನದಲ್ಲಿರುವ ಹಿರಿಯ ಅಧಿಕಾರಿಯ ಕೃಪಾಶೀರ್ವಾದವಿಲ್ಲದೆ ಇದು ನಡೆಯಲು ಸಾಧ್ಯವೇ ಎಂದು‌ ಪ್ರಶ್ನಿಸಿದರೆನ್ನಲಾಗಿದೆ.
    ನೇಮಕಾತಿಯಲ್ಲಿ ರಾಜಕಾರಣಿಗಳಿದ್ದಾರೆಂದು ದಾರಿ ತಪ್ಪಿಸುತ್ತೀರಾ.. ಹಿರಿ-ಕಿರಿಯ ಅಧಿಕಾರಿಗಳು ಇದನ್ನೇ ಕಸುಬಾಗಿಸಿಕೊಂಡರು ನಿಮ್ಮ ಗುಪ್ತದಳ ಮಾಹಿತಿ ನೀಡಲಿಲ್ಲವೇ..? ನಿಮ್ಮ ಕಚೇರಿಯ ಪಕ್ಕದಲ್ಲೇ ನಡೆದ ಕರ್ಮಕಾಂಡ ನಿಮಗೆ ಗೊತ್ತಾಗಲಿಲ್ಲ ಎಂದರೆ ರಾಜ್ಯದ ವಿದ್ಯಮಾನ ಹೇಗೆ ತಿಳಿದುಕೊಳ್ಳುತ್ತೀರಾ ಎಂದು‌ ಪ್ರಶ್ನಿಸಿ ಬೆವರಿಳಿಸಿದರೆನ್ನಲಾಗಿದೆ.
    ಈ‌ ಅಕ್ರಮದ ಬಗ್ಗೆ ಸಬೂಬು ಸಮಜಾಯಿಷಿಗಳು ಬೇಕಿಲ್ಲ ತಪ್ಪಿತಸ್ಥರು ಜೈಲು ಸೇರಬೇಕಷ್ಟೆ ನಿಮ್ಮಂತಹವರ ಅಸಮರ್ಥತೆಯ ಕಾರಣಕ್ಕೆ‌ ಸರ್ಕಾರ ಕೆಟ್ಟ ಹೆಸರು ಪಡೆಯಬೇಕಾಗಿದೆ ನನಗೆ ದಿಟ್ಟ ಉತ್ತರ ಸ್ಪಷ್ಟ ಫಲಿತಾಂಶ ಬೇಕಿದೆ ಎಂದು ಹೇಳಿ ಅವರಿಂದ ಯಾವ ಸ್ಪಷ್ಟನೆಯನ್ನೂ‌ ಕೇಳದೆ ಬೆವರಿಳಿಸಿ ಕಳುಹಿಸಿದರೆನ್ನಲಾಗಿದೆ.
    ಇದೀಗ ಮುಖ್ಯಮಂತ್ರಿಗಳು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಬೆವರಳಿಸಿದ್ದು ಪೊಲೀಸ್ ಪಡಸಾಲೆಯಲ್ಲಿ ಗುಸುಗಸು ಸುದ್ದಿಗೆ ಗ್ರಾಸವಾಗಿದೆ..

    News praveen sood and bommayi
    Share. Facebook Twitter Pinterest LinkedIn Tumblr Email WhatsApp
    Previous Articleನಟರಿಗೆ ಇರುವ ಮಾನ್ಯತೆ, ನಟಿಯರಿಗೆ ಇಲ್ಲ – ನಟಿ ರಮ್ಯ
    Next Article ಜೆಡಿಎಸ್ ಪಂಚರತ್ನ ಯಾತ್ರೆ
    vartha chakra
    • Website

    Related Posts

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    July 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    July 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    July 22, 2025

    Comments are closed.

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Leroyevorn on ಗಾಯಾಳು ಡಿಸಿಪಿ ಸೈದುಲ್ ಮಾಡಿದ ಕೆಲಸ ಗೊತ್ತಾ ?
    • BurtonEroke on ವಯನಾಡ್ ಗೆ ತೆರಳಿದ ಸಂತೋಷ್ ಲಾಡ್.
    • Leroyevorn on ನಟಿ ರನ್ಯಾ ರಾವ್ ಕಳ್ಳದಂಧೆಯ ಪುರಾಣ
    Latest Kannada News

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    July 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    July 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    July 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸರೋಜಾದೇವಿ, SM ಕೃಷ್ಣ ಮದ್ವೆ ಆಗಲಿಲ್ಲವೇಕೆ
    Subscribe