ಬೆಂಗಳೂರು – ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿ ಅನುಷ್ಠಾನದ ಕಸರತ್ತಿನ ನಡುವೆ ವಿಶೇಷವಾದ ಒಂದು ಮನವಿ ಬಂದಿದೆ. ಗ್ಯಾರಂಟಿಗಳ ಅನುಷ್ಠಾನದಿಂದ ರಾಜ್ಯ ಸರ್ಕಾರಕ್ಕೆ ಭಾರೀ ಆರ್ಥಿಕ ಹೊರೆ ಬೀಳುತ್ತಿದೆ. ಸದ್ಯ ಕ್ರೂಢೀಕರಿಸಲಾಗುತ್ತಿರುವ ಎಲ್ಲಾ ಸಂಪನ್ಮೂಲ ಈ ಯೋಜನೆಗಳ ಅನುಷ್ಠಾನಕ್ಕೆ ವಿನಿಯೋಗವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಇತರೆ ಅಭಿವೃದ್ಧಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲದ ಕೊರತೆ ಉಂಟಾಗುವ ಅಪಾಯ ಎದುರಾಗಿದೆ ಇದನ್ನು ನಿವಾರಿಸುವ ದೃಷ್ಟಿಯಿಂದ ಸರ್ಕಾರ ಎಲ್ಲೆಲ್ಲಿ ಅವಕಾಶಗಳಿದೆಯೋ ಅದನ್ನು ಬಳಸಿ ಆದಾಯ ಕ್ರೋಡಿಕರಣಕ್ಕೆ ಚಿಂತನೆ ನಡೆಸಿದೆ.
ಇದರಲ್ಲಿ ಪ್ರಮುಖವಾಗಿ ಅಬಕಾರಿ ವಲಯದಿಂದ ಹೆಚ್ಚಿನ ತೆರಿಗೆ ಸಂಗ್ರಹಿಸಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ. ಹೀಗಾಗಿ ಅಬಕಾರಿ ವಲಯದಲ್ಲಿ ಯಾವ ವಿಭಾಗದಿಂದ ಎಷ್ಟು ಸಂಪನ್ಮೂಲ ಸಂಗ್ರಹಿಸಬಹುದು ಎಂಬ ಲೆಕ್ಕಾಚಾರ ಮಾಡಿದ್ದು ಇದೀಗ ಲಿಕ್ಕರ್ ಲೈಸೆನ್ಸ್ ಫೀಸ್ ಅನ್ನು ಶೇಕಡಾ 25 ರಷ್ಟು ಹೆಚ್ಚಿಸಲು ಚಿಂತನೆ ನಡೆಸಿದೆ. ಇದರಿಂದ ವಾರ್ಷಿಕ 175 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇದೆ. 2016 ರಿಂದ ಲಿಕ್ಕರ್ ಲೈಸೆನ್ಸ್ ದರ ಹೆಚ್ಚಿಸಿಲ್ಲ. ಹೀಗಾಗಿ ಲೈಸೆನ್ಸ್ ಶುಲ್ಕ ಹೆಚ್ಚಳ ಮಾಡಲು ಮುಂದಾಗಿದೆ
ಇದಲ್ಲದೆ ದೇಶಿಯವಾಗಿ ತಯಾರಾಗುವ ವಿದೇಶಿ ಮಧ್ಯದ ಮೇಲೆ ಶೇಕಡಾ 10 ರಿಂದ 15 ರಷ್ಟು ದರ ಹೆಚ್ಚಳ ಮಾಡಲು ಸಿದ್ಧತೆ ನಡೆಸಿದೆ ಈ ಪ್ರಮಾಣದಲ್ಲಿ ದರ ಹೆಚ್ಚಳ ಮಾಡಿದರೇ ಐಎಂಎಫ್ ಎಲ್ ನಿಂದ ಶೇಕಡಾ ಸುಮಾರು 3 ಸಾವಿರ ಕೋಟಿ ಆದಾಯ ಬರುವ ನಿರೀಕ್ಷೆ ಇದೆ.
ಇದೇ ಮಾನದಂಡವನ್ನು ಅನುಸರಿಸಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಬಿಯರ್ ಮೇಲೆ ಕೊಂಚ ಪ್ರಮಾಣದ ತೆರಿಗೆ ವಿಧಿಸಲು ಮುಂದಾಗಿದೆ ಅಧಿಕಾರಿಗಳು ಈ ಸಂಬಂಧ ವರದಿಯನ್ನು ನೀಡಿದ್ದು
ಬಿಯರ್ ದರವನ್ನ ಶೇಕಡಾ 20 ಪರ್ಸೆಂಟ್ ಹೆಚ್ಚಳ ಮಾಡಿದರೇ, ಇದರಿಂದ ವಾರ್ಷಿಕ 500 ಕೋಟಿ ಆದಾಯ ಬರಬಹುದೆಂದು ಅಂದಾಜಿಸಲಾಗಿದೆ.
ಒಟ್ಟಾರೆಯಾಗಿ ರಾಜ್ಯ ಸರ್ಕಾರ 2022-23 ರ ಅಬಕಾರಿ ವರ್ಷದಲ್ಲಿ ಸರ್ಕಾರ ಈಗಾಗಲೇ 35 ಸಾವಿರ ಕೋಟಿ ಆದಾಯದ ಟಾರ್ಗೆಟ್ ನೀಡಿತ್ತು. ಇದೀಗ 2023-24ರ ಸಾಲಿನಲ್ಲಿ ಸುಮಾರು 39 ಸಾವಿರ ಕೋಟಿ ಆದಾಯ ಸಂಗ್ರಹಿಸುವ ಗುರಿ ನೀಡುವ ಸಾಧ್ಯತೆ ಇದೆ ಇದು ಇದೀಗ ಮತ್ತಷ್ಟು ಹೆಚ್ಚಳಗೊಳ್ಳುವ ಸಾಧ್ಯತೆ ಇದೆ.
ಪ್ರತಿ ವರ್ಷ ಜುಲೈ 1 ರಿಂದ ಅಬಕಾರಿ ವರ್ಷ ಆರಂಭವಾಗಲಿದೆ ಹೀಗಾಗಿ ದರ ಹೆಚ್ಚಳ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸುತ್ತಿದ್ದು ಬಜೆಟ್ ನಲ್ಲಿ ವಿವರ ಪ್ರಕಟಿಸುವ ನಿರೀಕ್ಷೆ ಇದೆ.
ಈ ಮಾಹಿತಿ ಹೊರಬೀಳುತ್ತಿದ್ದಂತೆ ಮಧ್ಯಪಾನ ಪ್ರಿಯರ ಸಂಘ ಮುಖ್ಯ ಮಂತ್ರಿಗಳಿಗೆ ಪತ್ರವೊಂದನ್ನು ರವಾನಿಸಿದೆ. ಅದರಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನೆಪದಲ್ಲಿ ಮಧ್ಯ ಮಾರಾಟ ದರ ಹೆಚ್ಚಳ ಮಾಡಬೇಡಿ, ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಈಗಾಗಲೇ ಮಧ್ಯದ ಮೇಲೆ ವಿಪರೀತ ತೆರಿಗೆ ವಿಧಿಸಲಾಗಿದೆ. ಈಗ ಮತ್ತಷ್ಟು ತೆರಿಗೆ ವಿಧಿಸಿದರೆ ಮಾರಾಟ ದರ ಹೆಚ್ಚಳವಾಗಲಿದೆ ಇದರಿಂದ ತಾವು ಇನ್ನಷ್ಟು ಹೆಚ್ಚಿನ ಬೆಲೆ ತೆತ್ತು ಮಧ್ಯ ಖರೀದಿಸಬೇಕು. ಇವುಗಳ ದರ ಹೆಚ್ಚಳವಾದರೆ ನಮ್ಮ ದೈನಂದಿನ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಸಂಸಾರ ನಿರ್ವಹಣೆ ಕಷ್ಟವಾಗಲಿದೆ ಆದ್ದರಿಂದ ದಯವಿಟ್ಟು ತಾವು ಮಧ್ಯ ಮಾರಾಟ ದರ ಹೆಚ್ಚಳ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಮಧ್ಯ ಮಾರಾಟ ದರ ಹೆಚ್ಚಳ ಮಾಡಿದರೆ ಸಂಸಾರ ನಿರ್ವಹಣೆ ಮೇಲೆ ದುಷ್ಪರಿಣಾಮ ಬೀರಲಿದೆ ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು ಎಂದು ಕೋರಿದ್ದಾರೆ.
Previous ArticleExpress ಹೆದ್ದಾರಿ ಅಲ್ಲ ಯಮ ಸ್ವರೂಪಿ ದಾರಿ
Next Article ಗೃಹಜ್ಯೋತಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತಾ?