ಬೆಳಕಿನ ಹಬ್ಬ ದೀಪಾವಳಿ ಮನೆ ಮನೆಗಳಲ್ಲಿ ಸಂಭ್ರಮ ತರುವ ಸುಂದರ ಹಬ್ಬ.ಈ ಹಬ್ಬದ ಸಡಗರಕ್ಕೆ ಈ ಬಾರಿ ಗ್ರಹಣದ ಅಡಚಣೆ ಎದುರಾಗಿದೆ ಅದರಲ್ಲೂ ಲಕ್ಷ್ಮೀ ಪೂಜೆಯಂದು ಗ್ರಹಣವಿರುವುದರಿಂದ ಅನೇಕರಲ್ಲಿ ಆತಂಕ ಕಾಡುತ್ತಿದೆ.ಹಬ್ಬ ಮಾಡಬೇಕಾ..ಬೇಡವಾ..ಲಕ್ಷ್ಮಿ ಪೂಜೆ ಮಾಡಬಹುದಾ ಅಥವಾ ಮಾಡಬಾರದಾ..ಮಾಡಿದರೆ ಎಷ್ಟು ಹೊತ್ತಿಗೆ ಮಾಡಬೇಕು ಎಂಬ ಬಗ್ಗೆ ಹಲವರಲ್ಲಿ ಸಂದೇಹಗಳಿವೆ.
ಈ ಪ್ರಶ್ನೆಗೆ ಉತ್ತರ ಬೇಕಾದರೆ,ಈ ಸ್ಟೋರಿನಾ ನೋಡಿ, ಹಾಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ..
ದೀಪಾವಳಿ ಅಮವಾಸ್ಯೆ ಅಕ್ಟೋಬರ್ 25 ರಂದು ಸೂರ್ಯ ಗ್ರಹಣವಿದೆ ಭಾರತೀಯ ಕಾಲಮಾನದ ಪ್ರಕಾರ ಗ್ರಹಣ ಆರಂಭವಾಗುವುದು 25ರ ಮಧ್ಯಾಹ್ನ 2ಗಂಟೆ 28ನಿಮಿಷಕ್ಕೆ.ಈ ಗ್ರಹಣದ
ಮಧ್ಯಕಾಲ4 ಗಂಟೆ 30 ನಿಮಿಷ ಹಾಗೂ ,ಮೋಕ್ಷಕಾಲ 6 ಗಂಟೆ 32ನಿಮಿಷ ಎಂದು ಲೆಕ್ಕ ಹಾಕಲಾಗಿದೆ
ಈ ಗ್ರಹಣವು ತುಲಾ ರಾಶಿಯ ಸ್ವಾತಿ ನಕ್ಷತ್ರದಲ್ಲಿ ಗೋಚರಿಸುತ್ತದೆ, ಅಲ್ಲಿ ಸೂರ್ಯನು ನೀಚ ಸ್ಥಾನದಲ್ಲಿರುತ್ತಾನೆ ಎಂದು ಜ್ಯೋರ್ತಿವಿಜ್ಞಾನಿಗಳು ಹೇಳಿದ್ದಾರೆ
ಹಾಗಾದರೆ ಈ ಗ್ರಹಣದ ಶುಭಾಶುಭ ಫಲಗಳು ಎಂದರೆ. ಸೂರ್ಯನು ನೀಚ ಸ್ಥಾನದಲ್ಲಿರುವಾಗ ,ರಾಜಕೀಯದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುತ್ತವೆ ಎನ್ನುತ್ತಾರೆ ಜ್ಯೋತಿಷಿಗಳು.
ಪ್ರಪಂಚದ ಹಲವು ಕಡೆ ಯುದ್ಧಗಳಾಗುವುವು ಇದರ ಪರಿಣಾಮ ಇಡೀ ಪ್ರಪಂಚದಲ್ಲಿ ಉಂಟಾಗಲಿದೆ ಆರ್ಥಿಕ ಕುಸಿತ,ಹಣದುಬ್ಬರ ಹೆಚ್ಚಳವಾಗಲಿದೆ ಆಹಾರ ಪದಾರ್ಥಗಳ ಅಭಾವ ,ಧಾರ್ಮಿಕ ಘರ್ಷಣೆ ಹೆಚ್ಚಾಗುವುದು. ಚಂಡಮಾರುತ ಭಾರಿ ಮಳೆ,ಪ್ರವಾಹ ಸ್ಥಿತಿಯಿಂದ ಬೆಳೆ ನಾಶವಾಗುವುದು,ಇದರಿಂದಾಗಿ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಲಿದೆ ವಿಮಾನಗಳ ಅಪಘಾತ ಜಾಸ್ತಿ ಯಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಅದರೆ ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲವಾದ್ದರಿಂದ ಹಬ್ಬದ ಆಚರಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಲಕ್ಷ್ಮಿ ಪೂಜೆ ಯಾವದಿನ ಮಾಡಬೇಕು ಎಂದು ಯೋಚನೆ ಮಾಡುವವರು 24 ರಂದು ಸಂಜೆ ಐದು ಗಂಟೆಯಿಂದ ಮಾರನೆಯ ದಿನ ಅಂದರೆ 25 ರ ಸಂಜೆ ನಾಲ್ಕು ಗಂಟೆಯವರೆಗೆ ಮಾಡಬಹುದು.
ಇದು ಬೇಡ ಎನ್ನುವವರು ,25 ನೇ ತಾರೀಕು ಸೂರ್ಯಗ್ರಹಣ 6.32 ನಿಮಿಷಕ್ಕೆ ಮುಗಿಯುತ್ತದೆ ಇದಾದ ಮೇಲೆ ಪೂಜೆ ಮಾಡೋಣಾ ಅಂದು ಕೊಳ್ಳುತ್ತಾರೆ, ಆದರೆ ಹೀಗೆ ಮಾಡಿದರೆ ಅಮಾಸ್ಯೆ ಸಿಗುವುದಿಲ್ಲ ,ಇದರಿಂದ ಪೂಜೆಮಾಡಿ ಪ್ರಯೋಜನ ಸಿಗುವುದಿಲ್ಲ ,ಅದರಿಂದ ಪೂಜೆ ಮಾಡುವಂತಹ ಸಮಯ ಹಾಗು ಲಕ್ಷ್ಮಿಯನ್ನು ಕೂಡಿಸುವ ಸಮಯ ನೋಡಿ ಕೂಡಿಸಿದರೆ ಪೂಜೆಯ ಫಲ ಸಿಗುತ್ತದೆ .ಮನೆಯಲ್ಲಿ ಲಕ್ಷ್ಮಿಯನ್ನು ಕೂಡಿಸುವವರು 24 ರಂದು ಸಾಧ್ಯವಾಗುವುದಿಲ್ಲ ಆದ್ದರಿಂದ 25 ರ ತಾರೀಕು ಮಂಗಳವಾರ ಮುಂಜಾನೆ 6 ಗಂಟೆ 30 ನಿಮಿಷದಿಂದ 7ಗಂಟೆ 30 ನಿಮುಷದ ಸಮಯದಲ್ಲಿ ತುಂಬಾ ಒಳ್ಳೆಯ ಲಗ್ನವಿದೆ ಈ ಲಗ್ನದಲ್ಲಿ ಲಕ್ಷ್ಮಿ ಪೂಜೆ ಮಾಡುವುದರಿಂದ ತುಂಬಾ ಒಳ್ಳೆಯ ಫಲಿತಾಂಶ ಸಿಗುತ್ತದೆ ಇದರಿಂದ ನಿಮಗೆ ಶುಕ್ರನ ಬಲ ಬರುತ್ತದೆ ,ನಿಮ್ಮ ಜೀವನದಲ್ಲಿ ಆರ್ಥಿಕ ಅಭಿವೃದ್ಧಿ ಯಾಗುತ್ತದೆ ,ಹಾಗು ಒಳ್ಳೆಯ ಬೆಳವಣಿಗೆಯಾಗುತ್ತದೆ ಎಂದು ಹೇಳುತ್ತಾರೆ.
ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುವುದಿಲ್ಲ, ಆದ್ದರಿಂದ ಇದು ದೀಪಾವಳಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುತ್ತಾರೆ.