ಬೆಂಗಳೂರು: ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಶುಭ ಸುದ್ದಿ ನೀಡಿದೆ. ಪಿಯುಸಿಗೆ ತತ್ಸಮಾನವಾಗಿ ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ವಿದ್ಯಾರ್ಹತೆಯನ್ನೂ ಪರಿಗಣಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಎಲ್ಲಾ ಸರ್ಕಾರಿ ಹುದ್ದೆಗಳಿಗೂ ಇದು ಅನ್ವಯಿಸಲಿದೆ.
ಹೀಗಾಗಿ ಡಿಪ್ಲೊಮಾ, ಐಟಿಐ, ಜೆಓಸಿ ಸೇರಿದಂತೆ ವಿವಿಧ ವೃತ್ತಿಪರ ಶಿಕ್ಷಣ ಕೋರ್ಸ್‌ಗಳು ಇನ್ಮುಂದೆ ಪಿಯುಸಿಗೆ ತತ್ಸಮಾನ ಎಂದು ಪರಿಗಣನೆಯಾಗಲಿವೆ. ಈ ವೃತ್ತಿಪರ ಶಿಕ್ಷಣ ಕೋರ್ಸ್‌ಗಳನ್ನು ಪಡೆದು ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗೆ ಆಯ್ಕೆಯಾಗಿರುವವರನ್ನು ಸೇವೆಗೆ ನಿಯೋಜನೆ ಮಾಡುವಂತೆ ಒಳಾಡಳಿತ ಇಲಾಖೆಯ ಅಪಾರ ಕಾರ್ಯದರ್ಶಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.