Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Hindenburg ನ ಆರೋಪಗಳನ್ನು ಒಪ್ಪಿಕೊಂಡರೆ Adani?
    ರಾಷ್ಟ್ರೀಯ

    Hindenburg ನ ಆರೋಪಗಳನ್ನು ಒಪ್ಪಿಕೊಂಡರೆ Adani?

    vartha chakraBy vartha chakraJanuary 31, 2023Updated:March 20, 202326 Comments3 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಗೌತಮ್ ಅದಾನಿ ಮತ್ತು ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆಯ ನಡುವಿನ ಆರೋಪ-ಪ್ರತ್ಯಾರೋಪಗಳ ತಾಪ ದಿನೇ ದಿನೇ ಹೆಚ್ಚಾಗುತ್ತಿದೆ. ಜನವರಿ 24, 2023 ರಂದು New York ನಗರದಲ್ಲಿ ನೆಲೆಗೊಂಡಿರುವ ಹಿಂಡೆನ್‌ಬರ್ಗ್ ಸಂಸ್ಥೆಯು (Hindenburg Research) Adani Group Companies ವಿರುದ್ಧ ವರದಿಯೊಂದನ್ನು ಪ್ರಕಟಿಸಿ, ವಂಚನೆಯ ಆರೋಪವನ್ನು ಹೊರಿಸಿತ್ತು. ತತ್ಕಾಲಕ್ಕೆ “ಈ ವರದಿ ಆಧಾರರಹಿತವಾಗಿದೆ ಮತ್ತು ದುರುದ್ದೇಶಪೂರಿತವಾಗಿದೆ” ಎಂದು ಅದಾನಿ ಸಂಸ್ಥೆ ಪ್ರತಿಕ್ರಿಯಿಸಿತ್ತು. ನಂತರ ಆರೋಪಗಳನ್ನು ಖಂಡಿಸುತ್ತಾ, ಜನವರಿ 29, 2023 ಭಾನುವಾರದ ತಡ ರಾತ್ರಿಯ ವೇಳೆಗೆ 413 ಪುಟಗಳುಳ್ಳ ಸುದೀರ್ಘ ವರದಿಯೊಂದನ್ನು ಅದಾನಿ ಸಂಸ್ಥೆಯು ಪ್ರಕಟಿಸಿದೆ. ಅದರಲ್ಲಿ ಹಿಂಡೆನ್‌ಬರ್ಗ್ ಸಂಸ್ಥೆಯನ್ನು “Madoffs of Manhattan” ಎಂದು ಕರೆಯುವುದರೊಂದಿಗೆ ‘ಸೆಕ್ಯುರಿಟೀಸ್ ಮತ್ತು ವಿದೇಶಿ ವಿನಿಮಯ ಕಾನೂನುಗಳನ್ನು ಶಾರ್ಟ್ ಸೆಲ್ಲರ್ ಉಲ್ಲಂಘಿಸಿದೆ’ ಎಂದು ಆಪಾದಿಸಿದೆ. ಮತ್ತು ‘ಇದು ಭಾರತದ ಮೇಲಿನ ಉದ್ದೇಶಪೂರ್ವಕ ದಾಳಿಯಾಗಿದೆ, ಭಾರತೀಯ ಸಂಸ್ಥೆಗಳ ಸ್ವಾತಂತ್ರ್ಯ, ಸಮಗ್ರತೆ, ಗುಣಮಟ್ಟ ಮತ್ತು ಭಾರತದ ಬೆಳವಣಿಗೆ ಮತ್ತು ಮಹತ್ವಾಕಾಂಕ್ಷೆಯನ್ನು ಉದ್ದೇಶಿಸಿ ಮಾಡಿದ ದಾಳಿಯಾಗಿದೆ ‘ ಎಂದು ಅದಾನಿ ಸಂಸ್ಥೆಯು ಕಟುವಾಗಿ ಟೀಕಿಸಿದೆ.

    ಇದನ್ನು ನಿರಾಕರಿಸಿದ ಹಿಂಡೆನ್‌ಬರ್ಗ್ ಸಂಸ್ಥೆಯು, “ಇದು ಉದ್ದೇಶಪೂರ್ವಕ ದಾಳಿಯಲ್ಲ. ಸ್ಪಷ್ಟವಾಗಿ ಹೇಳುವುದಾದರೆ, ಭಾರತವು ಅದ್ಭುತವಾದ ಪ್ರಜಾಪ್ರಭುತ್ವವನ್ನು ಹೊಂದಿದೆ. ಪ್ರಜ್ವಲವಾದ ಭವಿಷ್ಯವನ್ನು ಹೊಂದಿರುವ ಭಾರತ ಒಂದು ಉದಯೋನ್ಮುಖ ಸೂಪರ್ ಪವರ್ ರಾಷ್ಟ್ರ ಎಂದು ನಾವು ನಂಬುತ್ತೇವೆ. ಅದಾನಿ ಸಂಸ್ಥೆಯು ತನ್ನ ಏಳಿಗೆಯನ್ನು ರಾಷ್ಟ್ರದ ಏಳಿಗೆಯೊಂದಿಗೆ ಸಂಯೋಜಿಸಲು ಪ್ರಯತ್ನಿಸುತ್ತಿದೆ. ರಾಷ್ಟ್ರೀಯತೆಯ ಸೋಗಿನಲ್ಲಿ ತನ್ನ ವಂಚನೆಯನ್ನು ಮರೆಮಾಚಲು ಪ್ರಯತ್ನಿಸುತ್ತಿದೆ. ಆದರೆ, ಭಾರತದ ಧ್ವಜದಲ್ಲಿ ತನ್ನನ್ನು ತಾನು ಆವರಿಸಿಕೊಂಡ ಅದಾನಿ ಸಂಸ್ಥೆಯು ಭಾರತದ ಭವಿಷ್ಯವನ್ನು ವ್ಯವಸ್ಥಿತವಾಗಿ ಲೂಟಿ ಮಾಡುತ್ತಿದೆ. ವಂಚನೆ ಮಾಡಿದ್ದು ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದರೂ, ವಂಚನೆಯು ವಂಚನೆಯೇ ಆಗಿರುತ್ತದೆ.

    ವರದಿಯಲ್ಲಿ 413 ಪುಟಗಳಿವೆ. ಆದರೆ ಆರೋಪಗಳಿಗೆ ಸಂಬಂಧಿಸಿದ ವಿಷಯಗಳಿರುವುದು ಕೇವಲ 30 ಪುಟಗಳಲ್ಲಿ ಮಾತ್ರ. ಉಳಿದಂತೆ, 330 ಪುಟಗಳು ನ್ಯಾಯಾಲಯದ ದಾಖಲೆಗಳು, ಮತ್ತುಳಿದ 53 ಪುಟಗಳು ಮಹಿಳಾ ಉದ್ಯಮಶೀಲತೆ ಮತ್ತು ಸುರಕ್ಷಿತ ತರಕಾರಿಗಳ ಉತ್ಪಾದನೆಗಳಂತಹ ಇತರ ಉಪಕ್ರಮಗಳ ವಿವರಗಳು, ಉನ್ನತ ಮಟ್ಟದ ಹಣಕಾಸಿನ ವಿವರಗಳು ಮತ್ತು ಸಾಮಾನ್ಯ ಮಾಹಿತಿಗಳ ಕುರಿತಾಗಿವೆ. ನಮ್ಮ ಆರೋಪಗಳಿಗೆ ಮತ್ತು ಪ್ರಶ್ನೆಗಳಿಗೆ ಯಾವುದೇ ರೀತಿಯ ಸ್ಪಷ್ಟವಾದ ಮತ್ತು ನಿಖರವಾದ ಉತ್ತರ ವರದಿಯಲ್ಲಿಲ್ಲ” ಎಂದು ಉತ್ತರಿಸಿದೆ.

    ಗೌತಮ್ ಅದಾನಿಯವರ ಸಹೋದರ ವಿನೋದ್ ಅದಾನಿಯವರಿಗೆ ಸಂಬಂಧಿಸಿದ ಕಡಲಾಚೆಯ ಶೆಲ್ ಘಟಕಗಳಿಂದ, ಅದಾನಿ ಗ್ರೂಪ್ ಮೂಲಕ ಹರಿದು ಬಂದ ಶತಕೋಟಿ ಡಾಲರ್‌ಗಳ ಮೂಲದ ಬಗ್ಗೆ ಹಿಂಡೆನ್‌ಬರ್ಗ್ ಪ್ರಶ್ನಿಸಿತ್ತು. ಅದಕ್ಕುತ್ತರವಾಗಿ ಅದಾನಿ ಸಂಸ್ಥೆಯು, “ನಮಗೆ ಅವರ ನಿಧಿಯ ಮೂಲದ ಬಗ್ಗೆ ತಿಳಿದಿರುವುದಿಲ್ಲ ಅಥವಾ ತಿಳಿದಿರುವ ಅಗತ್ಯವಿಲ್ಲ” ಎಂಬ ಹಾರಿಕೆಯ ಹೇಳಿಕೆಯನ್ನು ನೀಡಿದೆ.

    ಅಕ್ರಮಗಳೆಂದು ಹಿಂಡೆನ್‌ಬರ್ಗ್ ಆರೋಪಿಸಿದ ಪ್ರಮುಖ ವಿಷಯಗಳಲ್ಲಿ ಕೆಲವೆಂದರೆ –

    * ಶಂಕಿತ ಕಡಲಾಚೆಯ ಸ್ಟಾಕ್ ಪಾರ್ಕಿಂಗ್ ಘಟಕಗಳು (stock parking entities ) ಮತ್ತು ಅದಾನಿ ಪ್ರವರ್ತಕರ ನಡುವಿನ ಹಲವಾರು ಅಕ್ರಮಗಳು ಮತ್ತು ಶಂಕಾಸ್ಪದವಾದ ಸಂಪರ್ಕಗಳು
    * ವಿನೋದ್ ಅದಾನಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಮಾರಿಷಸ್ ಘಟಕದಿಂದ 253 ಮಿಲಿಯನ್ ಡಾಲರ್ ಗಳ ಸಾಲ
    * ಅದಾನಿ ಗ್ರೂಪ್‌ನ ಖಾಸಗಿ ಕುಟುಂಬ ಹೂಡಿಕೆ ಕಚೇರಿಯ ಮುಖ್ಯಸ್ಥರಿಂದ ನಿಯಂತ್ರಿಸಲ್ಪಡುವ ಮಾರಿಷಸ್ ಘಟಕದಿಂದ 692.5 ಮಿಲಿಯನ್ ಡಾಲರ್ ಗಳ ಹೂಡಿಕೆ
    * ಇತಿಹಾಸದಲ್ಲಿ ಅತ್ಯಂತ ಕುಖ್ಯಾತ ಅಂತಾರಾಷ್ಟ್ರೀಯ ವಂಚನೆ ಮತ್ತು ಮನಿ ಲಾಂಡರಿಂಗ್ ಹಗರಣಗಳಲ್ಲಿ (Money laundering scandals) ಒಂದಾದ 1MDB ಹಗರಣದಲ್ಲಿ ಭಾಗಿಯಾಗಿದ್ದ Amicorp ನ ಸಹಾಯದಿಂದ ಹಲವಾರು ಶಂಕಿತ ಸ್ಟಾಕ್ ಪಾರ್ಕಿಂಗ್ ಘಟಕಗಳ ರಚನೆ, ಇತ್ಯಾದಿ.

    ಚೀನಾ ದೇಶದ ಚಾಂಗ್ ಚುಂಗ್-ಲಿಂಗ್ (Chang Chung-Ling) ಎನ್ನುವವರೊಂದಿಗೆ ಅದಾನಿ ಸಂಸ್ಥೆಯು ಸಂಬಂಧ ಹೊಂದಿದೆ. ಭಾರತದ ಅತಿ ದೊಡ್ಡ ಲಂಚದ ಹಗರಣಗಳಲ್ಲಿ ಒಂದಾದ ಅಗುಸ್ಟಾವೆಸ್ಟ್‌ಲ್ಯಾಂಡ್ ಹಗರಣದಲ್ಲಿ (AgustaWestland scandal) ಇದೇ ಚಾಂಗ್ ಚುಂಗ್-ಲಿಂಗ್ ಭಾರೀ ಭ್ರಷ್ಟಾಚಾರದ ಯೋಜನೆಯ ಭಾಗವಾಗಿದ್ದರು ಎಂದು ಹೇಳಲಾಗಿದೆ. ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರಬಲ್ಲ ಇಂಥ ಸಂಬಂಧದ ಬಗ್ಗೆಯೂ ಹಿಂಡೆನ್‌ಬರ್ಗ್ ಪ್ರಶ್ನಿಸಿತ್ತು.

    ‘ಪ್ರಸ್ತಾಪಿಸಿದ 88 ವಿಷಯಗಳಲ್ಲಿ, ಸುಮಾರು 62 ಪ್ರಶ್ನೆಗಳಿಗೆ ಅದಾನಿ ಸಂಸ್ಥೆಯು ಸ್ಪಷ್ಟವಾದ ಮತ್ತು ಸಮರ್ಪಕವಾದ ಉತ್ತರಗಳನ್ನು ನೀಡಲಿಲ್ಲ. ಉತ್ತರಿಸಿದ 26 ಪ್ರಶ್ನೆಗಳಲ್ಲಿ, ಉತ್ತರಗಳಿಗಿಂತ ಹೆಚ್ಚಾಗಿ ಆರೋಪಗಳಿಗೆ ವಾದಗಳನ್ನೇ ಮಂಡಿಸಿದೆ’ ಎಂದು ಹಿಂಡೆನ್‌ಬರ್ಗ್ ಪ್ರತ್ಯಾರೋಪವನ್ನು ಮಾಡಿದೆ.

    ಹೀಗೆ ಉದಾಹರಣೆ ಸಮೇತ, ಹಲವು ಸಂಶಯಾಸ್ಪದ ವಿಷಯಗಳ ಕುರಿತು ಹಿಂಡೆನ್‌ಬರ್ಗ್ ಪ್ರಶ್ನೆಗಳನ್ನು ಕೇಳಿತ್ತು. ಆದರೆ ಬಹುತೇಕ ಯಾವ ಆರೋಪಗಳನ್ನೂ ಸಮರ್ಥವಾಗಿ ಸಮರ್ಥಿಸಿಕೊಳ್ಳದೆ, ಪರೋಕ್ಷವಾಗಿ ಹಿಂಡೆನ್‌ಬರ್ಗ್ ಸಂಸ್ಥೆಯ ಆಪಾದನೆಗಳನ್ನು ಒಪ್ಪಿಕೊಂಡ ಆರೋಪವನ್ನು ಅದಾನಿ ಸಂಸ್ಥೆಯು ಎದುರಿಸುತ್ತಿದೆ.

    Verbattle
    Verbattle
    Verbattle
    Adani Group allegations Business Gautam Adani Hindenburg Internantional News ITI m mi NDA New York News stock market ಅದಾನಿ ಕಾನೂನು ನ್ಯಾಯ ಲಂಚ ವಾಣಿಜ್ಯ
    Share. Facebook Twitter Pinterest LinkedIn Tumblr Email WhatsApp
    Previous Articleನಾಳೆಯಿಂದ ಕಸ ವಿಲೇವಾರಿಯಲ್ಲಿ ವ್ಯತ್ಯಯ
    Next Article ನಿರೀಕ್ಷೆ ಹುಸಿಗೊಳಿಸಿದ Budget
    vartha chakra
    • Website

    Related Posts

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    January 23, 2026

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    January 23, 2026

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    January 23, 2026

    Leave A Reply Cancel Reply

    Verbattle
    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    ಜನರ ಆಸ್ತಿ ಕಾರ್ಪೊರೇಟ್ ಪಾಲು: ಇದು ಅಭಿವೃದ್ಧಿಯೋ ಅಥವಾ ಅಪಾಯದ ಮುನ್ಸೂಚನೆಯೋ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • dostavka_dwPl on ಬೇಸಿಗೆಯಲ್ಲಿ ರಾಜ್ಯಕ್ಕೆ ಎಷ್ಟು ವಿದ್ಯುತ್ ಬೇಕು ಗೊತ್ತಾ.
    • mine_prSa on ಅಭಿಮಾನಿಯನ್ನೇ ಕೊಲೆ ಮಾಡಿಸಿದ್ರಾ ನಟ ದರ್ಶನ್.?
    • dostavka_ioPl on Adani ಅಕ್ರಮದ ವಿರುದ್ಧ ಸ್ಫೋಟಿಸಿದ ರೊಚ್ಚು
    Latest Kannada News

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    January 23, 2026

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    January 23, 2026

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    January 23, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.