Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಡಿಕೆ ಸುರೇಶ್ ಮುಂದಿನ ಎಲೆಕ್ಷನ್ ನಲ್ಲಿ ಸ್ಪರ್ಧೆ ಮಾಡೋಲ್ಲ!
    ರಾಜಕೀಯ

    ಡಿಕೆ ಸುರೇಶ್ ಮುಂದಿನ ಎಲೆಕ್ಷನ್ ನಲ್ಲಿ ಸ್ಪರ್ಧೆ ಮಾಡೋಲ್ಲ!

    vartha chakraBy vartha chakraJune 18, 2023No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಜೂ. 18- ಅಚ್ಚರಿಯ ಹಾಗೂ ಹಠಾತ್ ರಾಜಕೀಯ ವಿದ್ಯಮಾನವೊಂದರಲ್ಲಿ ಸಂಸದ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸೋದರ ಡಿಕೆ ಸುರೇಶ್ ಅವರು ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಾಗಿ ಘೋಷಿಸಿದ್ದಾರೆ.
    ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಎರಡು ಅವಧಿಗೆ ಸಂಸದರಾಗಿ ಕೆಲಸ ಮಾಡಿರುವ ಅವರು ಇತ್ತೀಚೆಗೆ ತಮ್ಮ ಸೋದರನಿಗೆ ಮುಖ್ಯಮಂತ್ರಿ ಹುದ್ದೆ ಸಿಗಬೇಕೆಂದು ಪ್ರಬಲ ಲಾಬಿ ನಡೆಸಿದ್ದರು. ಈ ವೇಳೆ ಅವರು ನೀಡಿದ ಕೆಲವು ಹೇಳಿಕೆಗಳು ತೀವ್ರ ವಿವಾದಕ್ಕೆ ಕಾರಣವಾಗಿದ್ದವು. ಇದು ಇನ್ನು ಹಸಿರಾಗಿರುವಾಗಲೇ ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಾಗಿ ಅವರು ಘೋಷಿಸಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
    ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜಕಾರಣದಲ್ಲಿ ನೆಮ್ಮದಿ ಎನ್ನುವುದೇ ಇಲ್ಲ. ರಾಜಕೀಯ ಅಂದರೆ ಹೊರಗೆ ಜನರ ಬಳಿಯೂ ನೆಮ್ಮದಿ ಇಲ್ಲ. ಜೊತೆಗೆ ಇರುವವರ ಬಳಿಯೂ ನೆಮ್ಮದಿ ಇಲ್ಲ. ರಾಜಕಾರಣ ಸಾಕಾಗಿದೆ. ಹೀಗಾಗಿ ರಾಜಕಾರಣದಿಂದ ದೂರ ಉಳಿಯುತ್ತೇನೆ ಎಂದರು.
    ಕನಕಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾರಾದರೂ ಸ್ಪರ್ಧೆ ಮಾಡಲಿ ನಾನು ನನ್ನ ಮನಸ್ಸಿನಲ್ಲಿರುವ ವಿಚಾರ ಹೇಳಿದ್ದೇನೆ ಹಿರಿಯ ನಾಯಕರು ಈ ಕುರಿತಂತೆ ಒಟ್ಟಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
    ನಾನು ನನ್ನ ಮನಸ್ಸಿನರುವ ವಿಚಾರವನ್ನು ಕಾರ್ಯಕರ್ತರ ಬಳಿ ತಿಳಿಸಿದ್ದೇನೆ. ಬೇರೆಯವರಿಗೆ ಅವಕಾಶ ಆಗಬೇಕು ಎನ್ನುವುದು ನನ್ನ ಉದ್ದೇಶ. ಸಾಕಷ್ಟು ಜನ ನಾಯಕರು ಇದ್ದಾರೆ. ನಾನು ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ದವಾಗಿದ್ದೇನೆ ಎಂದು ಸ್ಪಷ್ಟಪಡಿಸಿಸದರು.
    ಪಕ್ಷವನ್ನು ಅಧಿಕಾರಕ್ಕೆ ತರಲು ಕಷ್ಟ ಪಟ್ಟವರು ಸಂತೋಷವಾಗಿದ್ದಾರೆ. ಅವರೆಲ್ಲಾ ಅಧಿಕಾರದಲ್ಲಿ ಇದ್ದಾರೆ. ಸಂತೋಷವಾಗಿ ಅನುಭವಿಸಲಿ. ನನಗೆ ರಾಜಕಾರಣ ಬೇಡ ಎಂದರು
    ಸಂಸದನಾಗಿ ಇನ್ನೂ ಹನ್ನೊಂದು ತಿಂಗಳ ಅವಕಾಶ ಇದೆ. ಕ್ಷೇತ್ರದ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ. ಪಕ್ಷ ಸಂಘಟನೆ ಒಂದು ಭಾಗ. ಚುನಾವಣಾ ಸ್ಪರ್ಧೆ ಮಾಡಿ ಗೆಲ್ಲುವುದು ಇನ್ನೊಂದು ಭಾಗ. ನನಗೆ ಕೆಲಸ ಮಾಡಿರುವ ಬಗ್ಗೆ ತೃಪ್ತಿಯಿದೆ. ಸಾಕಷ್ಟು ಜನ ನಾಯಕರು ಇದ್ದಾರೆ, ಪಕ್ಷ ಸಂಘಟನೆ ಮಾಡಿರುವ ಹಿರಿಯರು ಇದ್ದಾರೆ. ಅವರಿಗೆ ಅವಕಾಶ ಸಿಗಬೇಕು. ನನಗೆ ಬೇಸರವಿಲ್ಲ, ಕ್ಷೇತ್ರದ ಜನರ ಜೊತೆ ಖುಷಿಯಿಂದ ಕೆಲಸ ‌ಮಾಡುತ್ತಿದ್ದೇನೆ. ವೈರಾಗ್ಯ ಎನ್ನುವುದು ನನಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
    ಪಕ್ಷ ಅಧಿಕಾರಕ್ಕೆ ಬರಲು ನಮ್ಮ ಶ್ರಮವಿಲ್ಲ. ಅಧಿಕಾರದಲ್ಲಿರುವವರ ಶ್ರಮವಿದೆ. ಎಲ್ಲಾ ಸಚಿವರು, ಶಾಸಕರ ಶ್ರಮವಿದೆ. ನೆಮ್ಮದಿಯಾಗಿ ಎಂಜಾಯ್ ಮಾಡಲಿ. ನನಗೆ ರೆಸ್ಟ್ ಬೇಕು, ರಾಜಕೀಯ ಗೊಂದಲಾಟವಿದೆ. ರಾಜಕೀಯ ಸರಿ ಎನ್ನಿಸುವುದಿಲ್ಲ, ಪಕ್ಕಾ ರಾಜಕಾರಣಿಗೆ ಸೆಟ್ ಆಗಲಿದೆ. ರಾಜಕಾರಣಿಗಳ ಬಗ್ಗೆ ಜನರಲ್ಲೂ ಮರ್ಯಾದೆ ಇಲ್ಲ. ಒಳಗಡೆಯೂ ಮರ್ಯಾದೆ ಇಲ್ಲ. ಇಲ್ಲಿ ಕೆಲಸ ಮಾಡಲು ನೆಮ್ಮದಿಯಿಲ್ಲ ಎಂದು ಹೇಳಿದರು

    ಕಾಂಗ್ರೆಸ್ ನ್ಯಾಯ ರಾಜಕೀಯ
    Share. Facebook Twitter Pinterest LinkedIn Tumblr Email WhatsApp
    Previous ArticleDK ಶಿವಕುಮಾರ್ ಬಗ್ಗೆ ವಿನಯ್ ಗುರೂಜಿ ನುಡಿದ ಭವಿಷ್ಯ ನಿಜವಾಗುತ್ತಾ?
    Next Article Accident city ಬೆಂಗಳೂರು-ಪ್ರತಿನಿತ್ಯ ಮೂವರು ಬಲಿ
    vartha chakra
    • Website

    Related Posts

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    July 26, 2025

    FIR ದಾಖಲಿಸಲು ಇದು ಕಡ್ಡಾಯ !

    July 26, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    July 23, 2025

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • LarryOrien on ಮನೋರಂಜನ್ ಜನ್ಮ ಜಾಲಾಡುತ್ತಿರುವ ಪೊಲೀಸ್ | Manoranjan
    • carexpert-177 on ಕಾಡು ಕಡಿದವರನ್ನು ಹುಡುಕಿ | Uttara Kannada
    • carexpert-218 on ವಿಶ್ವ ಮಧುಮೇಹ ದಿನಾಚರಣೆ, ಸಾರ್ವಜನಿಕರಿಗೆ ಅರಿವಿನ ಜಾತ
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    July 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    July 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    July 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe